ಅಪರೂಪದ ಎಂಜಿನಿಯರಿಂಗ್ ಸಾಧನೆಯೊಂದರಲ್ಲಿ ಭೂಮಿಗೆ ಮರಳಿದ ‘ಸ್ಟಾರ್‌ಶಿಪ್ ರಾಕೆಟ್ ಬೂಸ್ಟರ್’ ಅನ್ನು ಎಲಾನ್ ಮಸ್ಕ್ ಒಡೆತನದ ‘ಸ್ಪೇಸ್‌ಎಕ್ಸ್’ ಕಂಪನಿ ಯಶಸ್ವಿಯಾಗಿ ಭಾನುವಾರ ‘ಕ್ಯಾಚ್’ ಮಾಡಿದೆ.
ಬೋಕಾ ಚಿಕಾ (ಅಮೆರಿಕ): ಅಪರೂಪದ ಎಂಜಿನಿಯರಿಂಗ್ ಸಾಧನೆಯೊಂದರಲ್ಲಿ ಭೂಮಿಗೆ ಮರಳಿದ ‘ಸ್ಟಾರ್‌ಶಿಪ್ ರಾಕೆಟ್ ಬೂಸ್ಟರ್’ ಅನ್ನು ಎಲಾನ್ ಮಸ್ಕ್ ಒಡೆತನದ ‘ಸ್ಪೇಸ್‌ಎಕ್ಸ್’ ಕಂಪನಿ ಯಶಸ್ವಿಯಾಗಿ ಭಾನುವಾರ ‘ಕ್ಯಾಚ್’ ಮಾಡಿದೆ. ಗಲ್ಫ್ ಆಫ್ ಮೆಕ್ಸಿಕೋ ಬಳಿ ಭಾನುವಾರ ಪ್ರಯೋಗಾರ್ಥವಾಗಿ ಈ ಪರೀಕ್ಷೆ ನಡೆದಿದ್ದು, ಅದ್ಭುತ ಸಾಧನೆ ಎಂದು ಬಣ್ಣಿಸಲಾಗಿದೆ.
ಸ್ಪೇಸ್‌ಎಕ್ಸ್ ತನ್ನದೇ ಲಾಂಚ್ ಪ್ಯಾಡ್‌ನಲ್ಲಿ ‘ಯಾಂತ್ರಿಕ ತೋಳಿನ’ ಟವರ್ ನಿರ್ಮಿಸಿತ್ತು. ತಾನೇ ಹಾರಿಸಿದ ರಾಕೆಟ್ ಬೂಸ್ಟರ್, ಉಡಾವಣೆಗೊಂಡ 7 ನಿಮಿಷಗಳ ನಂತರ ಭೂಮಿಗೆ ಮರಳಿದ್ದು, ಅದನ್ನು ಈ ಹಿಂದಿನಂತೆ ಜಲ ಪ್ರದೇಶದಲ್ಲಿ ಅಥವಾ ಸಮುದ್ರದಲ್ಲಿ ಬೀಳಿಸದೇ ಲಾಂಚ್ ಪ್ಯಾಡ್‌ನ ಟವರ್‌ನಲ್ಲಿದ್ದ ಯಾಂತ್ರಿಕ ತೋಳುಗಳ ಮೂಲಕ ‘ಕ್ಯಾಚ್’ ಮಾಡಿದೆ.
‘ಇದೊಂದು ಅದ್ಭುತ ಸಾಧನೆ. ಕಂಪನಿಯು ರಾಕೆಟ್ ಬೂಸ್ಟರ್ ಅನ್ನು ಸಾಗರಗಳಲ್ಲಿ ಅಥವಾ ನೀರಿನ ಪ್ರದೇಶದಲ್ಲಿ ಇಳಿಸುವ ಬದಲು ಲಾಂಚ್ ಪ್ಯಾಡ್‌ನಲ್ಲಿಯೇ ಮರಳಿ ಪಡೆದಿದ್ದು ಇದೇ ಮೊದಲು. ಇದು ಭವಿಷ್ಯದ ಉಡ್ಡಯನಕ್ಕೆ ಮಾದರಿ’ ಎಂದು ಎಲಾನ್ ಮಸ್ಕ್ ಹರ್ಷಿಸಿದ್ದಾರೆ.