ಒತ್ತೆಯಾಳು ಬಿಡುಗಡೆಗೆ ಇಸ್ರೇಲ್‌-ಹಮಾಸ್‌ ಡೀಲ್‌?

KannadaprabhaNewsNetwork | Published : Nov 13, 2023 1:15 AM

ಸಾರಾಂಶ

ಟೆಲ್ ಅವಿವ್: ಒಂದು ತಿಂಗಳಿಂದ ನಡೆಯುತ್ತಿರುವ ಇಸ್ರೇಲ್‌-ಹಮಾಸ್‌ ಯುದ್ಧಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆ ಭಾನುವಾರ ನಡೆದಿದ್ದು, ಒತ್ತೆಯಾಳುಗಳ ವಿನಿಮಯಕ್ಕೆ ಉಭಯ ಪಂಗಡಗಳ ನಡುವೆ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇಂಥ ಸಾಧ್ಯತೆ ಇದೆ ಎಂದು ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು ಕೂಡ ಹೇಳಿದ್ದಾರೆ.

80 ಒತ್ತೆಯಾಳು ಬಿಡುಗಡೆಗೆ ಹಮಾಸ್‌ ರೆಡಿ?ಇಸ್ರೇಲ್‌ನಿಂದಲೂ ಪ್ಯಾಲೆಸ್ತೀನಿ ಒತ್ತೆಯಾಳು ಬಿಡುಗಡೆ?

ಟೆಲ್ ಅವಿವ್: ಒಂದು ತಿಂಗಳಿಂದ ನಡೆಯುತ್ತಿರುವ ಇಸ್ರೇಲ್‌-ಹಮಾಸ್‌ ಯುದ್ಧಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆ ಭಾನುವಾರ ನಡೆದಿದ್ದು, ಒತ್ತೆಯಾಳುಗಳ ವಿನಿಮಯಕ್ಕೆ ಉಭಯ ಪಂಗಡಗಳ ನಡುವೆ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇಂಥ ಸಾಧ್ಯತೆ ಇದೆ ಎಂದು ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು ಕೂಡ ಹೇಳಿದ್ದಾರೆ.

ಹಮಾಸ್‌ ಉಗ್ರರು ತಮ್ಮ ಬಳಿಯ 80 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ವಶದಲ್ಲಿರುವ ಕೆಲವು ಮಹಿಳೆಯರು, ವೃದ್ಧರು ಹಾಗೂ ಯುವಕರನ್ನು ನೆತನ್ಯಾಹು ಸರ್ಕಾರ ಬಿಡುಗಡೆ ಮಾಡಬೇಕು ಎಂಬುದು ಸಂಭಾವ್ಯ ಒಪ್ಪಂದವಾಗಿದೆ ಎಂದು ಅಮೆರಿಕ ಅಧಿಕಾರಿ ಹೇಳಿದ್ದಾರೆ.ಇಸ್ರೇಲ್‌ನ 230 ಒತ್ತೆಯಾಳುಗಳು ಹಮಾಸ್‌ ವಶದಲ್ಲಿದ್ದಾರೆ. ಈಗಾಗಲೇ ಐವರನ್ನು ಹಮಾಸ್‌ ಬಿಡುಗಡೆ ಮಾಡಿದೆ.

Share this article