ಅಮೆರಿಕ, ಇಸ್ರೇಲ್‌ಗೆ ಇರಾನ್‌ ಹಾರ್ಟ್‌ ಅಟ್ಯಾಕ್‌ ಅಸ್ತ್ರ ಧಮಕಿ

Published : May 01, 2026, 07:29 AM IST
iran

ಸಾರಾಂಶ

ಉಭಯ ದೇಶಗಳ 2ನೇ ಸುತ್ತಿನ ಮಾತುಕತೆಯ ಸಾಧ್ಯತೆ ದೂರವಾಗಿ ಮತ್ತೆ ಯುದ್ಧದ ಕಾರ್ಮೊಡ ಆವರಿಸುತ್ತಿರುವ ಹೊತ್ತಿನಲ್ಲೇ ಶತ್ರುಪಡೆಗಳು ತೀವ್ರ ಭಯಪಡುವ ಮತ್ತು ಅವರಿಗೆ ಹಾರ್ಟ್‌ಅಟ್ಯಾಕ್ ಉಂಟುಮಾಡಬಹುದಾದ ಅಸ್ತ್ರ ಬಳಕೆ ಮಾಡುವುದಾಗಿ ಅಮೆರಿಕ ಮತ್ತು ಇಸ್ರೇಲ್‌ಗೆ ಇರಾನ್‌ ಎಚ್ಚರಿಕೆ ಸಂದೇಶ ರವಾನಿಸಿದೆ.

 ಟೆಹ್ರಾನ್‌: ಉಭಯ ದೇಶಗಳ 2ನೇ ಸುತ್ತಿನ ಮಾತುಕತೆಯ ಸಾಧ್ಯತೆ ದೂರವಾಗಿ ಮತ್ತೆ ಯುದ್ಧದ ಕಾರ್ಮೊಡ ಆವರಿಸುತ್ತಿರುವ ಹೊತ್ತಿನಲ್ಲೇ ಶತ್ರುಪಡೆಗಳು ತೀವ್ರ ಭಯಪಡುವ ಮತ್ತು ಅವರಿಗೆ ಹಾರ್ಟ್‌ಅಟ್ಯಾಕ್ ಉಂಟುಮಾಡಬಹುದಾದ ಅಸ್ತ್ರ ಬಳಕೆ ಮಾಡುವುದಾಗಿ ಅಮೆರಿಕ ಮತ್ತು ಇಸ್ರೇಲ್‌ಗೆ ಇರಾನ್‌ ಎಚ್ಚರಿಕೆ ಸಂದೇಶ ರವಾನಿಸಿದೆ.

ಸಂಧಾನ ಮಾತುಕತೆಗೆ ಇರಾನ್‌ ಮುಂದಿಟ್ಟಿದ್ದ ಮೂರು ಹಂತದ ಚರ್ಚೆಯ ಪ್ರಸ್ತಾಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿರಸ್ಕರಿಸಿದ್ದರು. ಜೊತೆಗೆ ಪರಮಾಣುರಹಿತ ಒಪ್ಪಂದಕ್ಕೆ ಸಹಿ ಹಾಕುವ ಕುರಿತು ಸರಿಯಾದ ತಿಳುವಳಿಕೆ ಇರಾನ್‌ಗೆ ಇಲ್ಲ. ಅವರು ಆದಷ್ಟು ಬೇಗ ಬುದ್ಧಿವಂತರಾಗಿ ವರ್ತಿಸುವುದು ಒಳಿತು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಷಿನ್‌ಗನ್‌ ಹಿಡಿದು ಬುಧವಾರವಷ್ಟೇ ಎಚ್ಚರಿಕೆ ನೀಡಿದ್ದರು.

ಅದಕ್ಕೆ ಗುರುವಾರ ತಿರುಗೇಟು 

ಇರಾನ್‌ ನೌಕಾಪಡೆಯ ಹಿರಿಯ ನೌಕಾಧಿಕಾರಿ ಶಹ್ರಮ್‌ ಇರಾನಿ, ‘ಶೀಘ್ರವೇ ನಾವು ಶತ್ರುಗಳನ್ನು ಅವರು ತೀವ್ರವಾಗಿ ಭಯಪಡುವ ಅಸ್ತ್ರದ ಮೂಲಕ ಕಟ್ಟಿಹಾಕಲಿದ್ದೇವೆ. ಅದು ಅವರ ಪಕ್ಕದಲ್ಲೇ ಇದೆ. ಈ ದಾಳಿಯಿಂದ ಅವರಿಗೆ ಹಾರ್ಟ್ಅಟ್ಯಾಕ್ ಆಗದೇ ಇರಲಿ ಎಂದು ನಾನು ಆಶಿಸುತ್ತೇನೆ’ ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಹೋರ್ಮುಜ್‌ ಜಲಸಂಧಿಯನ್ನು ಇರಾನ್‌ ನೌಕೆಗಳಿಗೆ ಮುಚ್ಚುವ ಮೂಲಕ ನಮ್ಮನ್ನು ಆರ್ಥಿಕವಾಗಿ ಕಟ್ಟಿಹಾಕಿ ನಮ್ಮನ್ನು ಸಂಧಾನದ ವೇದಿಕೆಗೆ ಕರೆತರಬಹುದು ಎಂದು ಟ್ರಂಪ್‌ ಆಡಳಿತ ಯೋಜಿಸಿದೆ. ಆದರೆ ಅವರ ಇಂಥದ್ದೊಂದು ಆಲೋಚನೆ ಅವರದ್ದೇ ಮಿಲಿಟರಿ ವಲಯದಲ್ಲಿ ದೊಡ್ಡ ಜೋಕ್‌ ಆಗಿ ಹೊರಹೊಮ್ಮಿದೆ’ ಎಂದು ಹೇಳಿದ್ದಾರೆ.

- ಶತ್ರುಗಳು ತೀವ್ರವಾಗಿ ಭಯಪಡುವ ಅಸ್ತ್ರ ಇದೆ: ಇರಾನ್‌

- ಮಧ್ಯಪ್ರಾಚ್ಯ ಯುದ್ಧದ ಸಂಧಾನಕ್ಕಾಗಿ 3 ಹಂತದ ಚರ್ಚೆ ಪ್ರಸ್ತಾವ ಇಟ್ಟಿದ್ದ ಇರಾನ್‌

- ಇದನ್ನು ತಿರಸ್ಕರಿಸಿದ್ದ ಟ್ರಂಪ್‌. ಇರಾನ್‌ಗೆ ತಿಳುವಳಿಕೆಯೇ ಇಲ್ಲ ಎಂದು ತಪರಾಕಿ

- ಗನ್‌ ಹಿಡಿದಿರುವ ಎಐ ಚಿತ್ರ ಸೃಷ್ಟಿಸಿ ‘ನಾನು ಇನ್ನು ಒಳ್ಳೆಯವನಲ್ಲ’ ಎಂದು ಎಚ್ಚರಿಕೆ

- ಇದಕ್ಕೆ ಇರಾನ್‌ ನೌಕಾಪಡೆಯ ಹಿರಿಯ ಅಧಿಕಾರಿ ಶಹ್ರಮ್‌ ಇರಾನಿಯಿಂದ ತಿರುಗೇಟು

- ಶತ್ರುಗಳು ಭಯಪಡುವ ಅಸ್ತ್ರ ಬಳಸುತ್ತೇವೆ, ಅದರಿಂದ ಹಾರ್ಟ್‌ ಅಟ್ಯಾಕ್‌ ಎಂದು ಧಮಕಿ

- ನಮ್ಮನ್ನು ಆರ್ಥಿಕವಾಗಿ ಕಟ್ಟಿ ಹಾಕಿ ಸಂಧಾನ ವೇದಿಕೆಗೆ ತರಲಾಗದು ಎಂದು ಆಕ್ರೋಶ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಇರಾನ್‌ ಮೇಲೆ ಭರ್ಜರಿ ಚುಟುಕು ದಾಳಿಗೆ ಅಮೆರಿಕ ಸಿದ್ಧತೆ?
ನಾನಿನ್ನು ಒಳ್ಳೆಯವನಾಗಿ ಇರಲ್ಲ: ಇರಾನ್‌ಗೆ ಟ್ರಂಪ್‌