ಏಷ್ಯಾದ ಸೆಕೆಂಡ್‌ ಟಾಪ್‌-50ರಲ್ಲಿ ಭಾರತದ 5 ಹೋಟೆಲ್‌

KannadaprabhaNewsNetwork |  
Published : Mar 15, 2024, 01:16 AM ISTUpdated : Mar 15, 2024, 07:54 AM IST
ಅಮೆರಿಕಾನೋ ಹೋಟೆಲ್‌ | Kannada Prabha

ಸಾರಾಂಶ

ಮುಂಬೈನ ಮೂರು, ದೆಹಲಿಯ ಎರಡು ಹೋಟೆಲ್‌ಗೆ ಸ್ಥಾನ ಲಭಿಸಿದೆ.

ನವದೆಹಲಿ: ಏಷ್ಯಾದ ಸೆಕೆಂಡ್‌ ಟಾಪ್‌ 50 (51-100) ಹೋಟೆಲ್‌ಗಳ ಪಟ್ಟಿಯನ್ನು ವಿಲಿಯಂ ರೀಡ್‌ ಬ್ಯುಸಿನೆಸ್‌ ಮೀಡಿಯಾ ಬಿಡುಗಡೆ ಮಾಡಿದ್ದು, ಭಾರತದ 5 ಹೋಟೆಲ್‌ಗಳು ಸ್ಥಾನ ಪಡೆದಿವೆ. 

ಅದರಲ್ಲಿ ಮುಂಬೈನ ಅಮೆರಿಕಾನೋ (61), ಬಾಂಬೆ ಕ್ಯಾಂಟೀನ್‌ (70) ಮತ್ತು ಎಕಾ (98) ಹಾಗೂ ದೆಹಲಿ ದಂ ಪಖ್ತ್‌ (87) ಮತ್ತು ಗುರುಗ್ರಾಮದ ಕೊಮೊರಿನ್‌ (79) ಸ್ಥಾನಗಳಿಸಿದ ಭಾರತೀಯ ಹೋಟೆಲ್‌ಗಳಾಗಿವೆ. 

ಈ ಪಟ್ಟಿಯಲ್ಲಿ ಜಪಾನ್‌ನ ಟೋಕಿಯೋದ ಎಲ್‌ ಎಫೆರರ್‌ವೆಸೆನ್ಸ್‌ ಅಗ್ರಸ್ಥಾನದಲ್ಲಿದ್ದು, ಸಿಂಗಾಪುರ ಮತ್ತು ಟೋಕಿಯೋ ನಗರದಲ್ಲಿ ತಲಾ 8 ಹೋಟೆಲ್‌ಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಪಟ್ಟಿಯ ಟಾಪ್‌-50 ಹೋಟೆಲ್‌ಗಳನ್ನು ಮಾ.26ರಂದು ಸಿಯೋಲ್‌ನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ವೇಳೆ ಪ್ರಕಟಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಬಾಂಗ್ಲಾದ ಸಂಭಾವ್ಯ ಪ್ರಧಾನಿ ರಹಮಾನ್‌ ತವರಿಗೆ ವಾಪಸ್‌
ಚೀನಾದಲ್ಲಿ 1 ಮಗು ನೀತಿಯ ಜನನಿ ಪೆಂಗ್‌ ಪೆಯುನ್‌ ನಿಧನ