ಇಂಧನವಿಲ್ಲದೆ ಸಾವಿನಂಚಿನಲ್ಲಿರುವ ನೂರಾರು ಶಿಶುಗಳು
ಗಾಜಾ಼: ಗಾಜಾ಼ದ ಆಲ್-ಶಿಫಾ ಆಸ್ಪತ್ರೆಯನ್ನು ಇಸ್ರೇಲಿ ಸೇನಾ ಪಡೆಗಳು ಸುತ್ತುವರೆದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯೊಳಗಿದ್ದ ಸಾವಿರಾರು ಮಂದಿ ಪಲಾಯನಗೈದಿದ್ದಾರೆ. ಮತ್ತೊಂದೆಡೆ ಸರಿಯಾದ ಇಂಧನ ಪೂರೈಕೆಯಿಲ್ಲದೆ ನೂರಾರು ಶಿಶುಗಳು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿವೆ. ಆದರೆ ಇಸ್ರೇಲಿ ಸೇನಾ ಪಡೆಗಳು ಇಂಧನ ಪೂರೈಕೆ ಸ್ಥಗಿತ ವಿಚಾರವನ್ನು ಅಲ್ಲಗಳೆದಿದ್ದು, ಅಸ್ಪತ್ರೆಯ ಪರಿಧಿಯಲ್ಲೇ 79 ಗ್ಯಾಲನ್ (300 ಲೀಟರ್) ಇಂಧನ ಶೇಖರಿಸಿಟ್ಟಿರುವುದಾಗಿ ತಿಳಿಸಿದೆ. ಆದರೆ ಹಮಾಸ್ ಬಂಡುಕೋರರು ತಮಗೆ ಅದನ್ನು ಸಿಗದ ರೀತಿಯಲ್ಲಿ ಅಡಗಿಸಿಟ್ಟಿದ್ದಾರೆ ಎಂದು ಪ್ರತ್ಯಾರೋಪ ಮಾಡಿದೆ. ಈ ಹಿನ್ನೆಲೆಯಲ್ಲಿ ಆಲ್-ಶಿಫಾ ಆಸ್ಪತ್ರೆಯಲ್ಲಿ ಇನ್ನೂ ಅಶಕ್ತರು, ನವಜಾತ ಶಿಶುಗಳೂ ಸೇರಿದಂತೆ ನೂರಾರು ಮಂದು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.