ಮಾನವೀಯತೆಯ ಯಶಸ್ಸು ನಮ್ಮ ಸಾಮೂಹಿಕ ಶಕ್ತಿಯಲ್ಲಿದೆಯೇ ಹೊರತು ಯುದ್ಧಭೂಮಿಯಲ್ಲಿ ಅಲ್ಲ : ಮೋದಿ ಶಾಂತಿ ಮಂತ್ರ

KannadaprabhaNewsNetwork |  
Published : Sep 24, 2024, 01:54 AM ISTUpdated : Sep 24, 2024, 04:20 AM IST
ವಿಶ್ವಸಂಸ್ಥೆಯಲ್ಲಿ ನಡೆದ ‘ಭವಿಷ್ಯದ ಶೃಂಗಸಭೆ’ಯಲ್ಲಿ ಮೋದಿ ಭಾಷಣ | Kannada Prabha

ಸಾರಾಂಶ

ಮಾನವೀಯತೆಯ ಯಶಸ್ಸು ನಮ್ಮ ಸಾಮೂಹಿಕ ಶಕ್ತಿಯಲ್ಲಿದೆಯೇ ಹೊರತು ಯುದ್ಧಭೂಮಿಯಲ್ಲಿ ಅಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಈ ಮೂಲಕ ಯುದ್ಧದಲ್ಲಿ ಮುಳುಗಿರುವ ಉಕ್ರೇನ್‌-ರಷ್ಯಾ ಹಾಗೂ ಇಸ್ರೇಲ್‌-ಹಮಾಸ್‌ ಯುದ್ಧದ ಬಗ್ಗೆ ಪರೋಕ್ಷವಾಗಿ ಶಾಂತಿ ಸಂದೇಶ ರವಾನಿಸಿದ್ದಾರೆ.

  ವಿಶ್ವಸಂಸ್ಥೆ : ‘ಮಾನವೀಯತೆಯ ಯಶಸ್ಸು ನಮ್ಮ ಸಾಮೂಹಿಕ ಶಕ್ತಿಯಲ್ಲಿದೆಯೇ ಹೊರತು ಯುದ್ಧಭೂಮಿಯಲ್ಲಿ ಅಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಈ ಮೂಲಕ ಯುದ್ಧದಲ್ಲಿ ಮುಳುಗಿರುವ ಉಕ್ರೇನ್‌-ರಷ್ಯಾ ಹಾಗೂ ಇಸ್ರೇಲ್‌-ಹಮಾಸ್‌ ಯುದ್ಧದ ಬಗ್ಗೆ ಪರೋಕ್ಷವಾಗಿ ಶಾಂತಿ ಸಂದೇಶ ರವಾನಿಸಿದ್ದಾರೆ. 

ಅಲ್ಲದೆ, ಉಗ್ರವಾದದ ವಿರುದ್ಧವೂ ಮತ್ತೆ ಚಾಟಿ ಬೀಸಿದ್ದಾರೆ.ಇದೇ ವೇಳೆ, ‘ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗಾಗಿ, ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳು ಮುಖ್ಯವಾಗಿವೆ. ಸುಧಾರಣೆಯು ಪ್ರಸ್ತುತ ಕಾಲದ ಅತ್ಯಂತ ಅವಶ್ಯವಾದ ಕ್ರಮವಾಗಿದೆ’ ಎಂದೂ ಮೋದಿ ಹೇಳಿದ್ದು, ವಿಶ್ವಸಂಸ್ಥೆ ಭದ್ರತಾ ಮಂಡಳಿಯಂಥ ಮಹತ್ವದ ಸಂಸ್ಥೆಗಳಲ್ಲಿ ಭಾರತಕ್ಕೆ ಕಾಯಂ ಸ್ಥಾನ ಸಿಗಬೇಕು ಎಂಬ ಬೇಡಿಕೆಯನ್ನು ಪರೋಕ್ಷವಾಗಿ ಒತ್ತಿ ಹೇಳಿದ್ದಾರೆ.

ತಮ್ಮ ಅಮೆರಿಕ ಭೇಟಿಯ ಅಂತಿಮ ದಿನದಂದು ನ್ಯೂಯಾರ್ಕ್ ನಗರದಲ್ಲಿ ವಿಶ್ವಸಂಸ್ಥೆಯಲ್ಲಿ ‘ಭವಿಷ್ಯದ ಶೃಂಗಸಭೆ’ ಉದ್ದೇಶಿಸಿ ಮಾತನಾಡಿದ ಮೋದಿ, ‘ಸುಸ್ಥಿರ ಅಭಿವೃದ್ಧಿಗೆ ಹಾಗೂ ಮಾನವ-ಕೇಂದ್ರಿತ ವಿಧಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. 

ಜನಕಲ್ಯಾಣ, ಆಹಾರ ಮತ್ತು ಆರೋಗ್ಯ ಬದ್ಧತೆ ಇಂದಿನ ಅಗತ್ಯ. ಭಾರತದಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವ ಮೂಲಕ, ಸುಸ್ಥಿರ ಅಭಿವೃದ್ಧಿ ಯಶಸ್ವಿಯಾಗಬಹುದೆಂದು ನಾವು ಸಾಬೀತುಪಡಿಸಿದ್ದೇವೆ’ ಎಂದರು.‘ಭಾರತವು ತನ್ನ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ’ ಎಂದು ಅವರು ಹೇಳಿದರು ಹಾಗೂ ‘ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗಾಗಿ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳು ಅಗತ್ಯ’ ಎಂದರು.

ಉಗ್ರವಾದಕ್ಕೆ ಚಾಟಿ:

‘ಜಾಗತಿಕ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ಗಂಭೀರ ಬೆದರಿಕೆಯಾಗಿ ಮುಂದುವರಿದಿದೆ’ ಎಂದ ಮೋದಿ, ‘ಸೈಬರ್, ಸಾಗರ ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳು ಸಂಘರ್ಷದ ಹೊಸ ರಂಗಭೂಮಿಗಳಾಗಿ ಹೊರಹೊಮ್ಮುತ್ತಿವೆ. ಈ ಎಲ್ಲ ಸಮಸ್ಯೆಗಳಲ್ಲಿ ವಿರುದ್ಧ ಜಾಗತಿಕ ಹೋರಾಟ ನಡೆಯಬೇಕು’ ಎಂದು ಆಗ್ರಹಿಸಿದರು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ ಯಹೂದಿಗಳ ನರಮೇಧ!
ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌