ಸೌರ ವಿದ್ಯುತ್‌: ವಿಶ್ವದಲ್ಲೇ ಈಗ ಭಾರತ ನಂ.3

KannadaprabhaNewsNetwork |  
Published : May 09, 2024, 01:01 AM ISTUpdated : Jun 09, 2024, 10:23 AM IST
ಸೋಲಾರ್‌ ಪ್ಯಾನಲ್‌ | Kannada Prabha

ಸಾರಾಂಶ

ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತ 2023ರಲ್ಲಿ ಜಪಾನ್‌ ಅನ್ನು ಹಿಂದಿಕ್ಕಿ ವಿಶ್ವದ ನಂ.3 ಸ್ಥಾನಕ್ಕೆ ಏರಿದೆ. ಜಾಗತಿಕ ಇಂಧನ ಚಿಂತಕರ ಚಾವಡಿ ಎಂಬರ್‌ನ ವರದಿಯ ಪ್ರಕಾರ, ಭಾರತವು 2015 ರಲ್ಲಿ 9ನೇ ಶ್ರೇಯಾಂಕ ಪಡೆದಿತ್ತು. ಆದರೆ ಈಗ ಸರ್ಕಾರದ ಸತತ ಪ್ರಯತ್ನಗಳಿಂದ 3ನೇ ಸ್ಥಾನಕ್ಕೆ ಏರಿದೆ.

ನವದೆಹಲಿ: ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತ 2023ರಲ್ಲಿ ಜಪಾನ್‌ ಅನ್ನು ಹಿಂದಿಕ್ಕಿ ವಿಶ್ವದ ನಂ.3 ಸ್ಥಾನಕ್ಕೆ ಏರಿದೆ. ಜಾಗತಿಕ ಇಂಧನ ಚಿಂತಕರ ಚಾವಡಿ ಎಂಬರ್‌ನ ವರದಿಯ ಪ್ರಕಾರ, ಭಾರತವು 2015 ರಲ್ಲಿ 9ನೇ ಶ್ರೇಯಾಂಕ ಪಡೆದಿತ್ತು. ಆದರೆ ಈಗ ಸರ್ಕಾರದ ಸತತ ಪ್ರಯತ್ನಗಳಿಂದ 3ನೇ ಸ್ಥಾನಕ್ಕೆ ಏರಿದೆ.

ಎಂಬರ್‌ ಸಂಸ್ಥೆ ಬುಧವಾರ ಗ್ಲೋಬಲ್ ಎಲೆಕ್ಟ್ರಿಸಿಟಿ ರಿವ್ಯೂ 2024 ಅನ್ನು ಪ್ರಕಟಿಸಿದೆ. ‘2023ರಲ್ಲಿ ಭಾರತವು ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಜಪಾನ್‌ ದೇಶವನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದಕವಾಗಿದೆ. 2023 ರಲ್ಲಿ ಸೌರಶಕ್ತಿಯು ಜಾಗತಿಕ ಉತ್ಪಾದನೆಗೆ 5.5 ಪ್ರತಿಶತ ಕೊಡುಗೆ ನೀಡುತ್ತದೆ. ಇನ್ನುಭಾರತದ ಒಟ್ಟು ವಿದ್ಯುತ್‌ ಉತ್ಪಾದನೆಯಲ್ಲಿ ಸೌರಶಕ್ತಿ ಕೊಡುಗೆ ಶೇ.5.8ಕ್ಕೆ ಹೆಚ್ಚಿದೆ’ ಎಂದು ಮೆಚ್ಚು ವ್ಯಕ್ತಪಡಿಸಿದೆ.

2023ರಲ್ಲಿ ಸೌರಶಕ್ತಿ ಉತ್ಪಾದನೆಯ ಏರಿಕೆಯಲ್ಲಿ ಭಾರತವು ಚೀನಾ, ಅಮೆರಿಕ ಹಾಗೂ ಬ್ರೆಜಿಲ್‌ ನಂತರ 4ನೇ ಸ್ಥಾನ ಗಳಿಸಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೌರವಿದ್ಯುತ್‌ ಉತ್ಪಾದನೆಗಾಗಿ ಸಾಕಷ್ಟು ಪ್ರೋತ್ಸಾಹಕ ಯೋಜನೆಗಳನ್ನು ಪ್ರಕಟಿಸಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಭೀಕರ ಬಿರುಗಾಳಿ : ಬ್ರೆಜಿಲ್‌ನ ಸ್ಟ್ಯಾಚು ಆಫ್‌ ಲಿಬರ್ಟಿ ಧರೆಗೆ
ಬೋಂಡಿ ಬೀಚ್‌ ದಾಳಿಗೆ ತಿರುವು - ಅವನುಭಾರತದವ !