ನಿಜ್ಜರ್‌ ಹತ್ಯೆ: ಮೋದಿಗೆ ಕೆನಡಾ ‘ಕ್ಲೀನ್‌ಚಿಟ್‌’ - ಸಂಚು ಗೊತ್ತಿತ್ತು ಎಂಬ ವರದಿ ಊಹಾಪೋಹ : ಕೆನಡಾ

Published : Nov 23, 2024, 07:35 AM IST
PM Narendra Modi address Special Session of the Parliament of Guyana bsm

ಸಾರಾಂಶ

ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಸಂಚು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊದಲೇ ಗೊತ್ತಿತ್ತು’ ಎಂಬ ಕೆನಡಾದ ‘ಗ್ಲೋಬ್‌ ಆ್ಯಂಡ್ ಮೇಲ್‌’ ಎಂಬ ಪತ್ರಿಕೆಯ ವರದಿಯನ್ನು ಕೆನಡಾ ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದೆ.

ಒಟ್ಟಾವ: ‘ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಸಂಚು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊದಲೇ ಗೊತ್ತಿತ್ತು’ ಎಂಬ ಕೆನಡಾದ ‘ಗ್ಲೋಬ್‌ ಆ್ಯಂಡ್ ಮೇಲ್‌’ ಎಂಬ ಪತ್ರಿಕೆಯ ವರದಿಯನ್ನು ಕೆನಡಾ ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದೆ.

‘ಇವು ಕೇವಲ ಊಹಾಪೋಹ ಮತ್ತು ಅಸತ್ಯದ ಸಂಗತಿಗಳು. ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ಮಾಡಿರುವ ಸಾಕ್ಷ್ಯಗಳ ಕುರಿತು ನಮಗೆ ಅರಿವಿಲ್ಲ’ ಎಂದು ಪ್ರಧಾನಿ ಜಸ್ಟಿನ್‌ ಟ್ರುಡೋ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ನಥಾಲಿ ಜಿ. ಡ್ರೋಯಿನ್‌ ಸ್ಪಷ್ಟಪಡಿಸಿದ್ದಾರೆ.

‘ನಿಜ್ಜರ್‌ ಹತ್ಯೆಯ ಸಂಚಿನ ವಿಷಯ ಮೋದಿಗೆ ಗೊತ್ತಿತ್ತು. ಈ ಕುರಿತು ಕೆನಡಾ ಸರ್ಕಾರದ ಬಳಿ ಯಾವುದೇ ಸಾಕ್ಷ್ಯ ಇಲ್ಲವಾದರೂ, ಮೋದಿ ಗಮನಕ್ಕೆ ತಾರದೆಯೇ ನಿಜ್ಜರ್‌ ಹತ್ಯೆ ಸಂಚನ್ನು ಭಾರತದ ಗೃಹ ಸಚಿವ ಅಮಿತ್‌ ಶಾ, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮತ್ತು ರಕ್ಷಣಾ ಸಲಹೆಗಾರ ಅಜಿತ್‌ ದೋಲ್‌ ನಡೆಸಿರುವ ಸಾಧ್ಯತೆ ಇಲ್ಲವೇ ಇಲ್ಲ ಎಂಬುದು ಕೆನಡಾ ಗುಪ್ತಚರ ಸಂಸ್ಥೆಗಳ ವಾದ’ ಎಂದು ಕೆನಡಾ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಇತ್ತೀಚೆಗೆ ಗ್ಲೋಬ್‌ ಆ್ಯಂಡ್ ಮೇಲ್ ಪತ್ರಿಕೆ ವರದಿ ಮಾಡಿತ್ತು. ಆದರೆ ಈ ವರದಿಯನ್ನು ಹಾಸ್ಯಾಸ್ಪದ ಮತ್ತು ಭಾರತದ ವಿರುದ್ಧ ಸುಳ್ಳು ಆರೋಪ ಹೊರಿಸುವ ಅಭಿಯಾನದ ಭಾಗ ಎಂದು ಭಾರತ ಕಟುವಾಗಿ ಟೀಕಿಸಿತ್ತು.

PREV

Recommended Stories

ಯುದ್ಧದಲ್ಲಿ ಪರಸ್ಪರರಿಗೆ ಸಹಕಾರ : ಪಾಕಿಸ್ತಾನ - ಸೌದಿ ಅರೇಬಿಯಾ ಸಹಿ
ಪಾಕ್‌ ವಿರುದ್ಧ ಗೆದ್ದು ಪಹಲ್ಗಾಂ ಸಂತ್ರಸ್ತರು, ಸೇನೆಗೆ ಅರ್ಪಿಸಿದ ಭಾರತ ಕ್ರಿಕೆಟ್‌ ತಂಡ!