ಸ್ಪೆಲ್‌ಬೀ ಸ್ಪರ್ಧೆ: ಭಾರತೀಯ ಮೂಲದ ಬೃಹತ್‌ ಸೋಮಾ ವಿಜಯ

KannadaprabhaNewsNetwork |  
Published : Jun 01, 2024, 12:46 AM ISTUpdated : Jun 01, 2024, 04:08 AM IST
 ಸೋಮಾ ವಿಜಯ | Kannada Prabha

ಸಾರಾಂಶ

 ಪ್ರತಿಷ್ಠಿತ ಸ್ಕ್ರಿಪ್ಸ್‌ ಸ್ಪೆಲ್‌ಬೀ ಸ್ಪರ್ಧೆಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಪಾರುಪತ್ಯ ಮುಂದುವರೆದಿದ್ದು, 2023ನೇ ಸಾಲಿನ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೆರಿಕ ಪೌರ, 7ನೇ ತರಗತಿ ವಿದ್ಯಾರ್ಥಿ ಬರಹತ್‌ ಸೋಮಾ (12) ಗೆಲುವು ಸಾಧಿಸಿದ್ದಾನೆ.

ವಾಷಿಂಗ್ಟನ್‌: ಅಮೆರಿಕದ ಪ್ರತಿಷ್ಠಿತ ಸ್ಕ್ರಿಪ್ಸ್‌ ಸ್ಪೆಲ್‌ಬೀ ಸ್ಪರ್ಧೆಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಪಾರುಪತ್ಯ ಮುಂದುವರೆದಿದ್ದು, 2023ನೇ ಸಾಲಿನ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೆರಿಕ ಪೌರ, 7ನೇ ತರಗತಿ ವಿದ್ಯಾರ್ಥಿ ಬರಹತ್‌ ಸೋಮಾ (12) ಗೆಲುವು ಸಾಧಿಸಿದ್ದಾನೆ.

ಸೋಮಾ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ 250 ಕೋಟಿ ರು. ನಗದು (50 ಸಾವಿರ ಡಾಲರ್‌) ಮತ್ತು ಆಕರ್ಷಕ ಟ್ರೋಫಿಯನ್ನು ಬಹುಮಾನವಾಗಿ ಪಡೆದಿದ್ದಾನೆ. ಅಂತಿಮ ಸುತ್ತಿನ ಟೈಬ್ರೇಕರ್‌ನಲ್ಲಿ ಸೋಮಾ 90 ಸೆಕೆಂಡ್‌ನಲ್ಲಿ 29 ಪದಗಳಿಗೆ ಸರಿಯಾದ ಸ್ಪೆಲ್ಲಿಂಗ್‌ ಹೇಳುವ ಮೂಲಕ ತನ್ನ ಪ್ರತಿಸ್ಪರ್ಧಿಯನ್ನು ಸೋಲಿಸಿದನು. ಎರಡನೇ ಸ್ಥಾನ ಗಳಿಸಿದ ಫೈಜಾ಼ನ್‌ ಟೈ ಬ್ರೇಕರ್‌ ಸುತ್ತಿನಲ್ಲಿ ಕೇವಲ 20 ಪದಗಳಿಗೆ ಮಾತ್ರ ಸರಿಯಾದ ಸ್ಪೆಲ್ಲಿಂಗ್‌ ಹೇಳಲು ಸಾಧ್ಯವಾಯಿತು.

ಇದರೊಂದಿಗೆ 99 ವರ್ಷಗಳ ಇತಿಹಾಸವಿರುವ ಸ್ಪರ್ಧೆಯಲ್ಲಿ 29 ಬಾರಿ ಭಾರತೀಯ ಮೂಲದ ವಿದ್ಯಾರ್ಥಿಗಳೇ ಗೆಲುವು ಸಾಧಿಸಿದಂತಾಗಿದೆ.

ಗೂಗಲ್‌ ನ್ಯೂಸ್‌ ಸೇರಿ ಹಲವು ಸರ್ವರ್‌ ಡೌನ್‌: ಬಳಕೆದಾರರ ಪರದಾಟ

ನವದೆಹಲಿ: ಗೂಗಲ್‌ ಕಂಪನಿಯ ನ್ಯೂಸ್‌ ಹಾಗೂ ಇತರ ಸರ್ವರ್‌ಗಳು ಶುಕ್ರವಾರ ಹಲವು ಗಂಟೆಗಳ ಡೌನ್‌ ಆಗಿದ್ದು, ಬಳಕೆದಾರರು ಪರದಾಡುವಂತಾಯಿತು. ರಾತ್ರಿ ವೇಳೆ ಸರಿ ಆಯಿತು. ಶುಕ್ರವಾರ ಮಧ್ಯಾಹ್ನದಿಂದ ಜಿಮೇಲ್‌, ಯುಟ್ಯೂಬ್‌, ಮ್ಯಾಪ್‌, ನ್ಯೂಸ್‌ ಸೇರಿ ಗೂಗಲ್‌ ಸರ್ವರ್‌ ಡೌನ್‌ ಆಗಿದ್ದರಿಂದ ಯಾವುದೇ ಸರ್ಚ್‌ ಮಾಡಿದರೂ ಫಲಿತಾಂಶ ನೋ ರಿಸಲ್ಟ್‌ ಎಂದು ಬರುತ್ತಿತ್ತು. ಇದಕ್ಕೆ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗೂಗಲ್‌ ಕಂಪನಿ ತಂತ್ರಾಂಶ ಅಪ್‌ಡೇಟ್‌ ಮಾಡುತ್ತಿರುವುದರಿಂದ ಈ ತೊಂದರೆ ಕಾಣಿಸಿಕೊಂಡಿತ್ತು ಎಂದು ತಿಳಿದು ಬಂದಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಭೀಕರ ಬಿರುಗಾಳಿ : ಬ್ರೆಜಿಲ್‌ನ ಸ್ಟ್ಯಾಚು ಆಫ್‌ ಲಿಬರ್ಟಿ ಧರೆಗೆ
ಬೋಂಡಿ ಬೀಚ್‌ ದಾಳಿಗೆ ತಿರುವು - ಅವನುಭಾರತದವ !