ಭೂಮಿಗೆ ಸುನಿತಾ ಕರೆದು ತರಲು ನೌಕೆ ಅಂತರಿಕ್ಷಕ್ಕೆ : 9 ತಿಂಗಳಿದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ

KannadaprabhaNewsNetwork |  
Published : Mar 16, 2025, 01:46 AM ISTUpdated : Mar 16, 2025, 03:57 AM IST
ನಾಸಾ | Kannada Prabha

ಸಾರಾಂಶ

ಕಳೆದ 9 ತಿಂಗಳಿದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಹಾಗೂ ಸಹ ಗಗನಯಾತ್ರಿ ಬುಚ್‌ ವಿಲ್ಮೋರ್‌ ಕೊನೆಗೂ ಮಾ.19ರಂದು ಭೂಮಿಗೆ ಮರಳುವ ಸಾಧ್ಯತೆ ಇದೆ.

 ಕೇಪ್‌ ಕೆನವೆರಲ್‌: ಕಳೆದ 9 ತಿಂಗಳಿದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಹಾಗೂ ಸಹ ಗಗನಯಾತ್ರಿ ಬುಚ್‌ ವಿಲ್ಮೋರ್‌ ಕೊನೆಗೂ ಮಾ.19ರಂದು ಭೂಮಿಗೆ ಮರಳುವ ಸಾಧ್ಯತೆ ಇದೆ.  

ಭಾರತೀಯ ಕಾಲಮಾನ ಶನಿವಾರ ನಸುಕಿನ 4.33ಕ್ಕೆ ‘ಕ್ರೂ-10’ ಮಿಶನ್‌’ನ 4 ಹೊಸ ಗಗನಯಾತ್ರಿಗಳನ್ನು ಹೊತ್ತ ಫಾಲ್ಕನ್‌-9 ರಾಕೆಟ್‌ ಉಡಾವಣೆಯಾಗಿದೆ. ಭಾರತೀಯ ಕಾಲಮಾನ ಭಾನುವಾರ ಬೆಳಗ್ಗೆ 9 ಗಂಟೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿ ‘ಕ್ರೂ10’ ಕ್ಯಾಪ್ಸೂಲ್‌ ಡಾಕ್‌ ಆಗಲಿದೆ. ಬಳಿಕ ಮಾ.19ರಂದು ಇದೇ ಕ್ಯಾಪ್ಸೂಲ್‌, ಕಳೆದ 9 ತಿಂಗಳಿಂದ ಅಲ್ಲಿ ಸಿಲುಕಿರುವ ಸುನಿತಾ ಹಾಗೂ ವಿಲ್ಮೋರ್‌ ಅವರನ್ನು ಭೂಮಿಗೆ ಕರೆತರುವ ನಿರೀಕ್ಷೆ ಇದೆ ಎಂದು ಅಮೆರಿಕದ ವ್ಯೋಮ ಸಂಸ್ಥೆ ನಾಸಾ ಮೂಲಗಳು ಹೇಳಿವೆ. 

ಆದಾಗ್ಯೂ ಅವರ ಮರಳುವಿಕೆ ದಿನಾಂಕವು ಹವಾಮಾನ ಸ್ಥಿತಿಗತಿಯ ಮೇಲೆ ಅವಲಂಬಿತವಾಗಿರಲಿದೆ. ನಾಸಾ ಸಹಯೋಗದಲ್ಲಿ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌ ಒಡೆತನದ ಸ್ಪೇಸ್‌ಎಕ್ಸ್‌ ಕಂಪನಿಯ ಫಾಲ್ಕನ್‌-9 ರಾಕೆಟ್‌, ಕಳೆದ ಗುರುವಾರವೇ ಉಡ್ಡಯನಕ್ಕೆ ಸಜ್ಜಾಗಿತ್ತು. ಆದರೆ ಲಾಂಚ್‌ ಪ್ಯಾಡ್‌ ಸಮಸ್ಯೆಯಿಂದಾಗಿ ಅದು ನಭಕ್ಕೆ ನೆಗೆದಿರಲಿಲ್ಲ. ಈಗ ಉಡ್ಡಯನ ಯಶ ಕಂಡಿದ್ದು, ಅದರಲ್ಲಿ ಅಮೆರಿಕದ ಆನ್ ಮೆಕ್‌ಕ್ಲೇನ್‌, ನಿಕೋಲ್ ಅಯರ್ಸ್, ಜಪಾನ್‌ ಗಗನಯಾತ್ರಿ ಟಕುಯಾ ಒನಿಶಿ ಮತ್ತು ರಷ್ಯಾದ ‘ರೋಸ್ಕೋಸ್ಮೋಸ್’ ಸಂಸ್ಥೆ ಗಗನಯಾತ್ರಿ ಕಿರಿಲ್ ಪೆಸ್ಕೋವ್ ಇದ್ದಾರೆ. ಅವರು ಇನ್ನುಹಲವು ತಿಂಗಳು ಅಲ್ಲೇ ಇರಲಿದ್ದಾರೆ.

ಜೂನ್‌ನಲ್ಲಿ ಸುನಿತಾ ಹಾಗೂ ವಿಲ್ಮೋರ್‌ 8 ದಿನಗಳ ಮಿಷನ್‌ ಭಾಗವಾಗಿ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದರು. ಆದರೆ ಅವರನ್ನು ಹೊತ್ತೊಯ್ದಿದ್ದ ನೌಕೆಯಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಅದನ್ನು ಸಿಬ್ಬಂದಿರಹಿತವಾಗಿ ಭೂಮಿಗೆ ಕರೆಸಿಕೊಳ್ಳಲಾಗಿತ್ತು. ಬಳಿಕ ನಾನಾ ತಾಂತ್ರಿಕ ಸಮಸ್ಯೆಗಳಿಂದಾಗಿ 9 ತಿಂಗಳಿಂದ ಅವರ ವಾಪಸಾತಿ ಮುಂದೂಡಿಕೆ ಆಗುತ್ತಲೇ ಇದೆ.

PREV

Recommended Stories

ಭಾರತ ಮೇಲೆ ಮತ್ತಷ್ಟು ತೆರಿಗೆ : ಟ್ರಂಪ್‌ ಬೆದರಿಕೆ
ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!