ದೇಶದಲ್ಲಿ ಕಳೆದ ಕೆಲವು ದಿನದಿಂದ ನಡೆಯುತ್ತಿರುವ ಜೆನ್‌ಝೀ ಹಾಗೂ ಜನತಾ ದಂಗೆ- ಫ್ರಾನ್ಸ್‌ನಲ್ಲಿನ ದಂಗೆಗೆ ವಲಸಿಗರು ಕಾರಣ. ಪ್ಯಾರಿಸ್ ಶೀಘ್ರ ಮುಸ್ಲಿಂ ನಗರಿ ಆಗಲಿದೆ. ದೇಶದ ಗಡಿ ಮುಚ್ಚಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ವಾಷಿಂಗ್ಟನ್: ‘ಫ್ರಾನ್ಸ್‌ನಲ್ಲಿನ ದಂಗೆಗೆ ವಲಸಿಗರು ಕಾರಣ. ಪ್ಯಾರಿಸ್ ಶೀಘ್ರ ಮುಸ್ಲಿಂ ನಗರಿ ಆಗಲಿದೆ. ದೇಶದ ಗಡಿ ಮುಚ್ಚಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಜೆನ್‌ಝೀ ಹಾಗೂ ಜನತಾ ದಂಗೆ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದ ಟ್ರಂಪ್
ದೇಶದಲ್ಲಿ ಕಳೆದ ಕೆಲವು ದಿನದಿಂದ ನಡೆಯುತ್ತಿರುವ ಜೆನ್‌ಝೀ ಹಾಗೂ ಜನತಾ ದಂಗೆ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದ ಟ್ರಂಪ್, ‘ಫ್ರಾನ್ಸ್ ಹೊತ್ತಿ ಉರಿಯುತ್ತಿದೆ. ಸಂಪೂರ್ಣ ವಿಭಿನ್ನವಾದ ವಿಶ್ವದ ಭಾಗಗಳಿಂದ ಬಂದ, ಹೃದಯದ ತುಂಬಾ ದ್ವೇಷವನ್ನೇ ತುಂಬಿಕೊಂಡ ವಲಸಿಗರು, ಒಂದೊಮ್ಮೆ ಅದ್ಭುತ ದೇಶವಾಗಿದ್ದ ಫ್ರಾನ್ಸ್ ಅನ್ನು ಧ್ವಂಸಗೊಳಿಸಿದ್ದಾರೆ. ಈಗಾಲಾದರೂ ನಿಮ್ಮ ದೇಶದ ಗಡಿ ಭಾಗವನ್ನು ಮುಚ್ಚಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಿ. ಕಾಲ ಮೀರುವ ಮುನ್ನ ಎಚ್ಚೆತ್ತುಕೊಳ್ಳಿ’ ಎಂದರು.
ಫ್ರಾನ್ಸ್‌ನಲ್ಲಿ ದೊಡ್ಡ ತಪ್ಪು ಮಾಡುತ್ತಿದ್ದೀರಿ
‘ಬಹಳ ಹಿಂದೆ, ನೀವು ಫ್ರಾನ್ಸ್‌ನಲ್ಲಿ ದೊಡ್ಡ ತಪ್ಪು ಮಾಡುತ್ತಿದ್ದೀರಿ. ನೀವು ಜಗತ್ತಿನ ಎಲ್ಲರನ್ನೂ ಒಳಗೆ ಬರಲು ಬಿಡುತ್ತಿದ್ದೀರಿ. ಎಂದು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್‌ಗೆ ಹೇಳಿದ್ದೆ’ ಎಂದು ಸ್ಮರಿಸಿದ ಟ್ರಂಪ್, ‘ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
