ಪಾಕಲ್ಲೂ ಯಶ್‌ ರಾಮಾಯಣ ಬಿಡುಗಡೆ ಆಗ್ರಹಿಸಿ ಪ್ರತಿಭಟನೆ!

Published : Oct 31, 2026, 09:53 AM IST
Ramayana movie

ಸಾರಾಂಶ

ನಿತೇಶ್‌ ತಿವಾರಿ ನಿರ್ದೇಶನ, ಯಶ್‌ ಹಾಗೂ ರಣಬೀರ್‌ ಕಪೂರ್‌ ಮುಖ್ಯಭೂಮಿಕೆಯ ರಾಮಾಯಣ ಸಿನಿಮಾ ಪಾಕಿಸ್ತಾನದಲ್ಲೂ ಸದ್ದು ಮಾಡಿದ್ದು ಅಲ್ಲಿನ ಹಿಂದೂ ಜನರು ಸಿನಿಮಾದ ಬಿಡುಗಡೆಗೆ ಆಗ್ರಹಿಸಿದ್ದಾರೆ.

ನವದೆಹಲಿ: ನಿತೇಶ್‌ ತಿವಾರಿ ನಿರ್ದೇಶನ, ಯಶ್‌ ಹಾಗೂ ರಣಬೀರ್‌ ಕಪೂರ್‌ ಮುಖ್ಯಭೂಮಿಕೆಯ ರಾಮಾಯಣ ಸಿನಿಮಾ ಪಾಕಿಸ್ತಾನದಲ್ಲೂ ಸದ್ದು ಮಾಡಿದ್ದು ಅಲ್ಲಿನ ಹಿಂದೂ ಜನರು ಸಿನಿಮಾದ ಬಿಡುಗಡೆಗೆ ಆಗ್ರಹಿಸಿದ್ದಾರೆ.

ಮೆರವಣಿಗೆ ಹೋಗುತ್ತ ಸಿನಿಮಾ ಪರ ಘೋಷಣೆ

ಹಿಂದೂ ಸಮುದಾಯ ಸದಸ್ಯರು ಕರಾಚಿಯ ಬೀದಿಯಲ್ಲಿ ಮೆರವಣಿಗೆ ಹೋಗುತ್ತ ಸಿನಿಮಾ ಪರ ಘೋಷಣೆ ಕೂಗಿದ್ದಾರೆ. ಅಲ್ಲದೆ ಭಕ್ತಿ ಗೀತೆಗಳನ್ನು ಹಾಡುತ್ತ ‘ಜೈ ಶ್ರೀರಾಮ’ ಎಂದು ಘೋಷಣೆ ಕೂಗುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ.

ಅ.26ಕ್ಕೆ ಯೂಟ್ಯೂಬರ್‌ ಸುಮಿತ್‌ ಚಾಂಗ್ರಾ ದೃಶ್ಯದ ತುಣುಕೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಸಿನಿಮಾದ ಕರಾಚಿ ಹಿಂದೂ ಅಭಿಮಾನಿಗಳು ಬೀದಿಯಲ್ಲಿ ರಾಮಾಯಣ ಪೋಸ್ಟರ್‌ ಹಿಡಿದು ಭಜನೆಗಳನ್ನು ಹಾಡುತ್ತ ಮೆರವಣಿಗೆ ಸಾಗಿದರು. ಸದಸ್ಯರು ಕರಾಚಿ ದೇಗುಲವೊಂದಕ್ಕೆ ಪೋಸ್ಟರ್‌ ಅಂಟಿಸುವುದು ವಿಡಿಯೋದಲ್ಲಿ ಕಾಣಿಸಿದೆ. ಸಿನಿಮಾಗೆ ಶುಭಾಶಯ ಕೋರಿರುವ ಸದಸ್ಯರು ಸಿನಿಮಾ ಕರಾಚಿಯಲ್ಲೂ ಬಿಡುಗಡೆಯಾಗಲಿ ಎಂದಿದ್ದಾರೆ. ಸಿನಿಮಾ ನ.5ರಂದು ವಿಶ್ವಾದ್ಯಂತ ತೆರೆ ಕಾಣಲಿದೆ.

- ವಿಶ್ವಾದ್ಯಂತ ನ.5ರಂದು ಯಶ್‌ ಅಭಿನಯದ ರಾಮಾಯಣ ರಿಲೀಸ್‌

- ಭಾರತ-ಪಾಕ್ ನಂಟು ಹದಗೆಟ್ಟ ಕಾರಣ ಪಾಕ್‌ನಲ್ಲಿ ಬಿಡುಗಡೆ ಇಲ್ಲ

- ಕರಾಚಿ, ಲಾಹೋರ್‌ ಸೇರಿ ಹಲವೆಡೆ ಪಾಕ್‌ನಲ್ಲಿ ಹಿಂದು ಬಾಹುಳ್ಯ

- ಚಿತ್ರ ಪಾಕ್‌ನಲ್ಲೂ ಬಿಡುಗಡೆ ಆಗಲಿ ಎಂದು ಹಿಂದುಗಳ ಹೋರಾಟ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

₹10000 ಕೋಟಿ ಕೊಡ್ತೀವಿ ದಾಳಿ ನಿಲ್ಲಿಸ್ಬಿಡಿ: ಹೌತಿಗೆ ಸೌದಿ ಆಫರ್‌!
ಯುರೋಪ್‌ನ 5 ದೇಶಗಳಲ್ಲಿ ವೀಕೆಂಡ್‌ ದಂಗೆ