ಕಾನೂನುಬಾಹಿರ ವಿವಾಹ: ಇಮ್ರಾನ್‌, ಬುಶ್ರಾಗೆ ತಲಾ 7 ವರ್ಷ ಜೈಲು

KannadaprabhaNewsNetwork |  
Published : Feb 04, 2024, 01:32 AM ISTUpdated : Feb 04, 2024, 12:00 PM IST
ಇಮ್ರಾನ್‌ ದಂಪತಿ | Kannada Prabha

ಸಾರಾಂಶ

ಇಮ್ರಾನ್‌ ಖಾನ್‌ ಹಾಗೂ ಪತ್ನಿ ಬುಶ್ರಾ ಬೀಬಿಗೆ ಅಕ್ರಮ ಮದುವೆ ಆರೋಪದ ಹಿನ್ನೆಲೆಯಲ್ಲಿ ತಲಾ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಇಸ್ಲಾಮಾಬಾದ್‌: ಕಾನೂನುಬಾಹಿರವಾಗಿ ಇಮ್ರಾನ್‌ ಖಾನ್‌ ಮತ್ತು ಬುಶ್ರಾ ಬೀಬಿ ವಿವಾಹವಾಗಿದ್ದಾರೆಂದು ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ತಲಾ 7 ವರ್ಷ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನದ ನ್ಯಾಯಾಲಯ ಆದೇಶಿಸಿದೆ.

ಇದಕ್ಕೂ ಮೊದಲು ಇಮ್ರಾನ್‌ ದಂಪತಿಗೆ ತೋಶಾಖಾನಾ ಪ್ರಕರಣದಲ್ಲಿ ತಲಾ 14 ವರ್ಷ ಜೈಲು ಶಿಕ್ಷೆ. ಇದಾದ 2 ದಿನದಲ್ಲೇ ಇನ್ನೊಂದು ಶಿಕ್ಷೆ ಎದುರಾಗಿದೆ.

ಬುಶ್ರಾ ಬೀಬಿಯ ವಿಚ್ಛೇದಿತ ಪತಿ ಖಾವರ್‌ ಮನೇಕಾ ದಾಖಲಿಸಿದ್ದ ಪ್ರಕರಣದಲ್ಲಿ ಇಮ್ರಾನ್‌ ಹಾಗೂ ಬುಶ್ರಾ ‘ಇದ್ದತ್‌’ (ಮರುಮದುವೆಗೆ ಕಾಯುವ ಸಮಯ) ಅವಧಿಯೊಳಗೆ ವಿವಾಹವಾಗಿದ್ದಾರೆ ಮತ್ತು ಮದುವೆಗೆ ಮುಂಚೆಯೇ ಪರಸ್ಪರರು ಅಕ್ರಮ ಸಂಬಂಧ ಹೊಂದಿದ್ದರು ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸತತ 14 ಗಂಟೆಗಳ ಕಾಲ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಕ್ಸಿಗೆ 100 ಅಡಿ ಉದ್ದದ ಕೆಂಪು ಹಾಸು ಹಾಕಿ ಟ್ರಂಪ್‌ ಸ್ವಾಗತ
ಚೀನಾಕ್ಕೆ ಭಾರತ ಉತ್ಪನ್ನ ರಫ್ತು ಶೇ.40ರಷ್ಟು ಹೆಚ್ಚಳ!