ಚೀನಾ ವಿರುದ್ಧ ಅಮೆರಿಕದ ಹೊಸ ಬ್ರಹ್ಮಾಸ್ತ್ರ : ಅದಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಸರು

KannadaprabhaNewsNetwork |  
Published : Mar 22, 2025, 02:00 AM ISTUpdated : Mar 22, 2025, 04:11 AM IST
ಅಮೆರಿಕ | Kannada Prabha

ಸಾರಾಂಶ

ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರ ಕ್ಷೇತ್ರದಲ್ಲಿ ತನ್ನ ಪ್ರತಿಸ್ಪರ್ಧಿ ಚೀನಾಗೆ ಸಡ್ಡು ಹೊಡೆಯಲು ಅಮೆರಿಕ 6ನೇ ತಲೆಮಾರಿನ ಯುದ್ಧ ವಿಮಾನವನ್ನು ತಯಾರಿಸಲು ಮುಂದಾಗಿದೆ.

ವಾಷಿಂಗ್ಟನ್‌: ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರ ಕ್ಷೇತ್ರದಲ್ಲಿ ತನ್ನ ಪ್ರತಿಸ್ಪರ್ಧಿ ಚೀನಾಗೆ ಸಡ್ಡು ಹೊಡೆಯಲು ಅಮೆರಿಕ 6ನೇ ತಲೆಮಾರಿನ ಯುದ್ಧ ವಿಮಾನವನ್ನು ತಯಾರಿಸಲು ಮುಂದಾಗಿದೆ. ಎಫ್‌-47 ಹೆಸರಿನ ಈ ಯುದ್ಧ ವಿಮಾನದ ನಿರ್ಮಾಣ ಕಾರ್ಯವನ್ನು ಬೋಯಿಂಗ್‌ ಸಂಸ್ಥೆಗೆ ವಹಿಸಲಾಗಿದ್ದು, ಇದಕ್ಕಾಗಿ 20 ಬಿಲಿಯನ್‌ ಡಾಲರ್‌ (1.7 ಲಕ್ಷ ಕೋಟಿ ರು.) ನೀಡಲು ಅಮೆರಿಕ ನಿರ್ಧರಿಸಿದೆ.

ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದು, ‘47 ಅದ್ಭುತವಾದ ಸಂಖ್ಯೆಯಾಗಿದೆ. ವೇಗ, ಪೇಲೋಡ್‌ ಸಾಮರ್ಥ್ಯ ಮತ್ತು ಹಾರಾಟದ ಕೌಶಲ್ಯದಲ್ಲಿ ಇದಕ್ಕೆ ಸರಿಸಾಟಿಯಾದ ಯಾವುದೇ ವಿಮಾನ ಇಡೀ ವಿಶ್ವದಲ್ಲೇ ಇಲ್ಲ. ಇದು ಈವರೆಗೆ ವಾಯುಪಡೆಯ ಬೆನ್ನುಮೂಳೆಯಂತಿದ್ದ 5ನೇ ತಲೆಮಾರಿನ ಎಫ್‌-22 ಜಾಗವನ್ನು ತುಂಬಲಿದೆ’ ಎಂದು ಹೇಳಿದ್ದಾರೆ.

ಟ್ರಂಪ್‌ ಅವರು ಅಮೆರಿಕದ 47ನೇ ಅಧ್ಯಕ್ಷರಾಗಿದ್ದು, ಹೊಸ ಯುದ್ಧವಿಮಾನಕ್ಕೆ ಎಫ್‌-47 ಎಂದು ಹೆಸರಿಡುವ ಮೂಲಕ ಪರೋಕ್ಷವಾಗಿ ಅವರ ಹೆಸರಿಡಲಾಗಿರುವುದು ವಿಶೇಷ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಅಣ್ವಸ್ತ್ರ ಕ್ಷಿಪಣೀಲಿ ಇಂಧನ ಬದಲು ನೀರು ತುಂಬಿದ್ದ ಅಧ್ಯಕ್ಷ ಕ್ಸಿ ಆಪ್ತ!
ಇರಾನ್‌ ಬದಲು ವೆನಿಜುವೆಲಾದಿಂದ ಭಾರತ ತೈಲ ಖರೀದಿ : ಅಧ್ಯಕ್ಷ ಟ್ರಂಪ್‌