ಲಾಸ್ ಏಂಜಲೀಸ್ ನೂನತ ಮೇಯರ್ ಆಗಿ ಡೆಮಾಕ್ರಟಿಕ್ ಪಕ್ಷದ ನಾಯಕಿ ಕೇರಳ ಮೂಲದ ನಿತ್ಯಾ ರಾಮನ್ (45) ಆಯ್ಕೆಯಾಗಿದ್ದಾರೆ.
- ಲಾಸ್‌ಏಂಜಲೀಸ್‌ಗೆ ಕೇರಳ ಮೂಲದ ನಿತ್ಯಾ ಆಯ್ಕೆ । ನ್ಯೂಯಾರ್ಕ್‌ನಲ್ಲಿ ಜೊಹ್ರಾನ್ ಮಮ್ದಾನಿ ಅಧಿಕಾರನ್ಯೂಯಾರ್ಕ್: ಲಾಸ್ ಏಂಜಲೀಸ್ ನೂನತ ಮೇಯರ್ ಆಗಿ ಡೆಮಾಕ್ರಟಿಕ್ ಪಕ್ಷದ ನಾಯಕಿ ಕೇರಳ ಮೂಲದ ನಿತ್ಯಾ ರಾಮನ್ (45) ಆಯ್ಕೆಯಾಗಿದ್ದಾರೆ. ಈ ಮೂಲಕ, ಅಮೆರಿಕದ 2ನೇ ಅತಿದೊಡ್ಡ ನಗರದ ಮೇಯರ್ ಆಗಿ ಆಯ್ಕೆಯಾದ ಮೊದಲ ದಕ್ಷಿಣ ಏಷ್ಯಾ ಮೂಲದ ವ್ಯಕ್ತಿ ಎಂಬ ಇತಿಹಾಸ ಸೃಷ್ಟಿಸಿದ್ದಾರೆ. ನ.3ರಂದು ಲಾಸ್ ಏಂಜಲೀಸ್‌ನ ಸಿಟಿ ಕೌನ್ಸಿಲ್ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕರೆನ್ ಬಾಸ್ ವಿರುದ್ಧ ನಿತ್ಯಾ ಗೆಲುವು ಸಾಧಿಸಿದ್ದಾರೆ.
ಇದರೊಂದಿಗೆ ಅಮೆರಿಕದ 2 ಅತಿದೊಡ್ಡ ನಗರಗಳಲ್ಲಿ ಭಾರತೀಯ ಮೂಲದ ವ್ಯಕ್ತಿಗಳು ಮೇಯರ್ ಹುದ್ದೆ ಅಲಂಕರಿಸಿದಾಗಿದೆ. ಕೆಲ ತಿಂಗಳ ಹಿಂದೆ ಅಮೆರಿಕ ಅತ್ಯಂತ ದೊಡ್ಡ ನಗರವಾದ ನ್ಯೂಯಾರ್ಕ್‌ನ ಮೇಯರ್ ಆಗಿರುವ ಜೊಹ್ರಾನ್ ಮಮ್ದಾನಿ ಆಯ್ಕೆಯಾಗಿದ್ದರು.ನಿತ್ಯಾ ಯಾರು?:
ಕೇರಳದಲ್ಲಿ ಜನಿಸಿದ ರಾಮನ್, 6 ವರ್ಷದವರಿದ್ದಾಗ ಪರಿವಾರ ಸಮೇತ ಅಮೆರಿಕಕ್ಕೆ ತೆರಳಿದ್ದರು. ಅಂದಿನಿಂದ ಅಲ್ಲೇ ನೆಲೆಸಿರುವ ಅವರು ಹಾರ್ವರ್ಡ್ ಕಾಲೇಜು ಹಾಗೂ ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎಂಐಟಿ) ಶಿಕ್ಷಣ ಪಡೆದಿದ್ದು, ನಗರ ಯೋಜನಾ ತಜ್ಞೆ ಆಗಿದ್ದಾರೆ. ಶಿಕ್ಷಣ ಪೂರ್ಣಗೊಳಿಸಿದ ನಂತರ ಭಾರತಕ್ಕೆ ಮರಳಿದ ರಾಮನ್, 2013ರಲ್ಲಿ ಮತ್ತೆ ಲಾಸ್ ಏಂಜಲೀಸ್‌ಗೆ ತೆರಳಿದರು. ಅಲ್ಲಿ ನಿರಾಶ್ರಿತರಿಗಾಗಿ ಸಂಸ್ಥೆಯೊಂದನ್ನು ಸ್ಥಾಪಿಸಿದರು. 2019ರಲ್ಲಿ ರಾಜಕೀಯ ಪ್ರವೇಶ ಮಾಡಿದ ನಿತ್ಯಾ, ಮೊದಲ ಯತ್ನದಲ್ಲೇ ನಗರ ಮಂಡಳಿಗೆ ಆಯ್ಕೆಯಾದರು. ಇದೀಗ ಮೇಯರ್ ಚುನಾವಣೆಯಲ್ಲೂ ಅದೃಷ್ಟ ಅವರ ಕೈಹಿಡಿದಿದೆ.ಮಮ್ದಾನಿ ಹಿನ್ನೆಲೆ:ನ್ಯೂಯಾರ್ಕ್ ಮೇಯರ್ ಝೋಹ್ರಾನ್ ಮಾಮ್ದಾನಿ ಅವರ ಪೋಷಕರು ಭಾರತದವರು. ಮುಂಬೈ ಮೂಲದ ಗುಜರಾತಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ತಂದೆ ಮಹಮೂದ್ ಮಾಮ್ದಾನಿ ಅವರ ಕುಟುಂಬ ಪೂರ್ವ ಆಫ್ರಿಕಾದಲ್ಲಿ ನೆಲೆಸಿತ್ತು. ಇತ್ತ ಪಂಜಾಬಿ ಹಿಂದೂ ಆಗಿರುವ ಖ್ಯಾತ ನಿರ್ಮಾಪಕಿ ಮೀರಾ ನಾಯರ್ ಅವರು 1991ರಲ್ಲಿ ಮಹಮೂದ್‌ರನ್ನು ವರಿಸಿದ್ದು, ಜೊಹ್ರಾನ್ 7 ವರ್ಷದವರಿದ್ದಾಗ ನ್ಯೂಯಾರ್ಕ್‌ಗೆ ಸ್ಥಳಾಂತರಗೊಂಡರು.
==ಲಾಸ್ ಏಂಜಲೀಸ್ ನಗರದ ಮುಂದಿನ ಮೇಯರ್ ಆಗಿ ಆಯ್ಕೆಯಾಗುತ್ತಿರುವುದಕ್ಕೆ ತೀವ್ರ ಹೆಮ್ಮೆಪಡುತ್ತೇನೆ. ಜನರಿಗೆ ಕೈಗೆಟಕುವ ದರದಲ್ಲಿ ವಸಲಿ, ಮಕ್ಕಳಿಗೆ ಆಟವಾಡಲು ಪಾರ್ಕ್, ಉತ್ತಮ ಸಾರಿಗೆ ಸಂಪರ್ಕ, ಕಾರ್ಮಿಕರು ಹಾಗೂ ಅವರ ಕುಟುಂಬಕ್ಕೆ ಸುರಕ್ಷಿತ ನಗರದ ಕನಸಿಗಾಗಿ ಕೆಲಸ ಮಾಡುತ್ತೇನೆ ಎಂದು ನಿತ್ಯಾ ರಾಮನ್ ಅವರು ತಿಳಿಸಿದ್ದಾರೆ.