ಉಕ್ರೇನ್‌ನ ಜೊತೆ ಯುದ್ಧದಲ್ಲಿರುವ ರಷ್ಯಾ : ರಕ್ಷಣಾ ಇಲಾಖೆಗೆ ದಾಖಲೆಯ ₹12.18 ಲಕ್ಷ ಕೋಟಿ

KannadaprabhaNewsNetwork |  
Published : Dec 02, 2024, 01:17 AM ISTUpdated : Dec 02, 2024, 04:14 AM IST
ಪುಟಿನ್‌ | Kannada Prabha

ಸಾರಾಂಶ

  ಉಕ್ರೇನ್‌ನ ಜೊತೆ ಯುದ್ಧದಲ್ಲಿರುವ ರಷ್ಯಾ ತನ್ನ ರಕ್ಷಣಾ ವೆಚ್ಚವನ್ನು ಭರಿಸಿಕೊಳ್ಳಲು ಬಜೆಟ್‌ನಲ್ಲಿ ದಾಖಲೆಯ 13.5 ಲಕ್ಷ ಕೋಟಿ ರುಬೆಲ್‌ (12.18 ಲಕ್ಷ ಕೋಟಿ ರು.) ನಿಗದಿಪಡಿಸಿದೆ.

ಕೀವ್‌: ಉಕ್ರೇನ್‌ನ ಜೊತೆ ಯುದ್ಧದಲ್ಲಿರುವ ರಷ್ಯಾ ತನ್ನ ರಕ್ಷಣಾ ವೆಚ್ಚವನ್ನು ಭರಿಸಿಕೊಳ್ಳಲು ಬಜೆಟ್‌ನಲ್ಲಿ ದಾಖಲೆಯ 13.5 ಲಕ್ಷ ಕೋಟಿ ರುಬೆಲ್‌ (12.18 ಲಕ್ಷ ಕೋಟಿ ರು.) ನಿಗದಿಪಡಿಸಿದೆ.

ಇದು ಒಟ್ಟು ಬಜೆಟ್‌ನಲ್ಲಿ ಶೇ.32ರಷ್ಟು ಪಾಲನ್ನು ಹೊಂದಿದ್ದು, ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ ಈ ವರ್ಷ ಶೇ.4ರಷ್ಟು ಹೆಚ್ಚಳವಾಗಿದೆ. ಇದಕ್ಕೆ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅಂಗೀಕಾರ ನೀಡಿದ್ದಾರೆ.

ಮತ್ತೊಂದೆಡೆ 2022ರ ಫೆಬ್ರವರಿಯಿಂದ ಆರಂಭವಾದ ಯುದ್ಧವನ್ನು ತೀವ್ರಗೊಳಿಸಿರುವ ರಷ್ಯಾ ಭಾನುವಾರ ದಕ್ಷಿಣ ಉಕ್ರೇನ್‌ನ ಖೆರ್ಸೋನ್‌ ನಗರದ ಮೇಲೆ ಡ್ರೋನ್‌ ದಾಳಿ ನಡೆಸಿದೆ. ಇದರಿಂದಾಗಿ 7 ಜನರು ಮೃತಪಟ್ಟು, 7ಕ್ಕೂ ಹೆಚ್ಚಿನ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಶನಿವಾರವೂ ಸಹ 4 ಜನರನ್ನು ರಷ್ಯಾ ಬಲಿಪಡೆದಿತ್ತು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಅಣ್ವಸ್ತ್ರ ಕ್ಷಿಪಣೀಲಿ ಇಂಧನ ಬದಲು ನೀರು ತುಂಬಿದ್ದ ಅಧ್ಯಕ್ಷ ಕ್ಸಿ ಆಪ್ತ!
ಇರಾನ್‌ ಬದಲು ವೆನಿಜುವೆಲಾದಿಂದ ಭಾರತ ತೈಲ ಖರೀದಿ : ಅಧ್ಯಕ್ಷ ಟ್ರಂಪ್‌