ಅಮೆರಿಕ ನೆಲೆ ಮೇಲೆ ಇರಾನ್‌ ಕ್ಷಿಪಣಿ ಬಾಂಬ್‌ : ಮಧ್ಯಪ್ರಾಚ್ಯದಲ್ಲಿ ಪ್ರತೀಕಾರ - ಒಂದೇ ದಿನ 3 ದೇಶಕ್ಕಬ್ಬಿದ ಸಮರ

KannadaprabhaNewsNetwork |  
Published : Jun 24, 2025, 01:47 AM ISTUpdated : Jun 24, 2025, 04:57 AM IST
nuclear attack

ಸಾರಾಂಶ

ತನ್ನ ಮೂರು ಪರಮಾಣು ನೆಲೆಗಳ ಮೇಲೆ ಅಮೆರಿಕ ನಡೆಸಿದ ದಾಳಿಯಿಂದ ಆಕ್ರೋಶಗೊಂಡಿದ್ದ ಇರಾನ್‌, ಸೋಮವಾರ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶದ ಮೇಲೆ ಪ್ರತೀಕಾರದ ದಾಳಿ ಆರಂಭಿಸಿದೆ.

ಟೆಹ್ರಾನ್‌: ತನ್ನ ಮೂರು ಪರಮಾಣು ನೆಲೆಗಳ ಮೇಲೆ ಅಮೆರಿಕ ನಡೆಸಿದ ದಾಳಿಯಿಂದ ಆಕ್ರೋಶಗೊಂಡಿದ್ದ ಇರಾನ್‌, ಸೋಮವಾರ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶದ ಮೇಲೆ ಪ್ರತೀಕಾರದ ದಾಳಿ ಆರಂಭಿಸಿದೆ.

ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್ ಸೇನೆ ಸೋಮವಾರ ರಾತ್ರಿ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಸಿರಿಯಾ, ಕತಾರ್‌ನ ದೋಹಾ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್‌ 10ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾಯಿಸಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿನ ಅಮೆರಿಕ ಸೇನಾ ನೆಲೆಗಳಲ್ಲಿನ ವಾಯುರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇರಾನ್‌ ನಡೆಸಿದ ಕ್ಷಿಪಣಿ ದಾಳಿಯಲ್ಲಿ ತನ್ನ ಸೇನಾನೆಲೆಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅಮೆರಿಕ ತಿಳಿಸಿದೆ.

ಇನ್ನೊಂದೆಡೆ ದಾಳಿಯ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಸಂಪುಟದ ಹಿರಿಯ ಸಹೋದ್ಯೋಗಿಗಳು ಮತ್ತು ಸೇನಾ ಮುಖ್ಯಸ್ಥರ ಜತೆ ತುರ್ತು ಸಭೆ ನಡೆಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಭಾನುವಾರಷ್ಟೇ ತನ್ನ ಬಿ-2 ಸ್ಟೆಲ್ತ್‌ ವಿಮಾನಗಳ ಮೂಲಕ ಇರಾನ್‌ನ ಮೂರು ಪರಮಾಣು ನೆಲೆಗಳ ಮೇಲೆ ಬಂಕರ್‌ ಬಸ್ಟರ್ ಬಾಂಬ್‌ ದಾಳಿ ನಡೆಸಿದ್ದ ಅಮೆರಿಕ, ಅಗತ್ಯ ಬಿದ್ದರೆ ಇನ್ನಷ್ಟು ದಾಳಿ ನಡೆಸುವ ಎಚ್ಚರಿಕೆ ನೀಡಿತ್ತು. ಇರಾನ್ ಶಾಂತಿಗೆ ಮುಂದಾಗದೇ ಇದ್ದಲ್ಲಿ ನಮ್ಮ ಬಳಿ ದಾಳಿಗೆ ಇನ್ನಷ್ಟು ಗುರಿಗಳಿವೆ ಎಂದು ಎಚ್ಚರಿಸಿತ್ತು. ಆದರೆ ಇರಾನ್‌ ಶಾಂತಿಗೆ ಬದಲು ಪ್ರತೀಕಾರಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಇರಾನ್‌ ಮೇಲೆ ಅಮೆರಿಕ ಮತ್ತಷ್ಟು ತೀವ್ರ ದಾಳಿಯ ಎಲ್ಲಾ ಲಕ್ಷಣಗಳು ಕಂಡುಬಂದಿವೆ.

ಎಲ್ಲೆಲ್ಲಿ ದಾಳಿ?:ಸಿರಿಯಾ, ಕತಾರ್‌ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಕತಾರ್‌ ರಾಜಧಾನಿ ದೋಹಾದಲ್ಲಿ ಅಮೆರಿಕದ 10000ಕ್ಕೂ ಹೆಚ್ಚು ಯೋಧರಿದ್ದು, ಇದು ಅಮೆರಿಕದ ಹೊರಗೆ ಇರುವ ಅಮೆರಿಕದ ಅತಿದೊಡ್ಡ ಸೇನಾ ನೆಲೆಗಳ ಪೈಕಿ ಒಂದು. ಅದನ್ನೇ ಗುರಿಯಾಗಿಸಿ ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ. ತನ್ನ ದೇಶದಿಂದ ಅಂದಾಜು 12000 ಕಿ.ಮೀ. ದೂರದಲ್ಲಿರುವ ಅಮೆರಿಕದ ಮೇಲೆ ನೇರ ದಾಳಿ ನಡೆಸುವುದು ಇರಾನ್‌ ಪಾಲಿಗೆ ಆಗದ ಕೆಲಸವಾಗದ ಕಾರಣ ಮಧ್ಯಪ್ರಾಚ್ಯದಲ್ಲಿ ತನ್ನ ಸುತ್ತಮುತ್ತಲಿನ ದೇಶಗಳಲ್ಲಿ ಇರುವ ಅಮೆರಿಕದ ಸೇನಾ ನೆಲೆಗಳನ್ನೇ ಇರಾನ್‌ ಗುರಿಯಾಗಿಸಿಕೊಂಡಿದೆ.

ಸಂಘರ್ಷ ತೀವ್ರ:ಇಸ್ರೇಲ್‌- ಇರಾನ್‌ ಯುದ್ಧಕ್ಕೆ ಅಮೆರಿಕ ಪ್ರವೇಶದ ಬಳಿಕ ಮತ್ತೂ ಮೂರು ದೇಶಗಳ ಸೇರ್ಪಡೆಯಾದಂತಾಗಿದ್ದು, ಮಧ್ಯಪ್ರಾಚ್ಯ ಮತ್ತಷ್ಟು ಸಂಘರ್ಷಕ್ಕೆ ತೆರೆದುಕೊಳ್ಳುವ ಎಲ್ಲಾ ಸಾಧ್ಯತೆ ಕಂಡುಬಂದಿತ್ತು.

ಪ್ರತೀಕಾರದ ಎಚ್ಚರಿಕೆ:ದಾಳಿಗೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಇರಾನ್‌, ‘ಅಮೆರಿಕದ ಮೇಲಿನ ಪ್ರತಿದಾಳಿಯ ಸಮಯ, ರೀತಿ ಮತ್ತು ಪ್ರಮಾಣವನ್ನು ನಮ್ಮ ಸೇನೆ ನಿರ್ಧರಿಸಲಿದೆ’ ಎಂದು ಇರಾನ್‌ ಎಚ್ಚರಿಸಿತ್ತು.

ಅಮೆರಿಕ ನೆಲೆಗಳಲ್ಲಿ ಕಟ್ಟೆಚ್ಚರ: 1 ಕಿ.ಮೀ. ಸುತ್ತ ಜನ ತೆರವು!ವಾಷಿಂಗ್ಟನ್‌: ಇರಾನ್‌ ದಾಳಿ ಬೆನ್ನಲ್ಲೇ ಮಧ್ಯಪ್ರಾಚ್ಯದ ವಿವಿಧೆಡೆ ಇರುವ ತನ್ನ ಸೇನಾ ನೆಲೆಗಳಿಗೆ ಅಮೆರಿಕ ಕಟ್ಟೆಚ್ಚರ ಘೋಷಿಸಿದೆ. ಈ ನೆಲೆಗಳ ಸುತ್ತಲಿನ 1 ಕಿ.ಮೀ. ಪ್ರದೇಶದಿಂದ ಜನರನ್ನು ತೆರವುಗೊಳಿಸಿದೆ.

ಎಲ್ಲೆಲ್ಲಿ ದಾಳಿ?:

1. ಅಲ್‌ ಉಡೇದ್‌ ಏರ್‌ಬೇಸ್‌, ಕತಾರ್‌: ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಅತಿದೊಡ್ಡ ವಾಯುನೆಲೆ ಇದು. ದೋಹಾದಲ್ಲಿದೆ. 10 ಸಾವಿರ ಯೋಧರು ಇಲ್ಲಿದ್ದಾರೆ.

2. ಐನ್‌ ಅಲ್‌ ಅಸಾದ್‌ ಏರ್‌ಬೇಸ್‌, ಇರಾಕ್‌: ಅಮೆರಿಕದ ವಾಯುನೆಲೆ ಮೇಲೆ ಕ್ಷಿಪಣಿ ದಾಳಿ. ಖಚಿತಪಡಿಸಿದ ಇರಾಕ್‌. ಇರಾನ್‌ನಿಂದ ದೃಢೀಕರಣ ಇಲ್ಲ. ಇರಾನ್‌ ಉಗ್ರರ ಕೈವಾಡ ಶಂಕೆ

3. ಹಸಾಖ ಸೇನಾ ನೆಲೆ, ಸಿರಿಯಾ: ಅಮೆರಿಕದ ಈ ನೆಲೆ ಮೇಲೂ ದಾಳಿಯಾಗಿರುವ ಬಗ್ಗೆ ವರದಿ.  

ದೃಢೀಕರಣ ಇಲ್ಲ. ಪರಿಣಾಮ ಏನು?1. ಇರಾನ್‌ ದಾಳಿಯಿಂದ ಯಾವುದೇ ಅನಾಹುತವಾಗಿಲ್ಲ. ಬಹುತೇಕ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ2. ಕೆಲವೇ ಕ್ಷಿಪಣಿಗಳನ್ನು ಹಾರಿಸಿರುವುದರಿಂದ ಇದನ್ನು ಸಾಂಕೇತಿಕ ದಾಳಿ ಎಂದು ಅಮೆರಿಕ ಪರಿಗಣಿಸುತ್ತಿದೆ3. ಒಂದು ವೇಳೆ ಇರಾನ್‌ ತನ್ನ ದಾಳಿಯನ್ನು ತೀವ್ರಗೊಳಿಸಿದರೆ ಅಮೆರಿಕದಿಂದ ಮತ್ತಷ್ಟು ತಿರುಗೇಟು ಸಾಧ್ಯತೆ 

ಐದು ದೇಶಗಳಿಂದ ವಾಯುಸೀಮೆ ಬಂದ್‌ಕತಾರ್‌ ಮೇಲಿನ ದಾಳಿ ಬೆನ್ನಲ್ಲೇ ಕತಾರ್‌, ಯುಎಇ, ಬಹರೇನ್‌, ಕುವೈತ್‌ ಹಾಗೂ ಇರಾಕ್‌ ದೇಶಗಳು ವಾಯುಸೀಮೆಯನ್ನು ಬಂದ್‌ ಮಾಡಿವೆ. ಇದರ ಬೆನ್ನಲ್ಲೇ ಮಧ್ಯಪ್ರಾಚ್ಯ ದೇಶಗಳಿಗೆ ಏರ್‌ಇಂಡಿಯಾ ತನ್ನ ಸೇವೆ ರದ್ದುಗೊಳಿಸಿದೆ.

ಮನೆಯೊಳಗೇ ಇರಿ: 8 ಲಕ್ಷ ಕತಾರ್‌ ಭಾರತಿಯರಿಗೆ ಕೇಂದ್ರ ಸೂಚನೆಕತಾರ್‌ನಲ್ಲಿ 8 ಲಕ್ಷ ಭಾರತೀಯರಿದ್ದು, ಆತಂಕಕ್ಕೆ ಒಳಗಾಗದೆ ಮನೆಯೊಳಗೆ ಇರುವಂತೆ ಕೇಂದ್ರ ಸೂಚನೆ ನೀಡಿದೆ. ಇದೇ ವೇಳೆ ಬಹ್ರೇನ್‌ನಂತಹ ದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಟ್ಟೆ ಪ್ಯಾಕ್‌ ಮಾಡಿಟ್ಟುಕೊಳ್ಳುವಂತೆ ರಾಯಭಾರ ಕಚೇರಿ ಸಲಹೆ ಮಾಡಿದೆ ಎನ್ನಲಾಗಿದೆ.---

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಇರಾನ್‌ ಮೇಲೆ ದಾಳಿಗೆ ಅಮೆರಿಕ ಸೇನೆ ಸಿದ್ಧತೆ?
ಭಾರತದ ಮೇಲೆ ದಾಳಿಗಾಗಿ 1000 ಉಗ್ರರು ರೆಡಿ: ಅಜರ್‌