ವಿದೇಶಗಳಲ್ಲೂ ವಿಜೃಂಭಣೆಯ ಸಡಗರ

KannadaprabhaNewsNetwork | Updated : Jan 23 2024, 05:12 PM IST

ಸಾರಾಂಶ

ಅಯೋಧ್ಯೆಯ ಪ್ರಾಣಪ್ರತಿಷ್ಠಾಪನೆಯ ನಿಮಿತ್ತ ಮಾರಿಷಸ್‌ನಲ್ಲಿ 2 ತಾಸು ಸರ್ಕಾರಿ ರಜೆ ಘೋಷಿಸಲಾಗಿತ್ತು. ಅಮೆರಿಕ, ಮೆಕ್ಸಿಕೊ, ಫಿಜಿ, ಕೆನಡಾ, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ವಿಜೃಂಭಣೆಯಿಂದ ರಾಮಮಂದಿರದ ಪ್ರಾಣಪ್ರತಿಷ್ಠಾಪನೆಯನ್ನು ಆಚರಿಸಲಾಯಿತು.

ವಾಷಿಂಗ್ಟನ್‌/ ಪೋರ್ಟ್‌ ಆಫ್‌ ಸ್ಪೇನ್‌: ಅಯೋಧ್ಯೆಯಲ್ಲಿ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ನೆಲೆಯೂರುತ್ತಿದ್ದಂತೆ ವಿಶ್ವಾದ್ಯಂತ ಭಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸುಘಳಿಗೆಯನ್ನು ವಿಶ್ವಾದ್ಯಂತ ರಾಮಭಕ್ತರು ವಿಜೃಂಭಣೆಯಿಂದ ಆಚರಿಸಿದ್ದಾರೆ. ವಿಶೇಷ ಪೂಜೆ, ಹೋಮ ಹವನ, ಕಾರು ರ್‍ಯಾಲಿ, ಮೆರವಣಿಗೆ, ಭಕ್ತಿಗೀತೆಗಳು, ಭಜನೆಗಳ ಮೂಲಕ ಆಚರಿಸಿದರು.

ಅಮೆರಿಕದ ನ್ಯೂಯಾರ್ಕ್‌ನಲ್ಲಿನ ಟೈಮ್ಸ್‌ ಸ್ಕ್ವೇರ್‌ನಲ್ಲಿ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಾಯಿತು.

ಕ್ಯಾಲಿಫೋರ್ನಿಯಾದಲ್ಲಿ 1000ಕ್ಕೂ ಹೆಚ್ಚು ರಾಮ ಭಕ್ತರು ಕಾರ್‌ ರ್‍ಯಾಲಿ ಆಯೋಜಿಸಿದ್ದರು.

ಮಾರಿಷಸ್‌ನಲ್ಲಿ ಹಿಂದು ಸಮುದಾಯದ ಸರ್ಕಾರಿ ನೌಕರರಿಗೆ 2 ತಾಸು ರಜೆ ಘೋಷಿಸಲಾಗಿತ್ತು. ಮೆಕ್ಸಿಕೋದ ಮೊದಲ ರಾಮ, ಹನುಮ ಗುಡಿಯನ್ನು ಕ್ವೆರಾಟರೋದಲ್ಲಿ ಉದ್ಘಾಟಿಸಲಾಯಿತು.

ಉಳಿದಂತೆ ಕೆರಿಬಿಯನ್‌ ದ್ವೀಪಗಳಲ್ಲಿ, ಫಿಜಿ, ಕೆನಡಾ, ಆಸ್ಟ್ರೇಲಿಯಾ ದೇಶಗಳಲ್ಲಿ ವಿಜೃಂಭಣೆಯಿಂದ ಬಾಲರಾಮನ ಪ್ರತಿಷ್ಠಾಪನೆಯನ್ನು ಸಂಭ್ರಮಿಸಲಾಯಿತು.

Share this article