ಕುವೈತ್‌: ರಾಮ ಪ್ರತಿಷ್ಠಾಪನೆ ಸಂಭ್ರಮಿಸಿದ 9 ಭಾರತೀಯರ ವಜಾ

KannadaprabhaNewsNetwork | Updated : Jan 28 2024, 07:13 AM IST

ಸಾರಾಂಶ

ರಾಮಮಂದಿರದ ಉದ್ಘಾಟನೆಯ ದಿನ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಿದ ಅರೋಪದ ಮೇಲೆ ಕುವೈತ್‌ ಮೂಲದ ಕಂಪನಿಯೊಂದು ತನ್ನ 9 ಉದ್ಯೋಗಿಗಳನ್ನು ವಜಾ ಮಾಡಿದೆ.

ಕುವೈತ್‌: ಜ.22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಸಂಭ್ರಮಿಸಿದ್ದಕ್ಕೆ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾರತ ಮೂಲದ 9 ಮಂದಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.

ಈ 9 ಉದ್ಯೋಗಿಗಳು ಕುವೈತ್‌ನ 2 ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಜ.22ರಂದು ಪ್ರಾಣ ಪ್ರತಿಷ್ಠಾಪನೆಯಾದ ದಿನ ಕಚೇರಿಯಲ್ಲಿ ಸಿಹಿ ಹಂಚಿ ರಾಮ ಮಂದಿರವನ್ನು ಸಂಭ್ರಮಿಸಿದ್ದರು.

ಇದು ಬಾಬ್ರಿ ಮಸೀದಿ ಧ್ವಂಸಗೊಳಿಸಿ ಕಟ್ಟಲಾದ ಮಂದಿರ ಎಂಬ ಕಾರಣಕ್ಕೆ ಇವರನ್ನು ಕೆಲಸದಿಂದ ವಜಾ ಮಾಡಿ ಮರಳಿ ಭಾರತಕ್ಕೆ ಗಡೀಪಾರು ಮಾಡಲಾಗಿದೆ ಎಂದು ಮಲಯಾಳಂನ ಮಾಧ್ಯಮಂ ವರದಿ ಮಾಡಿದೆ.ಜ22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದರು.

Share this article