ಇರಾನ್‌ ರಾಜಧಾನಿ ತೆಹರಾನ್‌ನಲ್ಲಿ 2 ತಿಂಗಳ ಮೊದಲೇ ಇರಿಸಿದ್ದ ಬಾಂಬ್‌ನಿಂದ ಹಮಾಸ್‌ ಚೀಫ್‌ ಹತ್ಯೆ!

KannadaprabhaNewsNetwork |  
Published : Aug 03, 2024, 12:30 AM ISTUpdated : Aug 03, 2024, 04:06 AM IST
 ಹಮಾಸ್‌ ಚೀಫ್‌ | Kannada Prabha

ಸಾರಾಂಶ

ಇರಾನ್‌ ರಾಜಧಾನಿ ತೆಹರಾನ್‌ನಲ್ಲಿ ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೆನನ್ನು ಹತ್ಯೆಗೈಯಲು ಎರಡು ತಿಂಗಳ ಮೊದಲೇ ಅತಿಥಿ ಗೃಹದಲ್ಲಿ ಬಾಂಬ್‌ ಇರಿಸಲಾಗಿತ್ತು ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ. ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ಈ ಬಗ್ಗೆ ವರದಿ ಮಾಡಿದೆ.

ತೆಹರಾನ್‌: ಇರಾನ್‌ ರಾಜಧಾನಿ ತೆಹರಾನ್‌ನಲ್ಲಿ ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೆನನ್ನು ಹತ್ಯೆಗೈಯಲು ಎರಡು ತಿಂಗಳ ಮೊದಲೇ ಅತಿಥಿ ಗೃಹದಲ್ಲಿ ಬಾಂಬ್‌ ಇರಿಸಲಾಗಿತ್ತು ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ. ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ಈ ಬಗ್ಗೆ ವರದಿ ಮಾಡಿದೆ.

ಇರಾನ್‌ನ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಹನಿಯೆ ಆಗಮಿಸಿದ್ದರು. ಅವರನ್ನು ಉತ್ತರ ತೆಹರಾನ್‌ನಲ್ಲಿ ಇರಾನ್‌ ಸರ್ಕಾರದ ಅಧಿಕೃತ ಅತಿಥಿ ಗೃಹದಲ್ಲಿ ಇರಿಸಲಾಗಿತ್ತು. ಹನಿಯೆ ತೆಹರಾನ್‌ಗೆ ಆಗಮಿಸಿದಾಗಲೆಲ್ಲ ಇದೇ ಗೆಸ್ಟ್‌ ಹೌಸ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ಈ ಬಾರಿಯ ಭೇಟಿ ವೇಳೆ ಅವರು ಕೋಣೆಯಲ್ಲಿ ತಂಗಿದ್ದಾಗ, ಎರಡು ತಿಂಗಳ ಮೊದಲೇ ಕಳ್ಳಸಾಗಣೆ ಮಾಡಿ ಅಡಗಿಸಿಟ್ಟಿದ್ದ ಸುಧಾರಿತ ಸ್ಫೋಟಕಗಳನ್ನು ರಿಮೋಟ್‌ ಮೂಲಕ ಸ್ಫೋಟಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹಮಾಸ್‌ ಮೇಲೆ ಯುದ್ಧ ನಡೆಸುತ್ತಿರುವ ಇಸ್ರೇಲ್‌ ಸೇನೆಯೇ ಹನಿಯೆನನ್ನು ಹತ್ಯೆಗೈದಿದೆ ಎಂದು ಇರಾನ್‌ ಮತ್ತು ಹಮಾಸ್‌ ಆರೋಪಿಸಿವೆ. ಇಸ್ರೇಲ್‌ ಇದನ್ನು ಅಲ್ಲಗಳೆದೂ ಇಲ್ಲ, ಒಪ್ಪಿಕೊಂಡೂ ಇಲ್ಲ. ಬುಧವಾರ ಹನಿಯೆ ಹತ್ಯೆಯಾಗಿದ್ದರು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಉಗ್ರರಿಗೆ ಹೆದರಿ ಹೊಸ ವರ್ಷಾಚರಣೆಯೇ ರದ್ದು
ಬಾಂಗ್ಲಾ ಹಿಂದು ವ್ಯಕ್ತಿ ಹತ್ಯೆ : 7 ಮಂದಿ ಸೆರೆ