ಮೊದಲ ಚಿಕನ್‌ಗುನ್ಯಾ ಲಸಿಕೆಗೆ ಅಮೆರಿಕ ಔಷಧ ಆಯೋಗ ಒಪ್ಪಿಗೆ

KannadaprabhaNewsNetwork | Published : Nov 11, 2023 1:16 AM

ಸಾರಾಂಶ

ವಿಶ್ವದ ಮೊದಲ ಚಿಕನ್‌ಗುನ್ಯಾ ಲಸಿಕೆಗೆ ಅಮೆರಿಕದ ಆಹಾರ ಮತ್ತು ಔಷಧ ಸಂಸ್ಥೆ ಶುಕ್ರವಾರ ಒಪ್ಪಿಗೆ ಸೂಚಿಸಿದೆ

ಆಸ್ಟ್ರಿಯಾ ಮೂಲದ ಕಂಪನಿಯಿಂದ ಉತ್ಪಾದನೆ

18 ವರ್ಷ ಮೇಲ್ಪಟ್ಟವರಿಗೆ 1 ಡೋಸ್‌ ಲಸಿಕೆ

ನವದೆಹಲಿ: ವಿಶ್ವದ ಮೊದಲ ಚಿಕನ್‌ಗುನ್ಯಾ ಲಸಿಕೆಗೆ ಅಮೆರಿಕದ ಆಹಾರ ಮತ್ತು ಔಷಧ ಸಂಸ್ಥೆ ಶುಕ್ರವಾರ ಒಪ್ಪಿಗೆ ಸೂಚಿಸಿದೆ. 18 ವರ್ಷ ಮತ್ತು ಮೇಲ್ಪಟ್ಟವರಿಗೆ ಈ ಲಸಿಕೆಯ ಒಂದು ಡೋಸ್‌ ನೀಡಲಾಗುತ್ತದೆ.

ಆಸ್ಟ್ರಿಯಾದ ವಾಲ್ನೇವಾ ಸಂಸ್ಥೆ ‘ಇಕ್ಸ್‌ಚಿಕ್‌’ ಎಂಬ ಲಸಿಕೆಯನ್ನು ತಯಾರಿಸಿದ್ದು, ಈ ಲಸಿಕೆಯನ್ನು ನೀಡಲು ಅಮೆರಿಕ ಒಪ್ಪಿಗೆ ನೀಡಿದೆ. ಇದನ್ನು ಸ್ನಾಯುಗಳಿಗೆ ಇಂಜೆಕ್ಷನ್‌ ಮೂಲಕ ನೀಡಲಾಗುತ್ತದೆ. ಚಿಕನ್‌ಗುನ್ಯಾ ರೋಗ ಸೊಳ್ಳೆಗಳಿಂದ ಹರಡಲಿದ್ದು, ಇದು ದೀರ್ಘಕಾಲದವರೆಗೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ‘ವೈದ್ಯಕೀಯ ತುರ್ತು ಪರಿಸ್ಥಿತಿ ನಿಭಾಯಿಸುವುದಕ್ಕಾಗಿ ಇದಕ್ಕೆ ಅನುಮೋದನೆಯನ್ನು ನೀಡಲಾಗಿದೆ. ಕನಿಷ್ಠ ಆರೋಗ್ಯ ಸೇವೆ ಹೊಂದಿರುವ ರೋಗದಿಂದ ಜನರನ್ನು ರಕ್ಷಿಸಲು ಈ ಲಸಿಕೆ ನೆರವಾಗಲಿದೆ ಎಂದು ಎಫ್‌ಡಿಎ ನಿರ್ದೇಶಕ ಪೀಟರ್‌ ಮಾರ್ಕ್‌ ಹೇಳಿದ್ದಾರೆ. 18 ವರ್ಷ ಹಾಗೂ ಮೇಲ್ಪಟ್ಟವರಿಗೆ ಈ ಲಸಿಕೆಯನ್ನು ನೀಡಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಈ ಲಸಿಕೆ ಪಡೆದುಕೊಂಡ 266 ಮಂದಿಯಲ್ಲಿ ಪ್ರತಿಕಾಯ ಪ್ರಮಾಣ ಹೆಚ್ಚಾಗಿದೆ ಎಂಬುದು ಪರೀಕ್ಷೆಯ ವೇಳೆ ತಿಳಿದುಬಂದಿದೆ. ಸುಮಾರು 3500 ಮಂದಿಗೆ ಲಸಿಕೆಯನ್ನು ನೀಡಿ ಇದರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಎಫ್‌ಡಿಎ ಹೇಳಿದೆ.

Share this article