ಬ್ರಿಟನ್‌ಗೆ ಮೊದಲ ಮುಸ್ಲಿಂ ಪ್ರಧಾನಿ?- ಎಪ್‌ಸ್ಟೀನ್‌ ಕೇಸಲ್ಲಿ ಸ್ಟಾರ್ಮರ್‌ಗೆ ಸಂಕಷ್ಟ

KannadaprabhaNewsNetwork |  
Published : Feb 10, 2026, 01:15 AM ISTUpdated : Feb 10, 2026, 03:42 AM IST
Shabana Mahmood

ಸಾರಾಂಶ

ಅಮೆರಿಕದ ಹೈಪ್ರೊಫೈಲ್‌ ಎಪ್‌ಸ್ಟೀನ್‌ ಲೈಂಗಿಕ ಹಗರಣ ಬಿರುಗಾಳಿ ಹಿನ್ನೆಲೆಯಲ್ಲಿ ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ರಾಜೀನಾಮೆ ನೀಡಬಹುದು. ಗೃಹ ಸಚಿವೆ ಶಬಾನಾ ಮಹಮೂದ್ ಅವರು ನೂತನ ಪ್ರಧಾನಿ ಆಗಬಹುದು ಎಂಬ ಗುಲ್ಲು ಬ್ರಿಟನ್‌ನಲ್ಲಿ ಹರಡಿದೆ.

 ಲಂಡನ್‌: ಅಮೆರಿಕದ ಹೈಪ್ರೊಫೈಲ್‌ ಎಪ್‌ಸ್ಟೀನ್‌ ಲೈಂಗಿಕ ಹಗರಣ ಬಿರುಗಾಳಿ ಹಿನ್ನೆಲೆಯಲ್ಲಿ ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ರಾಜೀನಾಮೆ ನೀಡಬಹುದು. ಗೃಹ ಸಚಿವೆ ಶಬಾನಾ ಮಹಮೂದ್ ಅವರು ನೂತನ ಪ್ರಧಾನಿ ಆಗಬಹುದು ಎಂಬ ಗುಲ್ಲು ಬ್ರಿಟನ್‌ನಲ್ಲಿ ಹರಡಿದೆ.

ಪಾಕಿಸ್ತಾನ ಮೂಲದವರಾದ ಶಬಾನಾ ಪ್ರಧಾನಿಯಾದರೆ, ಬ್ರಿಟನ್‌ನ ಮೊದಲ ಮುಸ್ಲಿಂ ಪ್ರಧಾನಿ ಎನ್ನಿಸಿಕೊಳ್ಳಲಿದ್ದಾರೆ. ಈ ಹಿಂದೆ ಭಾರತ ಮೂಲದವರಾದ ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿ ಆಗಿದ್ದರು. ಸಾದಿಕ್‌ ಖಾನ್‌ ಲಂಡನ್‌ ಮೇಯರ್‌ ಆಗುವ ಮೂಲಕ ಲಂಡನ್‌ ಮೇಯರ್‌ ಆದ ಮೊದಲ ಪಾಕಿಸ್ತಾನ ಮೂಲದವರು ಎನ್ನಿಸಿಕೊಂಡಿದ್ದರು.

ಸ್ಟಾರ್ಮರ್ ಮೇಲೇಕೆ ಒತ್ತಡ?:

ಎಪ್‌ಸ್ಟೀನ್‌ ಹಗರಣದಲ್ಲಿ ಹೆಸರಿರುವ ಮೆಂಡಲ್ಸನ್‌ ಅವರನ್ನು ಸ್ಟಾರ್ಮರ್‌, ಬ್ರಿಟನ್‌ನ ಅಮೆರಿಕ ರಾಯಭಾರಿ ಎಂದು ನೇಮಿಸಿದ್ದರು. ನೇಮಿಸಿದ್ದು ಸ್ಟಾರ್ಮರ್‌ ಆದರೂ ಇದು ತನ್ನ ಸಲಹೆ ಮೇರೆಗೆ ಆದ ನೇಮಕ ಎಂದು ಸ್ಟಾರ್ಮರ್‌ ಅವರ ಆಪ್ತ ಸಲಹೆಗಾರ ಮಾರ್ಗನ್‌ ಮೆಕ್‌ಸ್ವೀನಿ ಭಾನುವಾರ ರಾಜೀನಾಮೆ ನೀಡಿದ್ದರು. ಆದರೂ ನೇಮಿಸಿದ್ದು ಸ್ಟಾರ್ಮರ್ ಆದ ಕಾರಣ, ಅವರ ರಾಜೀನಾಮೆಗೂ ಒತ್ತಡ ಹೆಚ್ಚಿದೆ ಎನ್ನಲಾಗಿದೆ. ಹೀಗಾಗಿ ಶಬಾನಾ ಹೆಸರು ಮುಂಚೂಣಿಯಲ್ಲಿದೆ.

ಯಾರು ಶಬಾನಾ?:

ಶಬಾನಾ ಮಹಮೂದ್ ಅವರು ಬ್ರಿಟನ್‌ ಗೃಹ ಸಚಿವೆ ಸೇವೆ ಸಲ್ಲಿಸಿದ ಮೊದಲ ಮುಸ್ಲಿಂ ಮಹಿಳೆ. 1980ರಲ್ಲಿ ಬರ್ಮಿಂಗ್‌ಹ್ಯಾಂನಲ್ಲಿ ಪಾಕಿಸ್ತಾನದ ಪೋಷಕರಿಗೆ ಜನಿಸಿದ ಅವರು, ನಂತರ ಬಾಲ್ಯವನ್ನು ಸೌದಿ ಅರೇಬಿಯಾದಲ್ಲಿ ಕಳೆದರು. ಬಳಿಕ ಪುನಃ ಬ್ರಿಟನ್‌ಗೆ ಮರಳಿ ಆಕ್ಸ್‌ಫರ್ಡ್ ವಿವಿಯಲ್ಲಿ ಕಾನೂನು ಅಧ್ಯಯನ ಮಾಡಿದರು.

ಎಪ್‌ಸ್ಟೀನ್‌ ಕೇಸಲ್ಲಿ ಅಮೆರಿಕದಲ್ಲಿನ ಬ್ರಿಟನ್‌ ರಾಯಭಾರಿ ಮೆಂಡಲನ್ಸ್‌ ಹೆಸರು ಪ್ರಸ್ತಾಪ

ಈ ಹಿನ್ನೆಲೆಯಲ್ಲಿ ಮೆಂಡಲ್ಸನ್‌ ನೇಮಕಕ್ಕೆ ಶಿಫಾರಸು ಮಾಡಿದ್ದ ಸ್ಟಾರ್ಮರ್‌ ಆಪ್ತ ರಾಜೀನಾಮೆ

ಅದರ ಬೆನ್ನಲ್ಲೇ ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ರಾಜೀನಾಮೆಗೂ ಪಕ್ಷದಲ್ಲಿ ಹೆಚ್ಚಿದ ಒತ್ತಡ

ಒಂದು ವೇಳೆ ಸ್ಟಾರ್ಮರ್‌ ಹುದ್ದೆ ತ್ಯಜಿಸಿದರೆ ಶಬಾನಾ ಮಹಮೂದ್‌ಗೆ ಪ್ರಧಾನಿ ಹುದ್ದೆ ಸಂಭವ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ತನ್ನ ಡಿಎನ್‌ಎ ಬಳಸಿ ಸೂಪರ್‌ ರೇಸ್ ಸೃಷ್ಟಿಗೆ ಎಪ್ಸ್ಟೀನ್ ಪ್ಲಾನ್! 20 ಮಹಿಳೆಯರ ಗರ್ಭಿಣಿ ಮಾಡಲು ಬಯಸಿದ್ದ!
ಟೆಕ್ಸಾಸ್‌ ಮಾಲ್‌ಗಳು ಪಾಕ್‌ ರೀತಿ ಕಾಣ್ತಿವೆ!