ಸ್ಯಾನ್‌ಫ್ರಾನ್ಸಿಸ್ಕೋ: ವಿಮಾನವೊಂದು ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅದರ ಚಕ್ರ ಆಗಸದಿಂದ ಕೆಳಗೆ ಕಳಚಿಬಿದ್ದು, ಹಲವು ಕಾರುಗಳಿಗೆ ಹಾನಿಯಾದ ಘಟನೆ ಅಮೆರಿಕದಲ್ಲಿ ಸಂಭವಿಸಿದೆ. ಯುನೈಟೆಡ್ ಏರ್‌ಲೈನ್ಸ್‌ಗೆ ಸೇರಿದ ವಿಮಾನ ಸ್ಯಾನ್‌ಫ್ರಾನ್ಸಿಸ್ಕೋದಿಂದ ಜಪಾನ್‌ನ ಒಸಾಕಗೆ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅದರ ಚಕ್ರಗಳು ಆಗಸದಿಂದ ಕೆಳಗೆ ಉರುಳಿಬಿದ್ದಿದೆ. ಹೀಗಾಗಿ ಕೆಳಗಿದ್ದ ಕೆಲವು ಕಾರುಗಳಿಗೆ ಹಾನಿಯಾಗಿದೆ. ಹೀಗಾಗಿ 249 ಜನರಿದ್ದ ವಿಮಾನವನ್ನು ಲಾಸ್ ಏಂಜಲೀಸ್ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು.