ಭಾರತದಲ್ಲಿ ₹6 ಲಕ್ಷ ಕೋಟಿ ಹೂಡಿಕೆ: ಜಪಾನ್‌ ಘೋಷಣೆ

Published : Aug 30, 2025, 07:15 AM IST
Narendra Modi Japan Visit

ಸಾರಾಂಶ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜಪಾನ್‌ ಪ್ರವಾಸ ಯಶಸ್ವಿ ಆಗಿದ್ದು. ಮುಂದಿನ 1 ದಶಕದಲ್ಲಿ ಜಪಾನ್‌ ಭಾರತದಲ್ಲಿ ₹6 ಲಕ್ಷ ಕೋಟಿ (10 ಟ್ರಿಲಿಯನ್‌ ಯೆನ್‌) ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಇದಲ್ಲದೆ ಚಂದ್ರಯಾನ-5 ಅನ್ನು ಜಂಟಿಯಾಗಿ ಕೈಗೊಳ್ಳಲು ನಿರ್ಧರಿಸಿವೆ

ಟೋಕಿಯೋ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜಪಾನ್‌ ಪ್ರವಾಸ ಯಶಸ್ವಿ ಆಗಿದ್ದು. ಮುಂದಿನ 1 ದಶಕದಲ್ಲಿ ಜಪಾನ್‌ ಭಾರತದಲ್ಲಿ ₹6 ಲಕ್ಷ ಕೋಟಿ (10 ಟ್ರಿಲಿಯನ್‌ ಯೆನ್‌) ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಇದಲ್ಲದೆ ಚಂದ್ರಯಾನ-5 ಅನ್ನು ಜಂಟಿಯಾಗಿ ಕೈಗೊಳ್ಳಲು ನಿರ್ಧರಿಸಿವೆ. ಅಮೆರಿಕ-ಭಾರತ ಆರ್ಥಿಕ ಸಂಘರ್ಷದ ನಡುವೆಯೇ ಚೇತೋಹಾರಿಯಾದ ಈ ಸುದ್ದಿ ಹೊರಬಿದ್ದಿದೆ.

ವಾರ್ಷಿಕ ಭಾರತ-ಜಪಾನ್‌ ಶೃಂಗದಲ್ಲಿ ಮೋದಿ ಹಾಗೂ ಜಪಾನ್‌ ಪ್ರಧಾನಿ ಶಿಗೆರು ಇಶಿಬಾ ನಡುವೆ ನಡೆದ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು.

ಶೃಂಗದ ಬಳಿಕ ಮಾತನಾಡಿದ ಮೋದಿ, ‘ಜಪಾನ್‌ ಭಾರತದಲ್ಲಿ 1 ದಶಕದಲ್ಲಿ 5.98 ಲಕ್ಷ ಕೋಟಿ ರು. ಹೂಡಿಕೆ ಮಾಡುವ ಗುರಿ ಇಟ್ಟುಕೊಂಡಿದೆ, ಅಮೂಲ್ಯ ಖನಿಜಗಳು, ರಕ್ಷಣೆ ಮತ್ತು ತಂತ್ರಜ್ಞಾನದಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸಲು ಉಭಯ ದೇಶಗಳು ಮಾರ್ಗಸೂಚಿ ಸಿದ್ಧಪಡಿಸಿವೆ’ ಎಂದರು.

‘ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಭಾರತ-ಜಪಾನ್ ಸಹಕಾರವು ನಿರ್ಣಾಯಕವಾಗಿದೆ. ಎರಡೂ ಕಡೆಯವರು ಪಾಲುದಾರಿಕೆಯಲ್ಲಿ ಹೊಸ ಮತ್ತು ಸುವರ್ಣ ಅಧ್ಯಾಯಕ್ಕೆ ಬಲವಾದ ಅಡಿಪಾಯ ಹಾಕಿದ್ದೇವೆ. ನಾವು ಮುಕ್ತ, ಶಾಂತಿಯುತ, ಸಮೃದ್ಧ ಮತ್ತು ನಿಯಮಾಧಾರಿತ ಇಂಡೋ-ಪೆಸಿಫಿಕ್‌ ಸ್ಥಾಪನೆಗೆ ಬದ್ಧರಾಗಿದ್ದೇವೆ’ ಎಂದು ಹೇಳಿದರು.

ಜತೆಗೆ, ‘ಸೈಬರ್‌ ಭದ್ರತೆ ಮತ್ತು ಭಯೋತ್ಪಾದನೆ ಬಗ್ಗೆಯೂ ಎರಡೂ ರಾಷ್ಟ್ರಗಳಿಗೆ ಕಳವಳವಿದೆ. ಆದ್ದರಿಂದ ಭದ್ರತೆ ಮತ್ತು ಕಡಲ ಭದ್ರತೆ ಬಲಪಡಿಸುವಲ್ಲಿ ಸಮಾನ ಆಸಕ್ತಿ ಹೊಂದಿದ್ದೇವೆ. ಉತ್ತಮ ಜಗತ್ತನ್ನು ರೂಪಿಸುವಲ್ಲಿ ಬಲವಾದ ಪ್ರಜಾಪ್ರಭುತ್ವಗಳು ಸಹಜವಾಗಿ ಪಾಲುದಾರರು’ ಎಂದು ಮೋದಿ ಹೇಳಿದರು.

‘ಭಾರತೀಯರ ನೈಪುಣ್ಯತೆ ಹಾಗೂ ಜಪಾನ್‌ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಕಮಾಲ್‌ ಮಾಡಲಿದೆ’ ಎಂದು ಪ್ರಧಾನಿ ಹರ್ಷಿಸಿದರು.

- ಒಂದು ದಶಕದಲ್ಲಿ ಭಾರಿ ಹೂಡಿಕೆಗೆ ಜಪಾನ್‌ ಗುರಿ

- ಜಾಗತಿಕ ಶಾಂತಿ, ಸ್ಥಿರತೆಗೆ ಸಹಕಾರ ನಿರ್ಣಾಯಕ

- ಚಂದ್ರಯಾನ-5 ಜಂಟಿಯಾಗಿ ನಡೆಸಲು ನಿರ್ಧಾರ

- ಭಾರತ-ಜಪಾನ್‌ ವಾರ್ಷಿಕ ಶೃಂಗದ ಬಳಿಕ ಮೋದಿ ಹರ್ಷ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!
ಸಿಡ್ನಿಯಲ್ಲಿ ಇನ್ನೊಂದು ದಾಳಿ ಸಂಚು ವಿಫಲ