ಸಣ್ಣ ದ್ವೀಪಕ್ಕಾಗಿ ಅಮೆರಿಕ ನನ್ನ ಕೆಳಗಿಳಿಸ್ತು: ಬಾಂಗ್ಲಾದೇಶದ ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ

KannadaprabhaNewsNetwork |  
Published : Aug 12, 2024, 01:40 AM ISTUpdated : Aug 12, 2024, 04:16 AM IST
ಹಸೀನಾ | Kannada Prabha

ಸಾರಾಂಶ

ಬಾಂಗ್ಲಾದೇಶದ ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ ರಾಜೀನಾಮೆಗೂ ಮುನ್ನವೇ ಮಾಡಬೇಕು ಎಂದಿದ್ದ ಭಾಷಣ ಈಗ ಬಹಿರಂಗಗೊಂಡಿದ್ದು, ‘ಬಾಂಗ್ಲಾದೇಶದಲ್ಲಿ ಸರ್ಕಾರ ಬದಲಾವಣೆಯಲ್ಲಿ ಅಮೆರಿಕದ ಕೈವಾಡವಿದೆ. ದೇಶದ ಗಡಿಯಲ್ಲಿ ನೆಲೆಯೂರಲು ಅಮೆರಿಕ ಪ್ರಯತ್ನಿಸುತ್ತಿದೆ’ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಢಾಕಾ: ಬಾಂಗ್ಲಾದೇಶದ ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ ರಾಜೀನಾಮೆಗೂ ಮುನ್ನವೇ ಮಾಡಬೇಕು ಎಂದಿದ್ದ ಭಾಷಣ ಈಗ ಬಹಿರಂಗಗೊಂಡಿದ್ದು, ‘ಬಾಂಗ್ಲಾದೇಶದಲ್ಲಿ ಸರ್ಕಾರ ಬದಲಾವಣೆಯಲ್ಲಿ ಅಮೆರಿಕದ ಕೈವಾಡವಿದೆ. ದೇಶದ ಗಡಿಯಲ್ಲಿ ನೆಲೆಯೂರಲು ಅಮೆರಿಕ ಪ್ರಯತ್ನಿಸುತ್ತಿದೆ’ ಎಂಬ ಗಂಭೀರ ಆರೋಪ ಮಾಡಿದ್ದಾರೆ.ಅಲ್ಲದೆ, ‘ಜೊತೆಗೆ ವಿದ್ಯಾರ್ಥಿಗಳ ಶವದ ಮೆರವಣಿಗೆ ತಡೆಯುವ ಸಲುವಾಗಿ ನಾನು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ತೊರೆದೆ’ ಎಂದು ಹೇಳಿದ್ದಾರೆ.

ಶೇಖ್‌ ಹಸೀನಾ ರಾಜೀನಾಮೆಗೂ ಮುನ್ನ ದೇಶವನ್ನುದ್ದೇಶಿಸಿ ಮಾಡಲು ನಿರ್ಧರಿಸಿ ಭಾಷಣ ಸಿದ್ಧಪಡಿಸಿದ್ದರು. ಆದರೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ಅವರ ಮನೆಗೇ ನುಗ್ಗಿದ ಕಾರಣ ಭಾಷಣ ಮಾಡದೇ ಬಾಂಗ್ಲಾದೇಶ ತೊರೆದು ಭಾರತಕ್ಕೆ ಪಲಾಯನ ಮಾಡಿದ್ದರು.ಈಗ ಅವರ ಭಾಷಣದ ಅಂಶ ಬಹಿರಂಗವಾಗಿದ್ದು, ‘ಬಾಂಗ್ಲಾದೇಶದಲ್ಲಿ ಹಾಲಿ ಇರುವ ಸರ್ಕಾರದ ಬದಲಾವಣೆಯನ್ನು ಅಮೆರಿಕ ಬಯಸುತ್ತಿತ್ತು. ದೇಶದ ತುತ್ತ ತುದಿಯಲ್ಲಿರುವ ಸೇಂಟ್‌ ಮಾರ್ಟಿನ್‌ ದ್ವೀಪದಲ್ಲಿ ನೆಲೆ ಸ್ಥಾಪಿಸಲು ಮುಂದಾಗಿತ್ತು. 

ನಮ್ಮ ಸಾರ್ವಭೌಮತೆಯನ್ನು ನಾನು ಕೈಬಿಟ್ಟು ಅಲ್ಲಿ ಅಮೆರಿಕಕ್ಕೆ ನೆಲೆಯೂರಲು ಅವಕಾಶ ಕೊಟ್ಟಿದ್ದರೆ ನಾನು ಅಧಿಕಾರದಲ್ಲಿ ಮುಂದುವರೆಯಬಹುದಿತ್ತು. ಆದರೆ ಅದಕ್ಕೆ ಒಪ್ಪಲಿಲ್ಲ. ಹೀಗಾಗಿ ಅಧಿಕಾರ ಬಿಡಬೇಕಾಗಿ ಬಂತು’ ಎಂದಿದ್ದಾರೆ.ಜೊತೆಗೆ, ‘ಅವರು (ಪ್ರತಿಪಕ್ಷ ಬಿಎನ್‌ಪಿ) ವಿದ್ಯಾರ್ಥಿಗಳ ಶವಗಳನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬರಲು ಯತ್ನಿಸಿದರು. ಅದಕ್ಕೆ ನಾನು ಅವಕಾಶ ನೀಡಲಿಲ್ಲ’ ಎಂದೂ ಆರೋಪಿಸಿದ್ದಾರೆ.ಇದೇ ವೇಳೆ, ‘ಬಾಂಗ್ಲಾದೇಶದಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ದಾಳಿಯನ್ನೂ ಶೇಖ್‌ ಹಸೀನಾ ಬಲವಾಗಿ ಖಂಡಿಸಿದ್ದಾರೆ. ಅಲ್ಲದೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ನಾನು ರಜಾಕಾರರು ಎಂದು ಟೀಕಿಸಿಲ್ಲ’ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

ಬಿಎನ್‌ಪಿ ನಕಾರ:ಆದರೆ ಈ ಆರೋಪವನ್ನು ಬಿಎನ್‌ಪಿ ಸ್ಪಷ್ಟವಾಗಿ ತಳ್ಳಿಹಾಕಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಅಮೆರಿಕದ ಹಾಗೂ ವಿಪಕ್ಷದ ಹೆಸರು ಹೇಳುತ್ತಿರುವುದು ಸರಿಯಲ್ಲ ಎಂದಿದೆ.

PREV

Recommended Stories

ಎಲ್ಲೆಡೆ ಅರಾಜಕತೆ, ಭಯವಾಗ್ತಿದೆ: ಬೆಂಗಳೂರು ಪ್ರವಾಸಿಗಳ ಅಳಲು
ಮೋದಿ ಜತೆ ಮಾತನಾಡಲು ಉತ್ಸುಕ: ಟ್ರಂಪ್‌