ಮಾಸ್ಕೋ: ರಷ್ಯಾದಿಂದ ಭಾರತಕ್ಕೆ ರಫ್ತಾಗುವ ರಸಗೊಬ್ಬರ ಪ್ರಮಾಣವು 2025ರ ಮೊದಲ 6 ತಿಂಗಳಲ್ಲಿ ಶೇ.20ರಷ್ಟು ಏರಿಕೆಯಾಗಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಭಾರತದ ರಸಗೊಬ್ಬರ ಆಮದಿನ ಪ್ರಮಾಣದಲ್ಲಿ ರಷ್ಯಾದ ಪಾಲು ಶೇ.33ರಷ್ಟಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ‘ಮೊದಲ 6 ತಿಂಗಳಿನಲ್ಲಿ ರಷ್ಯಾದ ರಫ್ತು 4 ಲಕ್ಷ ಟನ್ ಏರಿಕೆಯಾಗಿ, 25 ಲಕ್ಷ ಟನ್‌ಗೆ ತಲುಪಿದೆ. ಇದು ಶೇ.20ರಷ್ಟು ಏರಿಕೆಯಾಗಿದೆ. ಭಾರತದ ರೈತರ ಬೇಡಿಕೆಗಳನ್ನು ರಷ್ಯಾದ ಉತ್ಪಾದಕರು ಯಶಸ್ವಿಯಾಗಿ ಪೂರೈಸುತ್ತಿದ್ದಾರೆ. ಪಶ್ಚಿಮದ ನಿಷೇಧದ ಬಳಿಕ ಭಾರತವು ರಷ್ಯಾದ ಅತ್ಯಾಪ್ತವಾಗಿದೆ’ ಎಂದು ತಿಳಿಸಿದರು.