ಭಾರತದ 78ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಕ್ಷಣಾ ಸಚಿವಾಲಯದ ಸಹಯೋಗದೊಂದಿಗೆ ಯಾತ್ರಿಕರ ತಂಡವೊಂದು ಆಫ್ರಿಕಾ ಖಂಡದ ಅತಿ ಎತ್ತರದ ಶಿಖರವಾದ ಕಿಲಿಮಂಜಾರೋದ ಉಹುರುನಲ್ಲಿ 7,800 ಚದರ ಅಡಿ ವಿಸ್ತೀರ್ಣದ ಭಾರತದ ತ್ರಿವರ್ಣ ಧ್ವಜವನ್ನು ಆ.7ರಂದು ಹಾರಿಸಿ ದಾಖಲೆ ಸೃಷ್ಟಿಸಿದೆ.
ನವದೆಹಲಿ: ಭಾರತದ 78ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಕ್ಷಣಾ ಸಚಿವಾಲಯದ ಸಹಯೋಗದೊಂದಿಗೆ ಯಾತ್ರಿಕರ ತಂಡವೊಂದು ಆಫ್ರಿಕಾ ಖಂಡದ ಅತಿ ಎತ್ತರದ ಶಿಖರವಾದ ಕಿಲಿಮಂಜಾರೋದ ಉಹುರುನಲ್ಲಿ 7,800 ಚದರ ಅಡಿ ವಿಸ್ತೀರ್ಣದ ಭಾರತದ ತ್ರಿವರ್ಣ ಧ್ವಜವನ್ನು ಆ.7ರಂದು ಹಾರಿಸಿ ದಾಖಲೆ ಸೃಷ್ಟಿಸಿದೆ.
ಈ ಬಗ್ಗೆ ರಕ್ಷಣಾ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದ್ದು, ‘ಹಿಮಾಲಯ ಪರ್ವತಾರೋಹಣ ಸಂಸ್ಥೆಯ ದಿನ್ಯಾಂಗ್‌ಜನ್ ತಂಡವು ಈ ಸಾಧನೆ ಮಾಡಿದ್ದು, ಮುಂದಿನ ಪೀಳಿಗೆಯ ದಿವ್ಯಾಂಗರಿಗೆ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಸ್ಪೂರ್ತಿಯಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿತು.
ಊರುಗೋಲನ್ನೇ ಆಧಾರವಾಗಿಸಿಕೊಂಡು ಕ್ಯಾ। ಜೈ ಕೃಷ್ಣ ನೇತೃತ್ವದಲ್ಲಿ ಉದಯ್ ಕುಮಾರ್ ಸೇರಿದಂತೆ ಕೆಲ ವಿಕಲಾಂಗರು ಕಾಂಚನಜುಂಗ ರಾಷ್ಟ್ರೀಯ ಉದ್ಯಾನದಿಂದ ಮೌಂಟ್ ಕಿಲಿಮಂಜಾರೋಗೆ ತಲುಪಿ 15,500 ಅಡಿ ಎತ್ತರದಲ್ಲಿ ಧ್ವಜ ಹಾರಿಸಿ ಇತಿಹಾಸ ಸೃಷ್ಟಿಸಿದ್ದಾರೆ.
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.