ಬ್ರಿಟನ್‌ನಲ್ಲಿ ವಲಸಿಗ ಮುಸ್ಲಿಂ ವರ್ಸಸ್‌ ಬ್ರಿಟಿಷರ ಮಧ್ಯೆ ಭಾರಿ ಸಂಘರ್ಷ : 3 ಹೆಣ್ಮಕ್ಕಳ ಹತ್ಯೆ ಬಳಿಕ ಹರಡಿದ ಹಿಂಸೆ

KannadaprabhaNewsNetwork |  
Published : Aug 05, 2024, 12:31 AM ISTUpdated : Aug 05, 2024, 04:20 AM IST
nancy tiwari

ಸಾರಾಂಶ

ಮೂವರು ಬಾಲಕಿಯರ ಹತ್ಯೆ ಪ್ರಕರಣ ಸಂಬಂಧ ಹಬ್ಬಿದ ವದಂತಿಯೊಂದು ಬ್ರಿಟನ್‌ನಲ್ಲಿ ಸ್ಥಳೀಯರು ಮತ್ತು ವಲಸಿಗ ಮುಸ್ಲಿಂ ಸಮುದಾಯದ ನಡುವೆ ಸಂಘರ್ಷ ಮತ್ತು ಹಿಂಸಾಚಾರಕ್ಕೆ ಕಾರಣವಾಗಿದೆ. ಕಳೆದ 4-5 ದಿನಗಳ ಹಿಂದೆ ಸಣ್ಣದಾಗಿ ಆರಂಭವಾಗಿದ್ದ ಪ್ರತಿಭಟನೆ ಇದೀಗ ದೇಶವ್ಯಾಪಿ 

 ಲಂಡನ್‌ :  ಮೂವರು ಬಾಲಕಿಯರ ಹತ್ಯೆ ಪ್ರಕರಣ ಸಂಬಂಧ ಹಬ್ಬಿದ ವದಂತಿಯೊಂದು ಬ್ರಿಟನ್‌ನಲ್ಲಿ ಸ್ಥಳೀಯರು ಮತ್ತು ವಲಸಿಗ ಮುಸ್ಲಿಂ ಸಮುದಾಯದ ನಡುವೆ ಸಂಘರ್ಷ ಮತ್ತು ಹಿಂಸಾಚಾರಕ್ಕೆ ಕಾರಣವಾಗಿದೆ. ಕಳೆದ 4-5 ದಿನಗಳ ಹಿಂದೆ ಸಣ್ಣದಾಗಿ ಆರಂಭವಾಗಿದ್ದ ಪ್ರತಿಭಟನೆ ಇದೀಗ ದೇಶವ್ಯಾಪಿಯಾಗಿದ್ದು, ಪೊಲೀಸ್ ಪಡೆಗಳು ಕನಿಷ್ಠ 100 ಮಂದಿಯನ್ನು ಬಂಧಿಸಿವೆ.

ಈ ನಡುವೆ ಇತ್ತೀಚೆಗೆ ನಡೆದ ಸಂಸತ್‌ ಚುನಾವಣೆ ವೇಳೆ ಮುಸ್ಲಿಮರಿಗೆ ಹಲವು ಭರವಸೆ ನೀಡಿ ಆಯ್ಕೆಯಾಗಿದ್ದ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಹಿಂಸಾಕೋರರ ಮೇಲೆ ಕ್ರಮಕ್ಕೆ ಆದೇಶಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಇತ್ತೀಚೆಗೆ ಮೂವರು ಬ್ರಿಟಿಷ್‌ ಬಾಲಕಿಯರನ್ನು ಹತ್ಯೆ ಮಾಡಿದ ಘಟನೆ ನಡೆದಿತ್ತು. ಬಳಿಕ ಕೃತ್ಯ ಎಸಗಿದ ಆಕ್ಸೆಲ್ ರುಡಕುಬಾನಾ ಎಂಬ 17 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆದರೆ ದಾಳಿಕೋರ ಮುಸ್ಲಿಂ ಎಂಬ ವದಂತಿ ಹರಡಿದ್ದರಿಂದ ಸ್ಥಳೀಯರು ಮತ್ತು ಬಲಪಂಥೀಯ ಸಂಘಟನೆಗಳು ಈಗ ಬೀದಿಗಿಳಿದಿವೆ.ಲಿವರ್‌ಪೂಲ್, ಹಲ್, ಬ್ರಿಸ್ಟಲ್, ಲೀಡ್ಸ್‌ನಲ್ಲಿ ನಡೆದ ಘರ್ಷಣೆಗಳಲ್ಲಿ ಪ್ರತಿಭಟನಾಕಾರರು ಸರ್ಕಾರಿ ಕಚೇರಿಗೆ ನುಗ್ಗಿ ಅಧಿಕಾರಿಗಳ ಮೇಲೆ ಕುರ್ಚಿಗಳು, ಜ್ವಾಲೆಗಳು ಮತ್ತು ಇಟ್ಟಿಗೆಗಳನ್ನು ಎಸೆದಿದ್ದಾರೆ. ಇದೇ ವೇಳೆ ಹತ್ತಿರದ ಮ್ಯಾಂಚೆಸ್ಟರ್‌ನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಹೊಡೆದಾಟಗಳು ನಡೆದಿವೆ.ಲೀಡ್ಸ್‌ನಲ್ಲಿ, ಸರಿಸುಮಾರು 150 ಜನರು ಇಂಗ್ಲಿಷ್ ಧ್ವಜಗಳನ್ನು ಹಿಡಿದುಕೊಂಡು, ‘ನೀವು ಇನ್ನು ಮುಂದೆ ಇಂಗ್ಲಿಷ್ ಅಲ್ಲ’ ಎಂದು ವಲಸಿಗರ ವಿರುದ್ಧ ಘೋಷಣೆ ಕೂಗಿದರು. ಅನೇಕ ಮುಸ್ಲಿಮರ ಆಸ್ತಿ ಪಾಸ್ತಿಗಳು ಹಾನಿಗೀಡಾಗಿವೆ.

ಮತ್ತೊಂದೆಡೆ ಹಲವು ನಗರಗಳಲ್ಲಿ ವಲಸಿಗ ಮುಸ್ಲಿಂ ಸಮುದಾಯ ಅಲ್ಲಾಹು ಅಕ್ಬರ್‌ ಘೋಷಣೆ ಕೂಗಿ, ಕೈಯಲ್ಲಿ ಮಾರಕಾಸ್ತ್ರ ಹಿಡಿದು ಪೊಲೀಸರ ಮೇಲೆ ದಾಳಿ ನಡೆಸಿದ ಘಟನೆಗಳೂ ನಡೆದಿವೆ.

- ದೇಶಾದ್ಯಂತ ಪ್ರತಿಭಟನೆ, ಹಿಂಸಾಚಾರಏಕೆ ಸಂಘರ್ಷ?

ಇತ್ತೀಚೆಗೆ ಮೂವರು ಬ್ರಿಟಿಷ್‌ ಬಾಲಕಿಯರು ಹತ್ಯೆಯಾಗಿದ್ದರು. ಕೃತ್ಯ ಎಸಗಿದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆತ ಮುಸ್ಲಿಂ ಎಂಬ ವದಂತಿ ಹರಡಿದ್ದರಿಂದ ಸ್ಥಳೀಯರು ಮತ್ತು ಬಲಪಂಥೀಯ ಸಂಘಟನೆಗಳು ಮುಸ್ಲಿಮರ ವಿರುದ್ಧ ಬೀದಿಗಿಳಿದಿವೆ. ಆದರೆ ಹಂತಕ ಕ್ರಿಶ್ಚಿಯನ್‌ ಆಗಿದ್ದಾನೆ.

ಆಗಿದ್ದು ಏನು?ಲಿವರ್‌ಪೂಲ್, ಹಲ್, ಬ್ರಿಸ್ಟಲ್, ಲೀಡ್ಸ್‌ನಲ್ಲಿ ಸರ್ಕಾರಿ ಕಚೇರಿಗೆ ನುಗ್ಗಿ ಅಧಿಕಾರಿಗಳ ಮೇಲೆ ಕುರ್ಚಿಗಳು, ಜ್ವಾಲೆಗಳು ಮತ್ತು ಇಟ್ಟಿಗೆಗಳನ್ನು ಎಸೆಯಲಾಗಿದೆ. ಮ್ಯಾಂಚೆಸ್ಟರ್‌ನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಹೊಡೆದಾಟ ನಡೆದಿವೆ. ಮುಸ್ಲಿಮರು ಅಲ್ಲಾ ಹು ಅಕ್ಬರ್‌ ಕೂಗುತ್ತಾ ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಉಗ್ರರಿಗೆ ಹೆದರಿ ಹೊಸ ವರ್ಷಾಚರಣೆಯೇ ರದ್ದು
ಬಾಂಗ್ಲಾ ಹಿಂದು ವ್ಯಕ್ತಿ ಹತ್ಯೆ : 7 ಮಂದಿ ಸೆರೆ