ವಾಷಿಂಗ್ಟನ್: ಜಗತ್ತಿನ ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಂ, ಮೆಸೆಂಜರ್ ಹಾಗೂ ತ್ರೆಡ್ ಮಂಗಳವಾರ ತಾಂತ್ರಿಕ ಸಮಸ್ಯೆಗೆ ಒಳಗಾಗಿತ್ತು. ಹೀಗಾಗಿ ವಿಶ್ವಾದ್ಯಂತ ಕೋಟ್ಯಂತರ ಜನರು ಹಲವು ಗಂಟೆಗಳ ಕಾಲ ಈ ತಾಣಗಳಿಗೆ ಲಾಗಿನ್ ಆಗಲಾಗದೇ ಸಮಸ್ಯೆ ಎದುರಿಸುವಂತಾಯಿತು. ಕೆಲ ಜನರು ಅಕೌಂಟ್ ಹ್ಯಾಕ್ ಆಗಿದೆಯೇ ಎಂದು ಭಯಭೀತರಾದರು. ಇದನ್ನೇ ಲಾಭ ಪಡೆದ ಜನರು ಟ್ವೀಟರ್‌ನಲ್ಲಿ ಮೀಮ್ಸ್ ಮಳೆಗರೆದರು. ಇದೊಂದು ತಾಂತ್ರಿಕ ಸಮಸ್ಯೆಯಾಗಿದೆ, ಸಮಸ್ಯೆ ಶೀಘ್ರ ಬಗೆಹರಿಸಲಾಗುತ್ತದೆ ಎಂದು ಈ ತಾಣಗಳ ಮಾತೃಸಂಸ್ಥೆಯಾದ ಮೆಟಾ ತಿಳಿಸಿತು.