ಇಸ್ಲಾಮಾಬಾದ್: 2008ರ ಮುಂಬೈ ದಾಳಿ ಮಾಸ್ಟರ್ ಮೈಂಡ್, ಉಗ್ರ ಹಫೀಜ್ ಸಯೀದ್‌ನ ನಿಷೇಧಿತ ರಾಜಕೀಯ ಪಕ್ಷ ಇದೀಗ ಹೊಸ ಹೆಸರಿನೊಂದಿಗೆ ಮತ್ತೆ ಪಾಕಿಸ್ತಾನ ಚುನಾವಣೆ ಕಣಕ್ಕಿಳಿದಿದೆ.
ಹೀಗಾಗಿ ಮತ್ತೆ ಅದೇ ಪಕ್ಷದ ನಾಯಕರು ‘ಪಾಕಿಸ್ತಾನ್ ಮಾರ್ಕಾಜಿ ಮುಸ್ಲಿಂ ಲೀಗ್’ ಎಂಬ ಹೊಸ ಹೆಸರಿನೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಉಗ್ರ ಹಫೀಜ್‌ನ ಸಂಬಂಧಿಗಳು, ನಿಷೇಧಿತ ಲಷ್ಕರ್ ಹಾಗೂ ‘ಜಮಾತ್- ಉದ್- ದವಾ’ದ ನಾಯಕರು ಹಾಗೂ ಅವುಗಳೊಂದಿಗೆ ನಂಟಿರುವ ವ್ಯಕ್ತಿಗಳೇ ಇದೀಗ ಪಿಎಂಎಂಎಲ್ ಪಕ್ಷದಿಂದ ಪಾಕಿಸ್ತಾನದ ವಿವಿಧ ನಗರಗಳಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.