ಪಾಕ್‌ ಆರ್ಥಿಕ ದುಸ್ಥಿತಿ ಕಾರಣ ಸಂಬಳ ಪಡೆಯಲ್ಲ: ಜರ್ದಾರಿ ಘೋಷಣೆ

KannadaprabhaNewsNetwork |  
Published : Mar 13, 2024, 02:04 AM IST
ಆಸಿಫ್‌ ಅಲಿ | Kannada Prabha

ಸಾರಾಂಶ

ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿರುವ ಕಾರಣ ತಮ್ಮ ಸಂಬಳವನ್ನು ತ್ಯಾಗ ಮಾಡುವುದಾಗಿ ಹೊಸದಾಗಿ ಆಯ್ಕೆಯಾಗಿರುವ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಘೋಷಿಸಿದ್ದಾರೆ.

ಇಸ್ಲಾಮಾಬಾದ್‌: ಪಾಕಿಸ್ತಾನದ ನೂತನ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅವರು, ದೇಶದಲ್ಲಿ ಆರ್ಥಿಕ ದುಸ್ಥಿತಿ ಇರುವ ಕಾರಣ ತಮ್ಮ ಅಧಿಕಾರ ಅವಧಿಯಲ್ಲಿ ಸಂಬಳ ಸ್ವೀಕರಿಸುವುದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ.

ಮಂಗಳವಾರ ಈ ಕುರಿತು ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ಪಾಕ್‌ ಅಧ್ಯಕ್ಷರ ಕಚೇರಿ, ‘ದೇಶ ಹಣಕಾಸಿನ ತೊಂದರೆಯಲ್ಲಿರುವಾಗ ನಾವು ವೇತನ ಪಡೆಯುವುದು ಸರಿಯಲ್ಲ. ದೇಶದ ವಿತ್ತೀಯ ಸ್ಥಿತಿ ಮೇಲೆ ಹೆಚ್ಚು ಭಾರ ಕೊಡಬಾರದು. ಈ ನಿಟ್ಟಿನಲ್ಲಿ ಅಧಿಕಾರದ ಅವಧಿಯಲ್ಲಿ ಸಂಬಳ ಸ್ವೀಕರಿಸುವುದಿಲ್ಲ’ ಎಂದು ಹೇಳಿದ್ದಾರೆ.

ಇವರೊಂದಿಗೆ ಸಚಿವ ಮೊಹ್ಸಿನ್‌ ನಕ್ವಿ ಸಹ ಸಂಬಳ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಕ್ಸಿಗೆ 100 ಅಡಿ ಉದ್ದದ ಕೆಂಪು ಹಾಸು ಹಾಕಿ ಟ್ರಂಪ್‌ ಸ್ವಾಗತ
ಚೀನಾಕ್ಕೆ ಭಾರತ ಉತ್ಪನ್ನ ರಫ್ತು ಶೇ.40ರಷ್ಟು ಹೆಚ್ಚಳ!