ಸದಾ ರಣಬಿಸಿಲಿಗೆ ಸಾಕ್ಷಿಯಾಗಿರುವ ಸೌದಿ ಅರೇಬಿಯಾದ ಅಲ್‌-ಜಾಫ್‌ ಮರುಭೂಮಿಯಲ್ಲಿ ಹಿಮಪಾತ!

KannadaprabhaNewsNetwork |  
Published : Nov 09, 2024, 01:11 AM ISTUpdated : Nov 09, 2024, 04:10 AM IST
ಸೌದಿ | Kannada Prabha

ಸಾರಾಂಶ

ಸದಾ ರಣಬಿಸಿಲಿಗೆ ಸಾಕ್ಷಿಯಾಗಿರುವ ಸೌದಿ ಅರೇಬಿಯಾದ ಅಲ್‌-ಜಾಫ್‌ ಮರುಭೂಮಿಯಲ್ಲಿ ಇದೇ ಮೊದಲ ಬಾರಿಗೆ ಭಾರೀ ಹಿಮಪಾತವಾಗಿದೆ. ಜೊತೆಗೆ ಧಾರಾಕಾರ ಮಳೆ ಹಾಗೂ ಆಲಿಕಲ್ಲು ಮಳೆ ಸುರಿದಿದೆ.

ರಿಯಾದ್‌: ಸದಾ ರಣಬಿಸಿಲಿಗೆ ಸಾಕ್ಷಿಯಾಗಿರುವ ಸೌದಿ ಅರೇಬಿಯಾದ ಅಲ್‌-ಜಾಫ್‌ ಮರುಭೂಮಿಯಲ್ಲಿ ಇದೇ ಮೊದಲ ಬಾರಿಗೆ ಭಾರೀ ಹಿಮಪಾತವಾಗಿದೆ. ಜೊತೆಗೆ ಧಾರಾಕಾರ ಮಳೆ ಹಾಗೂ ಆಲಿಕಲ್ಲು ಮಳೆ ಸುರಿದಿದೆ. ಇದರಿಂದ ಮರಳುಗಾಡಿನಲ್ಲಿ ಅಲ್ಲಲ್ಲಿ ಜಲಪಾತಗಳು ಸೃಷ್ಟಿಯಾಗಿವೆ. ಈ ದೃಶ್ಯದಿಂದ ಅಲ್ಲಿನ ನಿವಾಸಿಗಳು ಆಶ್ಚರ್ಯಚಕಿತರಾಗಿದ್ದಾರೆ.

ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ ಅರೇಬಿಯನ್‌ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದು ಒಮಾನ್‌ ಕಡೆ ಸಾಗಿದೆ. ಪರಿಣಾಮವಾಗಿ ಹವಾಮಾನ ಬದಲಾವಣೆಯಾಗಿದ್ದು, ಮಳೆ ಹಾಗೂ ಹಿಮಪಾತ ಸಂಭವಿಸಿದೆ.

ಈ ಹಿನ್ನೆಲೆಯಲ್ಲಿ ಇನ್ನೂ ಕೆಲ ದಿನಗಳು ಗುಡುಗು ಸಹಿತ ಭಾರೀ ಮಳೆ, ಆಲಿಕಲ್ಲು, ಬಿರುಗಾಳಿ ಸಂಭವಿಸುವ ಎಚ್ಚರಿಕೆ ನೀಡಲಾಗಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಬಾಂಗ್ಲಾ: ಮೃತ ದೀಪು ಇಸ್ಲಾಂ ಅವಹೇಳನಕ್ಕೆ ಸಾಕ್ಷಿಯೇ ಇಲ್ಲ
ಉಗ್ರರಿಗೆ ಹೆದರಿ ಹೊಸ ವರ್ಷಾಚರಣೆಯೇ ರದ್ದು