ಭಾರತದ ಮೇಲೆ ಶೇ.100ರ ವರೆಗೆ ತೆರಿಗೆ ವಿಧಿಸುವ ಬಿಲ್‌ಗೆ ಟ್ರಂಪ್ ಸಹಿ

Published : Sep 20, 2026, 12:35 PM IST
donald trump

ಸಾರಾಂಶ

ಅಮೆರಿಕದ ಸಂಸತ್ತಿನ ಅಂಗೀಕಾರ ಪಡೆದಿರುವ ರಷ್ಯಾದ ಮೇಲೆ ನಿರ್ಬಂಧ ಹೇರುವ ಮತ್ತು ರಷ್ಯಾದಿಂದ ತೈಲ, ಗ್ಯಾಸ್‌ ಆಮದು ಮಾಡಿಕೊಳ್ಳುತ್ತಿರುವ ಭಾರತ, ಚೀನಾದಂಥ ದೇಶಗಳ ಮೇಲೆ ಶೇ.100ರವರೆಗೆ ತೆರಿಗೆ ವಿಧಿಸಲು ಅವಕಾಶ ನೀಡುವ ಮಹತ್ವದ ವಿಧೇಯಕಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದಾರೆ.

ವಾಷಿಂಗ್ಟನ್: ಅಮೆರಿಕದ ಸಂಸತ್ತಿನ ಅಂಗೀಕಾರ ಪಡೆದಿರುವ ರಷ್ಯಾದ ಮೇಲೆ ನಿರ್ಬಂಧ ಹೇರುವ ಮತ್ತು ರಷ್ಯಾದಿಂದ ತೈಲ, ಗ್ಯಾಸ್‌ ಆಮದು ಮಾಡಿಕೊಳ್ಳುತ್ತಿರುವ ಭಾರತ, ಚೀನಾದಂಥ ದೇಶಗಳ ಮೇಲೆ ಶೇ.100ರವರೆಗೆ ತೆರಿಗೆ ವಿಧಿಸಲು ಅವಕಾಶ ನೀಡುವ ಮಹತ್ವದ ವಿಧೇಯಕಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದಾರೆ.

ಗುರುವಾರವಷ್ಟೇ ಈ ವಿಧೇಯಕಕ್ಕೆ ಅಮೆರಿಕ ಸಂಸತ್ತಿನ ಕೆಳಮನೆಯ ಅಂಗೀಕಾರ ದೊರಕಿತ್ತು. ಇದೀಗ ಟ್ರಂಪ್‌ ಸಹಿ ಹಾಕಿರುವುದರಿಂದ ಆ ವಿಧೇಯಕ ಈಗ ಕಾನೂನಿನ ರೂಪ ಪಡೆದುಕೊಂಡಿದೆ. ಹೀಗಾಗಿ ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ವಸ್ತುಗಳ ಮೇಲೆ ಶೇ.100ರ ವರೆಗೆ ತೆರಿಗೆ ಬೀಳುವ ಆತಂಕ ಇದೀಗ ಶುರುವಾಗಿದೆ.

ಭಾರತ, ಚೀನಾದಂಥ ದೇಶಗಳು ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದೇ ಉಕ್ರೇನ್ ಯುದ್ಧ ವಿಸ್ತರಣೆಯಾಗಲು ಕಾರಣವಾಗುತ್ತಿದೆ. ಈ ದೇಶಗಳು ಯುದ್ಧಕ್ಕೆ ಪರೋಕ್ಷ ಬೆಂಬಲ ಸೂಚಿಸುತ್ತಿವೆ ಎಂದು ಹಿಂದಿನಿಂದಲೂ ಆರೋಪಿಸುತ್ತಲೇ ಬರುತ್ತಿದ್ದ ಅಮೆರಿಕ, ಇದೀಗ ರಷ್ಯಾದ ತೈಲ ಮಾರಾಟಕ್ಕೆ ಕಡಿವಾಣ ಹಾಕಲು ಈ ಹೊಸ ಕಾನೂನಿನ ಮೊರೆ ಹೋಗಿದೆ.

ರಷ್ಯಾ ಮತ್ತು ಇರಾನ್‌ ಮೇಲೆ ನಿರ್ಬಂಧ ಹೇರುವ ಲಿಂಡ್ಸೆ ಒ ಗ್ರಹಾಂ ವಿಧೇಯಕ-2026 ಎಂದೇ ಕರೆಯಲ್ಪಡುವ ಈ ವಿಧೇಯಕದಡಿ ರಷ್ಯಾದ ಇಂಧನ ಕಂಪನಿಗಳು, ವ್ಯಕ್ತಿಗಳು, ಹಣಕಾಸು ಸಂಸ್ಥೆಗಳು, ರಷ್ಯಾವು ಅಂತಾರಾಷ್ಟ್ರೀಯ ನಿರ್ಬಂಧ ಉಲ್ಲಂಘಿಸಲು ನೆರವು ನೀಡುತ್ತಿರುವ ಹಡಗುಗಳ ಮೇಲೆ ನಿರ್ಬಂಧ ಹೇರಲು ಅವಕಾಶವಿದೆ.

ಅದೇ ರೀತಿ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ, ಗ್ಯಾಸ್‌ ಆಮದು ಮಾಡಿಕೊಳ್ಳುತ್ತಿರುವ ಚೀನಾ, ಭಾರತದಂಥ ದೇಶಗಳ ಮೇಲೆ ಶೇ.100ರ ವರೆಗೆ ತೆರಿಗೆ ವಿಧಿಸುವ ಅಧಿಕಾರ ಟ್ರಂಪ್‌ಗೆ ಸಿಗಲಿದೆ.

ಭಾರತದ ಮೇಲೆ ಏನು ಪರಿಣಾಮ?:

ಭಾರತವು ತನ್ನ ಬೇಡಿಕೆಯ .40ರಷ್ಟು ತೈಲವನ್ನು ರಷ್ಯಾದಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಒಂದು ವೇಳೆ ಮಧ್ಯಪ್ರಾಚ್ಯ ಸಂಘರ್ಷದ ಈ ಹೊತ್ತಿನಲ್ಲಿ ರಷ್ಯಾದಿಂದ ತೈಲ ಖರೀದಿಯನ್ನು ಭಾರತ ಕಡಿಮೆ ಮಾಡಿದರೆ ತೈಲ ಆಮದು ದರ ಹೆಚ್ಚಳವಾಗಿ ದೇಶದ ಆರ್ಥಿಕತೆ ಮೇಲೆ ಭಾರೀ ಹೊಡೆತ ಬೀಳಲಿದೆ. ಒಂದು ವೇಳೆ ತೈಲ ಖರೀದಿ ಮುಂದುವರಿಸಿದರೆ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಅಮೆರಿಕವು ಶೇ.100ರ ವರೆಗೆ ತೆರಿಗೆ ವಿಧಿಸುವ ಆತಂಕವಿದೆ.

ಯಾವ ದೇಶಗಳಿಗೆ ಆತಂಕ?

ಈ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸುವ ವೇಳೆ ಚೀನಾ, ಭಾರತ, ಯುಎಇ, ಟರ್ಕಿ, ಸಿಂಗಾಪುರ, ಅಜರ್‌ಬೈಜಾನ್‌, ಕಝಾಕಿಸ್ತಾನ, ಹಂಗೆರಿ, ಕಿರ್ಘಿಸ್ತಾನ್ ಮತ್ತು ಸ್ಲೋವಾಕಿಯಾದ ಹೆಸರನ್ನು ಡೆಮಾಕ್ರಟಿಕ್‌ ಪಕ್ಷದ ಸಂಸದ ಸ್ಟೆನಿ ಹೋಯರ್‌ ಪ್ರಸ್ತಾಪಿಸಿದ್ದರು. ಹೀಗಾಗಿ ಈ ದೇಶಗಳಿಗೆ ಹೆಚ್ಚುವರಿ ತೆರಿಗೆಯ ಆತಂಕ ಶುರುವಾಗಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಎಐ ನಂಬಿ ಚೀನಾ ಮೇಲೆ ಯುದ್ಧಕ್ಕೆ ಅಮೆರಿಕ ಸಜ್ಜು!
ಪಾಕ್‌ನ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಆತ್ಮಾಹತಿ ದಾಳಿ : 21 ಬಲಿ