ಸಿಂದೂರದಲ್ಲಿ ಧ್ವಂಸವಾಗಿದ್ದ ಜೈಷ್‌ ಹೆಡ್‌ ಆಫೀಸ್‌ ಪುನರ್‌ ನಿರ್ಮಾಣ!

Published : Aug 24, 2026, 08:15 AM IST
jaish bahawalpur base rebuilt operation sindoor jem pakistan terror camp satellite images

ಸಾರಾಂಶ

ಭಾರತ ಕೈಗೊಂಡಿದ್ದ ಸೇನಾ ಕಾರ್ಯಾಚರಣೆ ‘ಆಪರೇಷನ್ ಸಿಂದೂರ’ದ ವೇಳೆ ಧ್ವಂಸಗೊಂಡಿದ್ದ ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಪ್ರಧಾನ ನೆಲೆಯನ್ನು (ಹೆಡ್‌ಕ್ವಾರ್ಟರ್‌) ಸಂಪೂರ್ಣವಾಗಿ ಪುನರ್‌ ನಿರ್ಮಿಸಲಾಗಿದೆ.

ಲಾಹೋರ್: ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು ನಡೆಸಿದ ಹಿಂದೂ ನರಮೇಧಕ್ಕೆ ಪ್ರತಿಯಾಗಿ ಭಾರತ ಕೈಗೊಂಡಿದ್ದ ಸೇನಾ ಕಾರ್ಯಾಚರಣೆ ‘ಆಪರೇಷನ್ ಸಿಂದೂರ’ದ ವೇಳೆ ಧ್ವಂಸಗೊಂಡಿದ್ದ ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಪ್ರಧಾನ ನೆಲೆಯನ್ನು (ಹೆಡ್‌ಕ್ವಾರ್ಟರ್‌) ಸಂಪೂರ್ಣವಾಗಿ ಪುನರ್‌ ನಿರ್ಮಿಸಲಾಗಿದೆ.

ಭಾರತೀಯ ಸಶಸ್ತ್ರ ಪಡೆಗಳು ಜೈಷ್‌ ಪ್ರಧಾನ ಕಚೇರಿಯ ಮೇಲೆ 15 ತಿಂಗಳ ಹಿಂದೆ ದಾಳಿ ಮಾಡಿದ್ದವು. ಆದರೆ ಈಗ ಮಾಧ್ಯಮಗಳಿಗೆ ಲಭ್ಯವಾಗಿರುವ ದೃಶ್ಯಗಳು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಶಿಬಿರವನ್ನು ಅಮೃತಶಿಲೆ, ಬಣ್ಣ ಮತ್ತು ಪ್ಲಾಸ್ಟರ್‌ ಬಳಸಿ ಪುನಃಸ್ಥಾಪಿಸಲಾಗಿದೆ ಎಂದು ತೋರಿಸುತ್ತವೆ.

ಮಸೀದಿ ಇರುವ ಈ ನೆಲೆಯ ಮರುನಿರ್ಮಾಣ

ಮಸೀದಿ ಇರುವ ಈ ನೆಲೆಯ ಮರುನಿರ್ಮಾಣಕ್ಕೆ ಪಾಕಿಸ್ತಾನ ಸರ್ಕಾರವೇ 25 ಕೋಟಿ ಪಾಕಿಸ್ತಾನಿ ರು. ನೀಡಿದೆ. ಇದರಲ್ಲಿ ಸುಮಾರು 11 ಕೋಟಿ ರು.ಗಳನ್ನು ಮರ್ಕಜ್ ಸುಭಾನಲ್ಲಾದ ಕೇಂದ್ರ ಸಭಾಂಗಣವನ್ನುಮರುಸ್ಥಾಪಿಸಲು ಖರ್ಚು ಮಾಡಲಾಗಿದೆ ಎಂದು ವರದಿಗಳು ಹೇಳಿವೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಯು ಮೇ 7, 2025 ರಂದು ಜೆಇಎಂ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿತ್ತು.

- 15 ತಿಂಗಳಲ್ಲೇ ತಲೆಎತ್ತಿದ ಬಹಾವಲ್ಪುರ ಕಚೇರಿ

- ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಷ್‌ ಎ ಮೊಹಮ್ಮದ್‌ ಕೇಂದ್ರ ಕಚೇರಿ

- ‘ಆಪರೇಷನ್‌ ಸಿಂದೂರ’ ವೇಳೆ ಭಾರತೀಯ ಸೇನೆಗಳಿಂದ ಕಚೇರಿ ಧ್ವಂಸ

- ಇದಾದ 15 ತಿಂಗಳಲ್ಲೇ ಮತ್ತೆ ನಿರ್ಮಾಣ. ಪಾಕ್‌ ಸರ್ಕಾರದಿಂದ ₹25 ಕೋಟಿ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಬಾಂಗ್ಲಾಕ್ಕೂ ಕರೆಂಟ್‌ ಶಾಕ್‌ : ರಾತ್ರಿ 8ಕ್ಕೆ ಅಂಗಡಿ ಬಂದ್‌!
ಜೈಲಲ್ಲೇ ಇಮ್ರಾನ್‌ ಸಾವು ಎಂದ ಪತ್ರಕರ್ತ: ಪಾಕ್‌ನಲ್ಲಿ ಸಂಚಲನ