ಪಾಕ್‌ ಉಗ್ರ ದೇಶ : ಇಸ್ರೇಲ್‌ - ಇಸ್ರೇಲ್‌ ದುಷ್ಟ ದೇಶ ಎಂದು ಪಾಕ್‌ ಸಚಿವ ಟ್ವೀಟ್‌

Published : Apr 11, 2026, 08:24 AM IST
pakistan israel conflict khawaja asif netanyahu lebanon strikes iran ceasefire middle east tension 2026

ಸಾರಾಂಶ

ಅಮೆರಿಕ, ಇಸ್ರೇಲ್‌ ಮತ್ತು ಇರಾನ್ ನಡುವಣ ಕದನವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದೇ ನಾನು ಎಂದು ಪಾಕಿಸ್ತಾನ ಬೀಗುತ್ತಿರುವ ನಡುವೆಯೇ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್‌, ಇಸ್ರೇಲ್‌ ಅನ್ನು ದುಷ್ಟ ಮತ್ತು ಕ್ಯಾನ್ಸರ್‌ ಕಾರಕ ಎಂದೆಲ್ಲಾ ಟೀಕಿಸಿದ್ದಾರೆ.

 ಇಸ್ಲಾಮಾಬಾದ್‌/ ಜೆರುಸಲೆಂ: ಅಮೆರಿಕ, ಇಸ್ರೇಲ್‌ ಮತ್ತು ಇರಾನ್ ನಡುವಣ ಕದನವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದೇ ನಾನು ಎಂದು ಪಾಕಿಸ್ತಾನ ಬೀಗುತ್ತಿರುವ ನಡುವೆಯೇ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್‌, ಇಸ್ರೇಲ್‌ ಅನ್ನು ದುಷ್ಟ ಮತ್ತು ಕ್ಯಾನ್ಸರ್‌ ಕಾರಕ ಎಂದೆಲ್ಲಾ ಟೀಕಿಸಿದ್ದಾರೆ. ಪಾಕ್‌ ಸಚಿವನ ಈ ಹೇಳಿಕೆಗೆ ಇಸ್ರೇಲ್‌ ಪ್ರಧಾನಿ ಕಚೇರಿಯೇ ಕೆಂಡಾಮಂಡಲವಾಗಿದ್ದು, ಮಧ್ಯಸ್ಥಿಕೆ ದೇಶವೊಂದರ ಇಂಥ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ಎಚ್ಚರಿಸಿದೆ.

ಜೊತೆಗೆ ಇಸ್ರೇಲ್‌ನ ವಿದೇಶಾಂಗ ಸಚಿವ ಗಿಡಿಯನ್‌, ಪಾಕಿಸ್ತಾನವನ್ನು ಭಯೋತ್ಪಾದಕ ಎಂದು ಬಣ್ಣಿಸುವ ಮೂಲಕ ಪಾಕಿಸ್ತಾನದ ಮರ್ಯಾದೆ ಹರಾಜು ಹಾಕಿದ್ದಾರೆ. ಈ ಬೆಳವಣಿಗೆ ಭಾರೀ ಮುಜುಗರಕ್ಕೆ ಕಾರಣವಾದ ಬೆನ್ನಲ್ಲೇ ಪಾಕಿಸ್ತಾನದ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಸಿಂ ಮುನೀರ್‌ ಅವರು ಖ್ವಾಜಾ ಆಸೀಫ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದರ ಬೆನ್ನಲ್ಲೇ ರಕ್ಷಣಾ ಸಚಿವ ತಮ್ಮ ವಿವಾದಾತ್ಮಕ ಟ್ವೀಟ್‌ ಅಳಿಸಿಹಾಕಿದ್ದಾರೆ.

ಸಚಿವನ ಎಡವಟ್ಟು:

ಪಾಕ್‌ ರಕ್ಷಣಾ ಸಚಿವ ಖ್ವಾಜಾ ಆಸೀಫ್‌ ತಮ್ಮ ಗುರುವಾರ ತಮ್ಮ ಎಕ್ಸ್‌ ಖಾತೆಯಲ್ಲಿ, ‘ಇಸ್ರೇಲ್‌ ದುಷ್ಟ, ಮಾನವೀಯತೆ ಮೇಲಿನ ಶಾಪ ಮತ್ತು ಕ್ಯಾನ್ಸರ್‌ಕಾರಕ ದೇಶ. ಮೊದಲಿಗೆ ಗಾಜಾ, ಬಳಿಕ ಇರಾನ್‌ ಮತ್ತು ಇದೀಗ ಲೆಬನಾನ್‌ನಲ್ಲಿ ಅಮಾಯಕ ನಾಗರಿಕನ್ನು ಹತ್ಯೆ ಮಾಡುತ್ತಿದೆ. ಆ ದೇಶವನ್ನು ನಿರ್ಮೂಲನೆ ಮಾಡಬೇಕು’ ಎಂದು ಟೀಕಿಸಿದ್ದರು.

ಆದರೆ ಮಧ್ಯಸ್ಥಗಾರ ರಾಷ್ಟ್ರದ ಸಚಿವನ ಹೇಳಿಕೆ ಇಸ್ರೇಲ್‌ನ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಕಚೇರಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ‘ಇಸ್ರೇಲ್‌ ವಿನಾಶಕ್ಕೆ ಪಾಕಿಸ್ತಾನದ ರಕ್ಷಣಾ ಸಚಿವರು ಕರೆ ನೀಡಿರುವುದು ಅತಿರೇಕದ ಸಂಗತಿ. ಯಾವುದೇ ಸರ್ಕಾರದಿಂದ ಅದರಲ್ಲಿಯೂ ವಿಶೇಷವಾಗಿ ಶಾಂತಿಗಾಗಿ ತಟಸ್ಥ ಮಧ್ಯಸ್ಥಗಾರ ಎಂದು ಹೇಳಿಕೊಳ್ಳುವ ಸರ್ಕಾರದಿಂದ ಈ ಹೇಳಿಕೆ ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದಿದೆ.

ಭಯೋತ್ಪಾದಕ ದೇಶ:

ಈ ನಡುವೆ ಪಾಕ್‌ ಸಚಿವನ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಇಸ್ರೇಲ್‌ನ ವಿದೇಶಾಂಗ ಸಚಿವ ಗಿಡಿಯನ್‌ ಸಾರ್‌, ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಟೀಕಿಸಿದ್ದಾರೆ. ಗಡಿಯಾಚೆಯಿಂದ ಭಯೋತ್ಪಾದನೆ ನಡೆಸುವ ಪಾಕಿಸ್ತಾನದ ವಿರುದ್ಧ ಇಸ್ರೇಲ್‌ ಮೊದಲಿನಿಂದಲೂ ಇದೇ ನಿಲುವು ಹೊಂದಿತ್ತಾದರೂ, ಬಹಿರಂಗವಾಗಿ ಎಂದಿಗೂ ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಬಣ್ಣಿಸಿರಲಿಲ್ಲ. 

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಇರಾನ್‌ಗೆ ಟ್ರಂಪ್‌ ಮತ್ತೆ ಡೆಡ್‌ಲೈನ್‌ - 24 ತಾಸಿನಲ್ಲಿ ಸಂಧಾನ ಆಗಲೇಬೇಕು
ಇರಾನ್‌ ಕದನ ನಿಲ್ಲಿಸಿದ್ದೇ ನಾನು ಎಂದು ಕೊಚ್ಚಿಕೊಳ್ಳುತ್ತಿದ್ದ ಪಾಕಿಸ್ತಾನದ ಮಾನ ಹರಾಜು