ಹಮಾಸ್‌ ಉಗ್ರರ ದಾಳಿ ಕುರಿತಚಿತ್ರ ಪ್ರದರ್ಶನಕ್ಕೆ ವಿರೋಧ

KannadaprabhaNewsNetwork | Updated : Nov 09 2023, 01:01 AM IST

ಸಾರಾಂಶ

ಹಮಾಸ್‌ ಉಗ್ರರಿಂದ ಇಸ್ರೇಲ್‌ನಲ್ಲಿ ಅ.7ರಂದು ನಡೆದ ಹತ್ಯಾಕಾಂಡವನ್ನು ಬಿಂಬಿಸುವ ಕಿರುಚಿತ್ರವನ್ನು ಇಸ್ರೇಲಿ ನಟಿ ಹಾಗೂ ಮಾಜಿ ಸೇನಾಧಿಕಾರಿ ಗ್ಯಾಲ್‌ ಗ್ಯಾಡೋಟ್‌ ನಿರ್ಮಿಸಿದ್ದು, ಲಾಸ್‌ ಎಂಜಲೀಸ್‌ನಲ್ಲಿ ಈ ಚಿತ್ರ ಪ್ರದರ್ಶನಕ್ಕೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ವಿರೋಧ ವ್ಯಕ್ತವಾಗಿದೆ

ಅಮೆರಿಕದಲ್ಲಿ ಪ್ರದರ್ಶನಕ್ಕೆ ಇಸ್ರೇಲ್‌ ನಟಿ ಗ್ಯಾಲ್‌ ಸಿದ್ಧತೆ

ಇಸ್ರೇಲ್‌ ದಾಳಿ ದಾಖಲಾಗಿಲ್ಲ ಎಂಬ ಕಾರಣಕ್ಕೆ ವಿರೋಧ ವಾಷಿಂಗ್ಟನ್‌: ಹಮಾಸ್‌ ಉಗ್ರರಿಂದ ಇಸ್ರೇಲ್‌ನಲ್ಲಿ ಅ.7ರಂದು ನಡೆದ ಹತ್ಯಾಕಾಂಡವನ್ನು ಬಿಂಬಿಸುವ ಕಿರುಚಿತ್ರವನ್ನು ಇಸ್ರೇಲಿ ನಟಿ ಹಾಗೂ ಮಾಜಿ ಸೇನಾಧಿಕಾರಿ ಗ್ಯಾಲ್‌ ಗ್ಯಾಡೋಟ್‌ ನಿರ್ಮಿಸಿದ್ದು, ಲಾಸ್‌ ಎಂಜಲೀಸ್‌ನಲ್ಲಿ ಈ ಚಿತ್ರ ಪ್ರದರ್ಶನಕ್ಕೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ವಿರೋಧ ವ್ಯಕ್ತವಾಗಿದೆ. 47 ನಿಮಿಷದ ಕಿರುಚಿತ್ರದಲ್ಲಿ ಕೇವಲ ಹಮಾಸ್‌ ಉಗ್ರರು ನಡೆಸಿರುವ ಹತ್ಯಾಕಾಂಡದ ಬಗ್ಗೆ ಮಾತ್ರ ಚಿತ್ರಿಸಲಾಗಿದ್ದು, ಆದರೆ ಇಸ್ರೇಲ್‌ ಸೇನೆ ಪ್ಯಾಲೆಸ್ತೀನ್‌ನಲ್ಲಿ ಅಮಾಯಕ 10,000 ನಾಗರಿಕರ ಹತ್ಯೆ ಮಾಡುವ ಕುರಿತು ಚಿತ್ರಿಸಿಲ್ಲ ಎಂದು ವಿರೋಧ ವ್ಯಕ್ತಪಡಿಸಲಾಗಿದೆ. ಮೂಲಗಳ ಪ್ರಕಾರ ಕಿರುಚಿತ್ರದ ಮೊದಲ ಪ್ರದರ್ಶನಕ್ಕೆ ಸುಮಾರು 120 ಗಣ್ಯರನ್ನು ಆಹ್ವಾನಿಸಲಾಗಿದ್ದು, ಚಿತ್ರಕ್ಕೆ ಬರುವ ಪ್ರತಿಕ್ರಿಯೆಯನ್ನು ನೊಡಿಕೊಮಡು ಮುಂದುವರೆಸಲು ಚಿತ್ರತಂಡ ಯೋಜಿಸಿದೆ.

ಆಸ್ಕರ್‌ ಪ್ರಶಸ್ತಿ ವಿಜೇತ ಗಯ್‌ ನಾಟಿವ್‌ ಅವರ ಶ್ರಮದಿಂದ ಈ ಕಿರುಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಮೆರಿಕನ್‌ ಜೀವಿಷ್‌ ಸಮಿತಿ ಹಾಗೂ ಮಾನಹಾನಿ ವಿರೋಧಿ ಸಮಿತಿ ಚಿತ್ರತಂಡ ಪ್ರದರ್ಶನಕ್ಕೆ ಸಹಾಯ ಮಾಡುತ್ತಿವೆ.

Share this article