ತುಂಬಿರುವ ಗಾಜಾ ಆಸ್ಪತ್ರೆಗಳಲ್ಲಿ ಅರವಳಿಕೆ ಸೇರಿ ಎಲ್ಲವೂ ಖಾಲಿ: ನರ್ಸ್ಗಾಜಾ: ‘ಅರವಳಿಕೆ ಖಾಲಿಯಾಗಿದ್ದರಿಂದ ಬಾಂಬ್ ದಾಳಿಯಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಪುಟ್ಟ ಬಾಲಕಿಯೊಬ್ಬಳಿಗೆ ಯಾವುದೇ ಅರವಳಿಕೆ ನೀಡದೇ ತಲೆಗೆ ಹೊಲಿಗೆ ಹಾಕಿದೆವು. ನೋವು ತಾಳಲಾಗದೇ ಬಾಲಕಿ ‘ಮಮ್ಮಿ ಮಮ್ಮಿ’ ಎಂದು ಕಿರುಚತ್ತಿದ್ದಳು’ ಇದು ಗಾಜಾದ ಶಿಫಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನರ್ಸ್ ಅಬು ಎಮದ್ ಹಸ್ಸನೇನ್ ಅವರ ಹೃದಯವಿದ್ರಾವಕ ಮಾತುಗಳು.
ಅಲ್ಲದೇ ‘ಇಸ್ರೇಲ್ ವಾಯುದಾಳಿಗೆ ಸಿಲುಕಿ ಬೆನ್ನಿಗೆ ತೀವ್ರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರಿಗೂ ಅರವಳಿಕೆ ಇಲ್ಲದೇ ಹೊಲಿಗೆ ಹಾಕಲಾಯಿತು. ಇದು ಯಾರೂ ಊಹಿಸಲಾಧ್ಯವಾದ ನೋವು. ಆಗ ನಾನು ಕುರಾನ್ ಪಠಿಸುತ್ತಿದ್ದೆ’ ಎಂದು ನರ್ಸ್ ಹೇಳಿದ್ದಾರೆ.ಗಾಜಾದ ಮೇಲೆ ಇಸ್ರೇಲ್ ದಾಳಿ ಪ್ರಾರಂಭವಾದಾಗಿನಿಂದ ಅಲ್ಲಿನ ಎಲ್ಲ ಅಸ್ಪತ್ರೆಗಳು ಬಾಂಬ್ ದಾಳಿಯಲ್ಲಿ ಗಾಯಗೊಂಡ ರೋಗಿಗಳಿಂದಲೇ ತುಂಬಿ ಹೋಗಿವೆ. ಹೀಗಾಗಿ ಆಸ್ಪತ್ರೆಯಲ್ಲಿರಬೇಕಾದ ಅವಶ್ಯಕ ವಸ್ತುಗಳಾದ, ಅರವಳಿಕೆ, ಔಷಧಿ ಸೇರಿದಂತೆ ಎಲ್ಲ ವಸ್ತುಗಳೂ ಖಾಲಿಯಾಗಿವೆ. ಇದರಿಂದಾಗಿ ಮಕ್ಕಳೂ ಸೇರಿದಂತೆ ಗಾಯಾಳುಗಳಿಗೆ ಯಾವುದೇ ಅರವಳಿಕೆ ನೀಡದೆ ತಲೆ, ಕೈ ಕಾಲುಗಳಿಗೆ ಹೊಲಿಗೆ ಹಾಕಬೇಕಾದ ಅನಿವಾರ್ಯತೆ ಉಂಟಾಗಿದೆ.