ಶೀಘ್ರ ಇರಾನ್- ಅಮೆರಿಕ 2ನೇ ಸುತ್ತಿನ ಮಾತುಕತೆ? - ಪಾಕ್‌ ಅಥವಾ ಜಿನೇವಾದಲ್ಲಿ ಸಭೆ?

Published : Apr 15, 2026, 07:26 AM IST
Donald trump

ಸಾರಾಂಶ

ಇತ್ತೀಚೆಗೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನಡೆದ ಸಂಧಾನ ಸಭೆ ವಿಫಲವಾದ ಹೊರತಾಗಿಯೂ 2ನೇ ಸುತ್ತಿನ ಮಾತುಕತೆಗೆ ಅಮೆರಿಕ ಮತ್ತು ಇರಾನ್‌ ಮುಂದಾಗಿವೆ ಎಂಬ ಆಶಾದಾಯಕ ಮಾಹಿತಿ ಲಭಿಸಿದೆ.

 ವಾಷಿಂಗ್ಟನ್‌: ಇತ್ತೀಚೆಗೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನಡೆದ ಸಂಧಾನ ಸಭೆ ವಿಫಲವಾದ ಹೊರತಾಗಿಯೂ 2ನೇ ಸುತ್ತಿನ ಮಾತುಕತೆಗೆ ಅಮೆರಿಕ ಮತ್ತು ಇರಾನ್‌ ಮುಂದಾಗಿವೆ ಎಂಬ ಆಶಾದಾಯಕ ಮಾಹಿತಿ ಲಭಿಸಿದೆ.

ಎರಡೂ ದೇಶಗಳ ನಡುವೆ ಹಿಂಬಾಗಿಲ ಮಾತುಕತೆ

ಈ ನಿಟ್ಟಿನಲ್ಲಿ ಎರಡೂ ದೇಶಗಳ ನಡುವೆ ಹಿಂಬಾಗಿಲ ಮಾತುಕತೆ ನಡೆಯುತ್ತಿದ್ದು, ಒಂದೆರೆಡು ದಿನಗಳಲ್ಲೇ ಮತ್ತೆ ಉಭಯ ದೇಶಗಳು ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಉಭಯ ದೇಶಗಳ ನಡುವೆ ಏರ್ಪಟ್ಟಿರುವ ಕದನವಿರಾಮ ಏ.21ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನ ಈ ಮಾತುಕತೆ ನಡೆಯುವ ಸಾಧ್ಯತೆ ಇದೆ.

 ಇಸ್ಲಾಮಾಬಾದ್‌ ಅಥವಾ ಸ್ವಿಜರ್ಲೆಂಡ್‌ನ ಜಿನೇವಾದಲ್ಲಿ ಮಾತುಕತೆ

ಈ ಹಿಂದಿನಂತೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ ಅಥವಾ ಸ್ವಿಜರ್ಲೆಂಡ್‌ನ ಜಿನೇವಾದಲ್ಲಿ ಮಾತುಕತೆ ನಡೆಯುವ ಸಾಧ್ಯತೆ ಇದೆ.

ಎರಡು ದಿನಗಳ ಹಿಂದೆ ನಡೆದ ಮಾತುಕತೆ ಯಾವುದೆ ಫಲ ನೀಡದ ಹೊರತಾಗಿಯೂ, ಮಾತುಕತೆ ಹಾದಿಯ ಬಗ್ಗೆ ಸಂಧಾನದಲ್ಲಿ ಭಾಗಿಯಾಗಿದ್ದ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಭರವಸೆಯ ಮಾತುಗಳನ್ನು ಆಡಿದ್ದರು. ನಾವು ಮಾತುಕತೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದೆವು. ಇರಾನ್‌ ನಮ್ಮ ಹಾದಿಯಲ್ಲಿ ಸಾಗಿಬಂದಿತ್ತು. ಆದರೆ ಅವರು ಇನ್ನಷ್ಟು ಕ್ರಮಿಸಿದ್ದರೆ ಮಾತುಕತೆ ಫಲಕಾಣಬಹುದಿತ್ತು ಎಂದು ಹೇಳಿದ್ದು, ಉಭಯ ದೇಶಗಳು ಸಾಕಷ್ಟು ಪ್ರಗತಿ ಸಾಧಿಸಿದ್ದವು ಎಂಬುದಕ್ಕೆ ಉದಾಹರಣೆಯಾಗಿತ್ತು.

ಮತ್ತೊಂದೆಡೆ ನಮ್ಮ ಬೇಡಿಕೆಗಳಿಗೆ ಇರಾನ್‌ ಒಪ್ಪಿದರೆ ಮಾತುಕತೆಗೆ ಸ್ವತಃ ತಾವೇ ಆಗಮಿಸುವುದಾಗಿ ಅಧ್ಯಕ್ಷ ಟ್ರಂಪ್‌ ಕೂಡಾ ಆಫರ್‌ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಇರಾನ್‌ಗೆ ಹೋರ್ಮುಜ್‌ ಬಂದ್‌! - ಇರಾನ್‌ ವಿರುದ್ಧ ಟ್ರಂಪ್‌ ದಿಗ್ಬಂಧನ ಅಸ್ತ್ರ
ಪೋಪ್‌ ವಿರುದ್ಧವೇ ತಿರುಗಿಬಿದ್ದ ಟ್ರಂಪ್‌!- ಯುದ್ಧವನ್ನು ದೇವರು ಮೆಚ್ಚಲ್ಲ ಎಂದು ಕ್ರೈಸ್ತರ ಪರಮೋಚ್ಚ ಗುರು ಹೇಳಿಕೆ