ಪಾಕ್‌ ಅಪಾಯಕಾರಿ ದೇಶ: ಬ್ರಿಟನ್‌ ಘೋಷಣೆ

KannadaprabhaNewsNetwork |  
Published : Apr 13, 2024, 01:01 AM ISTUpdated : Apr 13, 2024, 03:53 AM IST
ಉಗ್ರವಾದಿ | Kannada Prabha

ಸಾರಾಂಶ

ಬ್ರಿಟನ್‌ ಸರ್ಕಾರದ ವಿದೇಶಿ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್‌ಸಿಡಿಒ) ಪಾಕಿಸ್ತಾನವನ್ನು ‘ಪ್ರಯಾಣಿಸಲು ತುಂಬಾ ಅಪಾಯಕಾರಿ ದೇಶ’ ಎಂಬ ಪಟ್ಟಿಗೆ ಸೇರಿಸಿದೆ.

ಇಸ್ಲಾಮಾಬಾದ್: ಬ್ರಿಟನ್‌ ಸರ್ಕಾರದ ವಿದೇಶಿ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್‌ಸಿಡಿಒ) ಪಾಕಿಸ್ತಾನವನ್ನು ‘ಪ್ರಯಾಣಿಸಲು ತುಂಬಾ ಅಪಾಯಕಾರಿ ದೇಶ’ ಎಂಬ ಪಟ್ಟಿಗೆ ಸೇರಿಸಿದೆ. ತನ್ನ ನಾಗರಿಕರಿಗೆ ಈ ಸಂಬಂಧ ಅದು ಸೂಚನೆ ನೀಡಿದೆ.

ತಮ್ಮ ಇತ್ತೀಚಿನ ವರದಿಯಲ್ಲಿ ಬ್ರಿಟನ್‌ ಸರ್ಕಾರವು ಅಪಾಯಕಾರಿ ದೇಶಗಳ ಪಟ್ಟಿ ಇನ್ನೂ 8 ದೇಶಗಳನ್ನು ಸೇರಿಸಿದೆ. ಇದರೊಂದಿಗೆ ದೇಶಗಳ ಸಂಖ್ಯೆ 24ಕ್ಕೇರಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಅಪರಾಧ, ಯುದ್ಧ, ಭಯೋತ್ಪಾದನೆ, ರೋಗ, ಹವಾಮಾನ ಪರಿಸ್ಥಿತಿಗಳು ಮತ್ತು ನೈಸರ್ಗಿಕ ವಿಕೋಪಗಳನ್ನು ಗಮನದಲ್ಲಿ ಇರಿಸಿಕೊಂಡು ಪಟ್ಟಿ ಸಿದ್ಧಪಡಿಸಲಾಗಿದೆ. ಈ ಕಾರಣಗಳಿಂದ ಅಂಥ ದೇಶಗಳಿಗೆ ಹೋಗುವುದು ತರವಲ್ಲ ಎಂದು ತನ್ನ ನಾಗರಿಕರಿಗೆ ಬ್ರಿಟನ್ ಸೂಚನೆ ನೀಡಿದೆ

ಹೊಸದಾಗಿ ಸೇರ್ಪಡೆಯಾದ ದೇಶಗಳೆಂದರೆ ರಷ್ಯಾ, ಉಕ್ರೇನ್ (ಸಂಘರ್ಷಪೀಡಿತ ಗಾಜಾ ಸೇರಿ), ಇಸ್ರೇಲ್, ಇರಾನ್, ಸುಡಾನ್, ಲೆಬನಾನ್, ಬೆಲಾರಸ್ ಮತ್ತು ಪಾಕಿಸ್ತಾನ.

2023ರಲ್ಲಿ, ಪಾಕಿಸ್ತಾನವು 1,524 ಹಿಂಸಾಚಾರ-ಸಂಬಂಧಿತ ಸಾವುನೋವುಗಳಿಗೆ ಸಾಕ್ಷಿಯಾಗಿದೆ ಮತ್ತು 789 ಭಯೋತ್ಪಾದಕ ದಾಳಿಗಳನ್ನು ಕಂಡಿದೆ,

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಮೈಕ್‌ ಮೂಲಕ ಆಜಾನ್‌ ಕರೆ ನಿಷೇಧಕ್ಕೆ ಡೆನ್ಮಾಕ್‌ ಚಿಂತನೆ
1985ರ ಏರ್‌ ಇಂಡಿಯಾ ಸ್ಫೋಟಕ್ಕೆ ಖಲಿಸ್ತಾನಿಗಳು ಕಾರಣ: ಕೆನಡಾ ಒಪ್ಪಿಗೆ