ಬಹಾವಲ್ಪುರ: ಆಪರೇಷನ್ ಸಿಂದೂರದ ವೇಳೆ ಭಾರತದ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಲಷ್ಕರ್-ಎ-ತೊಯ್ಬಾದ ಉಗ್ರ ಅಬ್ದುಲ್ ಅಜೀಜ್ ಪಾಕಿಸ್ತಾನದ ಬಹಾವಲ್ಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ವರದಿಗಳು ತಿಳಿಸಿವೆ.
ಈತ 2001ರ ಸಂಸತ್ ಮೇಲಿನ ದಾಳಿ, 26/11 ಮುಂಬೈ ದಾಳಿಯ ಪ್ರಮುಖ ಸಂಚುಕೋರನಾಗಿದ್ದ. ಲಷ್ಕರ್ ಉಗ್ರ ಸಂಘಟನೆಗೆ ವಿದೇಶಿ ಮೂಲಗಳಿಂದ ಹಣ ಸಂಗ್ರಹ, ಉಗ್ರ ಕೃತ್ಯಗಳ ಸಂಚು, ಶಸ್ತ್ರಾಸ್ತ್ರ ಸಂಗ್ರಹ, ಉಗ್ರರ ನೇಮಕದಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತಿದ್ದ. ಲಷ್ಕರ್‌ನ 2ನೇ ಮುಖಂಡ ಸೈಫುಲ್ಲಾ ಕಸೂರಿಯ ಬಲಗೈ ಬಂಟನಾಗಿದ್ದ.
6 ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಅಪಘಾತದಲ್ಲಿ 26770 ಜನರ ಸಾವು!
ನವದೆಹಲಿ: ಕಳೆದ ವರ್ಷ ಸೈಬರ್ ವಂಚಕರಿಂದಾಗಿ ಭಾರತೀಯರು 22,845 ಕೋಟಿ ರು.ಗಳನ್ನು ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಬಗ್ಗೆ ಲೋಕಸಭೆಯಲ್ಲಿ ಉತ್ತರಿಸಿದ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ರೆಡ್ಡಿ, ಕೇಂದ್ರ ಸರ್ಕಾರದ ಎನ್‌ಸಿಆರ್‌ಪಿ ಮತ್ತು ಸಿಎಫ್‌ಸಿಎಫ್‌ಆರ್‌ಎಂಎಸ್ ವೆಬ್‌ಸೈಟ್‌ನಲ್ಲಿ 36.37 ಲಕ್ಷ ದೂರುಗಳು ದಾಖಲಾಗಿವೆ.
2023ರಲ್ಲಿ 7465.18 ಕೋಟಿ ರು.ಗಳನ್ನು ಭಾರತೀಯರು ಕಳೆದುಕೊಂಡಿದ್ದರು. 2024ರಲ್ಲಿ ಅದು ಶೇ.42.08ರಷ್ಟು ಹೆಚ್ಚಾಗಿ 22,845 ಕೋಟಿ ರು.ಗಳನ್ನು ಜನರು ಕಳೆದುಕೊಂಡಿದ್ದಾರೆ. ಇದೇ ವೇಳೆ 5489 ಕೋಟಿ ರು.ಗಳನ್ನು ವಂಚಕರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
2024ರಲ್ಲಿ ಆನ್‌ಲೈನ್ ವಂಚಕರಿಂದ ನಾಗರಿಕರ ₹22845 ಕೋಟಿ ಲೂಟಿ