ಭಾರತೀಯ ಪಡೆಗಳು ನಮ್ಮ ಹಡಗು ಏರಿದ್ದೇಕೆ?: ಮಾಲ್ಡೀವ್ಸ್‌ ಸರ್ಕಾರ ಕ್ಯಾತೆ

KannadaprabhaNewsNetwork |  
Published : Feb 04, 2024, 01:35 AM ISTUpdated : Feb 04, 2024, 12:11 PM IST
ಭಾರತ ಮಾಲ್ಡೀವ್ಸ್ | Kannada Prabha

ಸಾರಾಂಶ

ಪ್ರವಾಸೋದ್ಯಮ ಹಾಗೂ ಸೇನಾ ಹಿಂತೆಗೆತ ವಿಚಾರದಲ್ಲಿ ಭಾರತದ ಜತೆ ಸಂಘರ್ಷಕ್ಕೆ ಇಳಿದಿರುವ ಮಾಲ್ಡೀವ್ಸ್, ಈಗ ನೌಕಾಪಡೆ ವಿಷಯದಲ್ಲಿ ತಗಾದೆ ತೆಗೆದಿದೆ.

ಮಾಲೆ: ಪ್ರವಾಸೋದ್ಯಮ ಹಾಗೂ ಸೇನಾ ಹಿಂತೆಗೆತ ವಿಚಾರದಲ್ಲಿ ಭಾರತದ ಜತೆ ಸಂಘರ್ಷಕ್ಕೆ ಇಳಿದಿರುವ ಮಾಲ್ಡೀವ್ಸ್, ಈಗ ನೌಕಾಪಡೆ ವಿಷಯದಲ್ಲಿ ತಗಾದೆ ತೆಗೆದಿದೆ. 

ಇತ್ತೀಚೆಗೆ ತನ್ನ ಸಮುದ್ರ ಜಲಸೀಮೆಯಲ್ಲಿ ಭಾರತದ ನೌಕಾಪಡೆ ಸಿಬ್ಬಂದಿ ತನ್ನ 3 ಹಡಗುಗಳನ್ನು ಅಕ್ರಮವಾಗಿ ಹತ್ತಿದ್ದರು ಎಂದು ಆರೋಪಿಸಿರುವ ಮಾಲ್ಡೀವ್ಸ್‌, ಈ ಬಗ್ಗೆ ಭಾರತ ಸರ್ಕಾರದಿಂದ ಸ್ಪಷ್ಟನೆ ಬಯಸಿದೆ. 

ತನ್ನ 3 ಮೀನುಗಾರಿಕಾ ದೋಣಿಗಳನ್ನು ಯಾವುದೇ ಅನುಮತಿ ಇಲ್ಲದೆ ಭಾರತೀಯ ಪಡೆಗಳು ಹತ್ತಿದ್ದು ಅಕ್ರಮ ಎಂದು ಮಾಲ್ಡೀವ್ಸ್‌ ಸರ್ಕಾರ ಹೇಳಿದೆ. ಆದರೆ ಭಾರತ ಈ ಬಗ್ಗೆ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.

PREV

Recommended Stories

ಪಾಕ್‌ನಿಂದ ಅಣ್ವಸ್ತ್ರ ಪರೀಕ್ಷೆ- ಪರೀಕ್ಷೆ ಮಾಡಲು ನಾವೂ ಸಜ್ಜು : ಡೊನಾಲ್ಡ್‌ ಟ್ರಂಪ್‌ !
ಕಿರ್ಕ್‌ ಪತ್ನಿ ಜತೆ ವ್ಯಾನ್ಸ್‌ ಆಪ್ತತೆ : ಉಷಾ ಜತೆ ವಿಚ್ಛೇದನ ವದಂತಿ