ಇಸ್ರೇಲ್‌ ಕ್ಷಿಪಣಿ ದಾಳಿಗೆ ಪತ್ರಕರ್ತ ಬಲಿ: 6 ಮಂದಿಗೆ ಗಾಯ

KannadaprabhaNewsNetwork | Published : Oct 15, 2023 12:46 AM

ಸಾರಾಂಶ

ಇಸ್ರೇಲ್‌-ಲೆಬನಾನ್‌ ಸಂಘರ್ಷ ಸ್ಥಳದಲ್ಲಿ ವರದಿಗಾರಿಕೆ ವಾಯುದಾಳಿ
ಟೆಲ್‌ ಅವೀವ್‌: ಇಸ್ರೇಲ್‌-ಹಮಾಸ್‌ ಯುದ್ಧಕ್ಕೆ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು ಕೈಜೋಡಿಸಿರುವ ಹಿನ್ನೆಲೆಯಲ್ಲಿ ಲೆಬನಾನ್‌ ಮೇಲೂ ಇಸ್ರೇಲ್‌ ವಾಯುದಾಳಿ ನಡೆಸಿದ್ದು, ಸಂಘರ್ಷ ಸ್ಥಳದಲ್ಲಿ ವರದಿಗಾರಿಕೆ ಮಾಡುತ್ತಿದ್ದ ಒಬ್ಬ ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿಗಾರನು ದಾಳಿಗೆ ಬಲಿಯಾಗಿದ್ದಾನೆ. ಇನ್ನು 6 ಪತ್ರಕರ್ತರು ಗಾಯಗೊಂಡಿದ್ದಾರೆ. ಅಸುನೀಗಿದವ ವಿಡಿಯೋ ಪತ್ರಕರ್ತನನ್ನು ಇಸಾಂ ಅಬ್ದಲ್ಲಾ ಎಂದು ಗುರುತಿಸಲಾಗಿದ್ದು, ಗಾಯಗೊಂಡವರು ರಾಯಿಟರ್ಸ್‌, ಏಜೆನ್ಸ್‌ ಫ್ರಾನ್ಸ್‌ ಪ್ರೆಸ್‌ ಹಾಗೂ ಆಲ್‌ ಜಜೀ಼ರಾ ಸಂಸ್ಥೆಗೆ ಸೇರಿದವರಾಗಿದ್ದಾರೆ. ಈ ಬಗ್ಗೆ ವಿಶ್ವಸಂಸ್ಥೆ ಇಸ್ರೇಲ್‌ನ ವಿಶ್ವಸಂಸ್ಥೆ ಪ್ರತಿನಿಧಿ ಪ್ರತಿಕ್ರಿಯಿಸಿದ್ದು, ‘ಇದು ಉದ್ದೇಶಪೂರಿತ ಕೃತ್ಯವಲ್ಲ. ಯುದ್ಧಪೀಡಿತ ಪ್ರದೇಶದಲ್ಲಿ ಇವೆಲ್ಲ ಸಹಜ. ನಾವು ಪ್ರಕರಣವನ್ನು ತನಿಖೆಗೆ ಒಳಪಡಿಸುತ್ತೇವೆ’ ಎಂದು ತಿಳಿಸಿದ್ದಾರೆ. ಇನ್ನು ತಮ್ಮ ಪತ್ರಕರ್ತರು ಗಾಯಗೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುದ್ದಿಸಂಸ್ಥೆಗಳು, ಪ್ರೆಸ್‌ ಎಂದು ವಿಶಾಲವಾಗಿ ಕಾಣುವ ಜಾಕೆಟ್‌ ಹಾಕಿಕೊಂಡಿದ್ದರೂ ದಾಳಿ ಮಾಡಿರುವುದು ಅಮಾನವೀಯ ಎಂದು ಖಂಡಿಸಿವೆ.

Share this article