ಮಾಲ್ಡೀವ್ಸ್‌ ಅಧಕ್ಷರಿಗೆ ಚೀನಾ ಕೆಂಪು ಹಾಸಿನ ಸ್ವಾಗತ!

KannadaprabhaNewsNetwork |  
Published : Jan 11, 2024, 01:31 AM ISTUpdated : Jan 11, 2024, 11:11 AM IST
ಚೀನಾದಲ್ಲಿ ಮಾಲ್ಡೀವ್ಸ್‌ ಅಧ್ಯಕ್ಷ | Kannada Prabha

ಸಾರಾಂಶ

ಮಾಲ್ಡೀವ್ಸ್‌ ಅಧ್ಯಕ್ಷರಿಗೆ ಚೀನಾದಿಂದ ಭರ್ಜರಿ ಸತ್ಕಾರ ದೊರಕಿದ್ದು, ಕೆಂಪು ಹಾಸಿನ ಸ್ವಾಗತ, ಕುಶಾಲುತೋಪು, ಔತಣಕೂಟ ಏರ್ಪಡಿಸಲಾಗಿತ್ತು.

ಬೀಜಿಂಗ್‌: ಭಾರತ ವಿರೋಧಿ ನಿಲುವು ಹೊಂದಿರುವ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜುಗೆ ಚೀನಾ ಕೆಂಪುಹಾಸಿನ ಸ್ವಾಗತ ನೀಡಿ ಗೌರವಿಸಿದೆ. 5 ದಿನಗಳ ಭೇಟಿಗಾಗಿ ಆಗಮಿಸಿರುವ ಮುಯಿಜುಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಬುಧವಾರ ಕೆಂಪುಹಾಸಿನ ಸ್ವಾಗತ ನೀಡಿದರು.

ಜೊತೆಗೆ ಈ ವೇಳೆಗೆ ಅವರಿಗೆ 21 ಗನ್‌ಸಲ್ಯೂಟ್‌ ಕೂಡಾ ನೀಡಲಾಯಿತು. ನಗರದ ಸಾರ್ವಜನಿಕರ ಗ್ರೇಟ್‌ ಹಾಲ್‌ಗೆ ಬುಧವಾರ ದ್ವಿಪಕ್ಷೀಯ ಮಾತುಕತೆಗೆ ತೆರಳುವ ವೇಳೆ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು಼ಗೆ ಈ ರೀತಿ ವಿಶೇಷ ಗೌರವ ನೀಡಲಾಗಿದೆ.

ಅಲ್ಲದೆ 20 ದ್ವಿಪಕ್ಷೀಯ ಒಪ್ಪಂದ ಫಲಪ್ರದವಾದ ಬಳಿಕೆ ಷಿ ಜಿನ್‌ಪಿಂಗ್‌ ದಂಪತಿ ಮೊಹಮ್ಮದ್‌ ಮುಯಿಜುಗೆ ವಿಶೇಷ ಔತಣಕೂಟ ಕೂಡ ಏರ್ಪಡಿಸಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಕ್ಸಿಗೆ 100 ಅಡಿ ಉದ್ದದ ಕೆಂಪು ಹಾಸು ಹಾಕಿ ಟ್ರಂಪ್‌ ಸ್ವಾಗತ
ಚೀನಾಕ್ಕೆ ಭಾರತ ಉತ್ಪನ್ನ ರಫ್ತು ಶೇ.40ರಷ್ಟು ಹೆಚ್ಚಳ!