ನಟನೊಂದಿಗೆ ನನಗೆ ಮಲಗಲು ಹೇಳಿದ್ದರು: ನಟಿ ಶರೋನ್‌ ಸ್ಟೋನ್‌ ಅರೋಪ

KannadaprabhaNewsNetwork |  
Published : Mar 14, 2024, 02:00 AM IST
ಶರೋನ್‌ | Kannada Prabha

ಸಾರಾಂಶ

ಬಿಲ್ಲಿ ಬಾಲ್ಡ್ವಿನ್‌ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಸಿಲ್ವರ್‌ ಚಿತ್ರದ ಚಿತ್ರೀಕರಣದ ವೇಳೆ ತಮಗೆ ನಿರ್ಮಾಪಕ ರಾಬರ್ಟ್‌ ಇವಾನ್ಸ್‌ ಒತ್ತಡ ಹೇರಿದ್ದರು ಎಂಬುದಾಗಿ ಹಾಲಿವುಡ್‌ ನಟಿ ಶರೋನ್‌ ಸ್ಪೇನ್‌ ತಿಳಿಸಿದ್ದಾರೆ.

ವಾಷಿಂಗ್ಟನ್‌: ಹಾಲಿವುಡ್‌ ಚಿತ್ರರಂಗದಲ್ಲಿ ನಡೆದ ಲೈಂಗಿಕ ಹಗರಣದ ಸ್ಫೋಟಕ ವಿಷಯವೊಂದನ್ನು ನಟಿ ಶರೋನ್ ಸ್ಟೋನ್‌ ಬಿಚ್ಚಿಟ್ಟಿದ್ದಾರೆ. 1993ರಲ್ಲಿ ನನಗೆ ನಟ ಬಿಲ್ಲಿ ಬಾಲ್ಡ್ವಿನ್ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ನಿರ್ಮಾಪಕ ರಾಬರ್ಟ್ ಇವಾನ್ಸ್ ಅವರು ಒತ್ತಡ ಹೇರಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ.ಪಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿದ ಶರೋನ್‌ ಸ್ಟೋನ್‌, ‘1993ರಲ್ಲಿ ಸಿಲ್ವರ್‌ ಚಿತ್ರದ ಚಿತ್ರೀಕರಣ ನಡೆದಿತ್ತು.. ಆಗ ಇವಾನ್ಸ್‌ ಅವರು ನನ್ನ ಬಳಿ ಓಡಿ ಬಂದು ಈ ಚಿತ್ರದಲ್ಲಿ ಬಿಲ್ಲಿ ಬಾಲ್ಡ್ವಿನ್‌ ಉತ್ತಮವಾಗಿ ನಟಿಸಬೇಕಿದೆ. ಅವರ ಅಭಿನಯವೇ ಚಿತ್ರಕ್ಕೆ ಭೂಷಣ. ಹೀಗಾಗಿ ಅವರನ್ನು ನೀನು ತೃಪ್ತಿಪಡಿಸು. ಅವರು ತೃಪ್ತಿ ಹೊಂದಿದರೆ ಸಂತಸಗೊಂಡು ಉತ್ತಮವಾಗಿ ನಟಿಸುತ್ತಾರೆ ಎಂದು ಹೇಳಿದರು’ ಎಂದು ಆರೋಪಿಸಿಸ್ದಾರೆ.ಆದರೆ ಈ ಬಗ್ಗೆ ಸ್ಪಷ್ಟನೆ ನೀಡಲು ಇವಾನ್ಸ್‌ ಈಗ ಇಲ್ಲ. 2019ರಲ್ಲೇ ನಿಧನರಾಗಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ರಷ್ಯಾದ ಯಾಕುಟಿಯಾದಲ್ಲಿ- 56 ಡಿ.ಸೆ. ತಾಪ ದಾಖಲು
ಚೀನಾದಲ್ಲಿ 700 ಕಿ.ಮೀ ವೇಗದ ರೈಲಿನ ಪ್ರಾಯೋಗಿಕ ಪರೀಕ್ಷೆ ಯಶಸ್ವಿ