ಮಾಲ್ಡೀವ್ಸ್‌ ಅಧ್ಯಕ್ಷ ಮುಯಿಜು ಭಾರತ ದ್ವೇಷಕ್ಕೆ ಬಾಲಕ ಬಲಿ

KannadaprabhaNewsNetwork |  
Published : Jan 22, 2024, 02:21 AM ISTUpdated : Jan 22, 2024, 03:23 PM IST
Maldives

ಸಾರಾಂಶ

ಏರ್‌ಲಿಫ್ಟ್‌ಗೆ ಭಾರತದ ವಿಮಾನ ಇಲ್ಲದೇ ಮಾಲ್ಡೀವ್ಸ್‌ನಲ್ಲಿ ಬಾಲಕನೊಬ್ಬ ಸಾವು ಕಂಡಿದ್ದಾನೆ. ಈ ಘಟನೆಗೆ ನೇರ ಕಾರಣಕರ್ತರಾದ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರಿಗೆ ಅಲ್ಲಿನ ಸಂಸದರೂ ಸೇರಿದಂತೆ ದೇಶಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಭಾರತದ ವಿರುದ್ಧ ದ್ವೇಷ ಸಾಧಿಸುತ್ತಿರುವ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರ ನಡೆಯಿಂದಾಗಿ 14 ವರ್ಷದ ಬಾಲಕನೊಬ್ಬರ ಸಾವನ್ನಪ್ಪಿದ್ದಾನೆ.

ಗಾಫ್ಬು ಆಲಿಫ್‌ ವಿಲ್ಲಂಗಿಲಿಯಲ್ಲಿ ಬ್ರೇನ್‌ ಟ್ಯೂಮರ್‌ನಿಂದ ಬಳಲುತ್ತಿದ್ದ 14 ವರ್ಷದ ಬಾಲಕನೊಬ್ಬ ಬುಧವಾರ ರಾತ್ರಿ ಪಾರ್ಶ್ವವಾಯುವಿಗೆ ಒಳಗಾಗಿದ್ದ. ಕೂಡಲೇ ಬಾಲಕನನ್ನು ಚಿಕಿತ್ಸೆಗಾಗಿ ಮಾಲ್ಡೀವ್ಸ್‌ ರಾಜಧಾನಿ ಮಾಲೆಗೆ ಏರ್‌ಲಿಫ್ಟ್ ಮಾಡಬೇಕಿತ್ತು. 

ಆದರೆ ಅತಿ ಹೆಚ್ಚು ಬಳಕೆಯಲ್ಲಿದ್ದ ಭಾರತವು ಮಾಲ್ಡೀವ್ಸ್‌ಗೆ ನೀಡಿರುವ ಹಿಂದೂಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ ನಿರ್ಮಿತ ‘ಡಾರ್ನಿಯರ್‌’ ವಿಮಾನವನ್ನು ಬಳಸದಂತೆ ಮೊಹಮ್ಮದ್‌ ನಿಷೇಧ ಹೇರಿದ್ದಾರೆ.

ಹೀಗಾಗಿ ಬಾಲಕನ ಏರ್‌ಲಿಫ್ಟ್‌ ಮಾಡಲು ಸಾಧ್ಯವಾಗಿಲ್ಲ. ಮಾಲ್ಡೀವ್ಸ್ ಅಧಿಕಾರಿಗಳು ಹಾಗೂ ಸೇನೆ ಕೂಡ ಬಾಲಕನ ಕುಟುಂಬಸ್ಥರ ಕೂಗಿಗೆ ಸರಿಯಾದ ಸಮಯದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಹೀಗಾಗಿ ಚಿಕಿತ್ಸೆ ವಿಳಂಬವಾಗಿ ಬಾಲಕ ಮೃತಪಟ್ಟಿದ್ದಾನೆ.

ಮಾಲ್ಡೀವ್ಸ್‌ನಿಂದಲೇ ಮೊಯಿಜು ವಿರುದ್ಧ ಆಕ್ರೋಶ: ಇನ್ನು ಮೊಯಿಜು ಅವರ ನಿರ್ಧಾರದಿಂದಲೇ ಬಾಲಕನ ಸಾವನ್ನಪ್ಪಿದ್ದಾನೆ ಎಂದು ಆತನ ಕುಟುಂಬಸ್ಥರು, ಇತರ ಜನರು ಹಾಗೂ ಸಂಸದರೂ ಮುಯಿಜುಗೆ ತಪರಾಕಿ ಹಾಕಿದ್ದಾರೆ.

 ‘ಭಾರತದ ವಿರುದ್ಧದ ಅಧ್ಯಕ್ಷರ ದ್ವೇಷಕ್ಕೆ ಜನರು ತಮ್ಮ ಪ್ರಾಣ ಬಲಿ ಕೊಡಬೇಕಿಲ್ಲ’ ಎಂದು ಮಾಲ್ಡೀವ್ಸ್ ಸಂಸದ ಮೀಕೈಲ್ ನಸೀಮ್ ಟ್ವೀಟ್‌ ಮಾಡಿದ್ದಾರೆ.

PREV

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!