ನ್ಯೂಯಾರ್ಕ್: ಬರುವ ಆಗಸ್ಟ್ ತಿಂಗಳಿನಲ್ಲಿ ಜಿ ಮೇಲ್ ಅನ್ನು ಗೂಗಲ್ ಬಂದ್ ಮಾಡಲಿದೆ ಎಂಬ ವದಂತಿಗಳಿಗೆ ಸ್ಪಷ್ಟನೆ ನೀಡಿರುವ ಗೂಗಲ್, ಇ-ಮೇಲ್ ಸೇವೆಯನ್ನು ನೀಡುತ್ತಿರುವ ಜಿ ಮೇಲ್ ಅನ್ನು ಸ್ಥಗಿತಗೊಳಿಸುತ್ತಿಲ್ಲ ಎಂದು ಶುಕ್ರವಾರ ಹೇಳಿದೆ.
ಜಿ ಮೇಲ್ ಅನ್ನು ಬಂದ್ ಮಾಡಲಾಗುತ್ತಿದೆ ಎಂದು ಸ್ವತಃ ಗೂಗಲ್ ತನ್ನ ಬಳಕೆದಾರರಿಗೆ ಮೇಲ್ ಮಾಡಿದೆ ಎಂಬ ನಕಲಿ ಸ್ಕ್ರೀನ್‌ಶಾಟ್ ಇತ್ತೀಚೆಗೆ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಬಳಿಕ ‘ತನ್ನ ಜಿ ಮೇಲ್ ಅನ್ನು ಈ ವರ್ಷದ ಆಗಸ್ಟ್‌ನಲ್ಲಿ ಗೂಗಲ್ ಸಂಸ್ಥೆ ಬಂದ್ ಮಾಡುತ್ತಿದೆ.
ಇನ್ನು ಮುಂದೆ ಅದು ಆ ಸೇವೆಯನ್ನು ನೀಡುವುದಿಲ್ಲ’ ಎಂಬ ಭಾರೀ ವದಂತಿಗಳು ಹಬ್ಬಿದ್ದವು. ಆದರೆ ಇದು ನಿಜವಲ್ಲ ಎಂಬುದನ್ನು ಸ್ವತಃ ಗೂಗಲ್ ತಿಳಿಸಿದೆ.
ವೈರಲ್ ಆಗಿದ್ದ ನಕಲಿ ಸ್ಕ್ರೀನ್‌ಶಾಟ್:‘ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಸಂಪರ್ಕಿಸುವ, ತಡೆರಹಿತ ಸಂವಹನವನ್ನು ಸಕ್ರಿಯಗೊಳಿಸುವ ಮತ್ತು ಲೆಕ್ಕವಿಲ್ಲದಷ್ಟು ಸಂಪರ್ಕಗಳನ್ನು ಬೆಳೆಸುವ ಗೀಮೇಲ್‌ನ ಪ್ರಯಾಣವು ಕೊನೆಗೊಳ್ಳುತ್ತಿದೆ.
ಆಗಸ್ಟ್ 1, 2024 ರಿಂದ ಜೀಮೇಲ್ ಅಧಿಕೃತವಾಗಿ ಸ್ಥಗಿತಗೊಳ್ಳಲಿದೆ. ಇದರರ್ಥ ಜೀಮೇಲ್ ಇಮೇಲ್‌ಗಳನ್ನು ಕಳುಹಿಸಲು, ಸ್ವೀಕರಿಸಲು ಅಥವಾ ಸಂಗ್ರಹಿಸಲು ಇನ್ನು ಮುಂದೆ ಬೆಂಬಲಿಸುವುದಿಲ್ಲ’ ಎಂದು ಗೂಗಲ್ ಮೇಲ್ ಮಾಡಿದೆ ಎಂಬ ನಕಲಿ ಸ್ಕ್ರೀನ್‌ಶಾಟ್‌ನಿಂದ ವದಂತಿಗಳು ಹಬ್ಬಿದ್ದವು.