ಅಮೆರಿಕದ ಮೇಲೆ ಚೀನಾ, ಇಯು ಜಂಟಿ ತೆರಿಗೆ ದಾಳಿ

KannadaprabhaNewsNetwork | Published : Apr 10, 2025 2:00 AM

ಸಾರಾಂಶ

ವಿಶ್ವದ 60 ದೇಶಗಳ ಮೇಲೆ ಆಮದು ಸುಂಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಘೋಷಣೆ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕಠಿಣ ಕ್ರಮ ಬುಧವಾರದಿಂದ ಜಾರಿಗೆ ಬಂದಿದೆ. ಇದರ ಬೆನ್ನಲ್ಲೇ ಅಮೆರಿಕದಿಂದ ಕಂಡು ಕೇಳರಿಯದ ರೀತಿಯಲ್ಲಿ ಶೇ.104ರಷ್ಟು ಆಮದು ಸುಂಕಕ್ಕೆ ಒಳಗಾಗಿರುವ ಚೀನಾ, ಶೇ.84ರಷ್ಟು ಪ್ರತಿತೆರಿಗೆ ಘೋಷಿಸಿದೆ. ಯುರೋಪ್‌ ಒಕ್ಕೂಟ ಕೂಡ ಅಮೆರಿಕದಿಂದ ಆಮದಾಗುವ 23 ಶತಕೋಟಿ ಡಾಲರ್‌ ಉತ್ಪನ್ನಗಳ ಮೇಲೆ ಹಂತ ಹಂತವಾಗಿ ಪ್ರತಿತೆರಿಗೆ ಹಾಕುವುದಾಗಿ ಘೋಷಿಸಿದೆ.

ಅಮೆರಿಕ ಉತ್ಪನ್ನಗಳ ಮೇಲೆ ಶೇ.84 ತೆರಿಗೆ: ಚೀನಾ ಘೋಷಣೆ

ಅಮೆರಿಕದ 22 ಶತಕೋಟಿ ಡಾಲರ್ ಉತ್ಪನ್ನಕ್ಕೆ ತೆರಿಗೆ: ಇಯು

==ಬೀಜಿಂಗ್‌/ಬ್ರಸೆಲ್ಸ್‌: ವಿಶ್ವದ 60 ದೇಶಗಳ ಮೇಲೆ ಆಮದು ಸುಂಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಘೋಷಣೆ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕಠಿಣ ಕ್ರಮ ಬುಧವಾರದಿಂದ ಜಾರಿಗೆ ಬಂದಿದೆ. ಇದರ ಬೆನ್ನಲ್ಲೇ ಅಮೆರಿಕದಿಂದ ಕಂಡು ಕೇಳರಿಯದ ರೀತಿಯಲ್ಲಿ ಶೇ.104ರಷ್ಟು ಆಮದು ಸುಂಕಕ್ಕೆ ಒಳಗಾಗಿರುವ ಚೀನಾ, ಶೇ.84ರಷ್ಟು ಪ್ರತಿತೆರಿಗೆ ಘೋಷಿಸಿದೆ. ಯುರೋಪ್‌ ಒಕ್ಕೂಟ ಕೂಡ ಅಮೆರಿಕದಿಂದ ಆಮದಾಗುವ 23 ಶತಕೋಟಿ ಡಾಲರ್‌ ಉತ್ಪನ್ನಗಳ ಮೇಲೆ ಹಂತ ಹಂತವಾಗಿ ಪ್ರತಿತೆರಿಗೆ ಹಾಕುವುದಾಗಿ ಘೋಷಿಸಿದೆ.

ಇದರಿಂದಾಗಿ ಮತ್ತೊಂದು ಜಾಗತಿಕ ತೆರಿಗೆ ಯುದ್ಧ ಅಧಿಕೃತವಾಗಿ ಆರಂಭವಾದಂತಾಗಿದೆ.

ಚೀನಾದಿಂದ ಶೇ.84 ತೆರಿಗೆ:

ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧ ತೀವ್ರಗೊಳ್ಳುತ್ತಿದ್ದಂತೆಯೇ, ಬೀಜಿಂಗ್ ಬುಧವಾರ ಅಮೆರಿಕದ ಸರಕುಗಳ ಮೇಲೆ ಶೇ. 84 ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದೆ. ಇದು ಹಿಂದೆ ಘೋಷಿಸಲಾದ ಶೇ. 34ಕ್ಕಿಂತ ಗಮನಾರ್ಹ ಹೆಚ್ಚಳವಾಗಿದೆ.

ಮಂಗಳವಾರವಷ್ಟೇ ಟ್ರಂಪ್, ಚೀನಾ ಮೇಲೆ ಈ ಮೊದಲಿನ ಶೇ.54ಕ್ಕಿಂತ ಹೆಚ್ಚುವರಿಯಾಗಿ ಶೇ.50 ಸುಂಕ ಘೋಷಿಸಿದ್ದರು ಹಾಗೂ ಒಟ್ಟು ಸುಂಕವನ್ನು ಶೇ.104ಕ್ಕೆ ಹೆಚ್ಚಿಸಿದ್ದರು. ಇದರ ವಿರುದ್ಧ ಗುಡುಗಿರುವ ಚೀನಾ, ಈ ಹಿಂದಿನ ಶೇ.34ರಷ್ಟು ತೆರಿಗೆ ಹೇರಿಕೆಯನ್ನು ಶೇ.84ಕ್ಕೆ ಪರಿಷ್ಕರಿಸಿದೆ. ಏ.10ರಿಂದ ಇದು ಜಾರಿಗೆ ಬರಲಿದೆ ಎಂದು ಹೇಳಿದೆ.

‘ಅಮೆರಿಕದ ಶೇ.104 ತೆರಿಗೆಗೆ ಪ್ರತಿಯಾಗಿ ಚೀನಾ ದೃಢನಿಶ್ಚಯದ ಹಾಗೂ ಪರಿಣಾಮಕಾರಿ ಕ್ರಮ ಜರುಗಿಸಲಿದೆ’ ಎಂದೂ ಚೀನಾ ಹೇಳದೆ.

ಇಯು ಪ್ರತೀಕಾರ:

ಟ್ರಂಪ್‌ ಅವರ ತೆರಿಗೆ ಹೇರಿಕೆ ಕ್ರಮ ವಿರೋಧಿಸಿರುವ ಯುರೋಪ್‌ ಒಕ್ಕೂಟ (ಇಯು), 23 ಶತಕೋಟಿ ಡಾಲರ್ ಮೌಲ್ಯದ ಅಮೆರಿಕದ ಉತ್ಪನ್ನಗಳ ಮೇಲೆ ಹಂತ ಹಂತವಾಗಿ ತೆರಿಗೆ ಹೇರುವುದಾಗಿ ಘೋಷಿಸಿದೆ. ಏ.15, ಮೇ 15 ಹಾಗೂ ಡಿಸೆಂಬರ್ 1- ಹೀಗೆ 3 ಹಂತಗಳಲ್ಲಿ ತೆರಿಗೆ ಹಾಕಲಾಗುವುದು ಎಂದು ನಿರ್ಣಯಿಸಿದೆ.

ಅಮೆರಿಕದಿಂದ ಯುರೋಪ್‌ಗೆ ಸೋಯಾಬೀನ್, ಮೋಟಾರ್ ಸೈಕಲ್‌ಗಳು ಮತ್ತು ಸೌಂದರ್ಯ ಉತ್ಪನ್ನಗಳು ಸೇರಿ ಅನೇಕ ಉತ್ಪನ್ನಗಳು ರಫ್ತಾಗುತ್ತವೆ. ಆದರೆ ಅವುಗಳ ಮೇಲೆ ಎಷ್ಟು ಸುಂಕ ಹೇರಲಾಗುತ್ತದೆ ಎಂಬುದನ್ನು ಇ.ಯು. ಹೇಳಿಲ್ಲ.

==

ಔಷಧ ಕ್ಷೇತ್ರಕ್ಕೂ ಶೀಘ್ರ

ತೆರಿಗೆ: ಟ್ರಂಪ್‌ ಸುಳಿವುಭಾರತದ ಫಾರ್ಮಾ ಕಂಪನಿಗಳಲ್ಲಿ ಆತಂಕವಾಷಿಂಗ್ಟನ್‌: ಅಮೆರಿಕದ ಪ್ರತಿ ತೆರಿಗೆ ಬಿಸಿಯು ಇದೀಗ ಭಾರತದ ಫಾರ್ಮಾ (ಔಷಧ) ಕ್ಷೇತ್ರದ ಮೇಲೂ ಬೀಳುವುದು ಸ್ಪಷ್ಟವಾಗಿದೆ. ಈವರೆಗೆ ಫಾರ್ಮಾ ಕ್ಷೇತ್ರವನ್ನು ಪ್ರತಿ ತೆರಿಗೆಯಿಂದ ಹೊರಗಿಟ್ಟಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇದೀಗ ಆ ಕ್ಷೇತ್ರದ ಮೇಲೂ ಶೀಘ್ರದಲ್ಲಿ ತೆರಿಗೆ ಹೇರಲಿದ್ದೇನೆ ಎಂದಿದ್ದಾರೆ. ಭಾರತದಿಂದ 2,41,731 ಲಕ್ಷ ಕೋಟಿ ರು. ಔಷಧ ರಫ್ತು ಆಗುತ್ತಿದ್ದು, ಇದರಲ್ಲಿ ಅಮೆರಿಕದ ಶೇ.31 (75 ಸಾವಿರ ಕೋಟಿ ರು.) ಆಗಿದೆ.==

ತೆರಿಗೆ: ವಿದೇಶ ಬಗ್ಗೆ ಟ್ರಂಪ್‌ ಕೀಳು ನುಡಿಒಪ್ಪಂದಕ್ಕೆ ವಿದೇಶಗಳ ದುಂಬಾಲುವಾಷಿಂಗ್ಟನ್‌: ‘ಅಮೆರಿಕ ಹಾಕಿರುವ ಆಮದು ತೆರಿಗೆಗೆ ಥರಗುಟ್ಟಿರುವ ಹಲವು ದೇಶಗಳು ನಮ್ಮ ಜತೆಗೆ ತೆರಿಗೆ ಒಪ್ಪಂದ ಮಾಡಿಕೊಳ್ಳಿ ಎಂದು ನನಗೆ ದಂಬಾಲು ಬೀಳುತ್ತಿವೆ. ತೆರಿಗೆ ಒಪ್ಪಂದಕ್ಕಾಗಿ ಅವರ ನನ್ನ ಪೃಷ್ಠವನ್ನು ನೆಕ್ಕುತ್ತಿದ್ದಾರೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೀಳು ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರು ಪ್ರತಿ ತೆರಿಗೆ ಹೇರಿರುವ ದೇಶಗಳು ಯಾವ ರೀತಿ ಹತಾಶಗೊಂಡಿವೆ ಎಂಬುದರ ಕುರಿತು ವ್ಯಂಗ್ಯವಾಡಿದ್ದಾರೆ.==

ಟ್ರಂಪ್‌ ವಿರುದ್ಧ ಸಮರ:

ಭಾರತಕ್ಕೆ ಚೀನಾ ಕರೆನೆರೆ ಹೊರೆ ಒಂದಾಗಬೇಕು: ಕ್ಸಿನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಭಾರತದ ವಸ್ತುಗಳ ಮೇಲೆ ಶೇ.26 ಹಾಗೂ ಚೀನಾ ವಸ್ತುಗಳ ಮೇಲೆ ಕಂಡು ಕೇಳರಿಯದ ಶೇ.104 ಆಮದು ಸುಂಕ ಹೇರುತ್ತಿದ್ದಂತೆಯೇ, ‘ಭಾರತ-ಚೀನಾ ಒಟ್ಟಾಗಿ ಟ್ರಂಪ್‌ ವಿರುದ್ಧ ನಿಲ್ಲಬೇಕು’ ಎಂದು ಚೀನಾ ಆಗ್ರಹಿಸಿದೆ. ಈ ಮೂಲಕ ಶತ್ರುವಿನ ಶತ್ರು ಮಿತ್ರ ಎಂಬ ತತ್ವ ಪಾಲನೆಗೆ ಮುಂದಾಗಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ‘ಅಕ್ಕಪಕ್ಕದ ದೇಶಗಳು ಭಿನ್ನಮತ ಬಗೆಹರಿಸಿಕೊಂಡು ತಮ್ಮ ಬಾಂಧವ್ಯ ಬಲಪಡಿಸಿಕೊಳ್ಳಬೇಕು. ಪರಸ್ಪರ ವ್ಯಾಪಾರವನ್ನು ಬಾಂಧವ್ಯ ಹೆಚ್ಚಿಸಿಕೊಳ್ಳಬೇಕು’ ಎಂದಿದ್ದಾರೆ.

Share this article