ಅಮೆರಿಕ- ಇರಾನ್‌ ಯುದ್ಧ ಭಾಗ 1 ಅಂತ್ಯ, ಭಾಗ 2 ಶೀಘ್ರ?!

Published : May 02, 2026, 11:03 AM IST
War

ಸಾರಾಂಶ

ಇರಾನ್‌ ಜತೆಗಿನ ಯುದ್ಧವು ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಣೆಯಾದ ದಿನದಿಂದಲೇ ಮುಕ್ತಾಯಗೊಂಡಿದೆ ಎಂದು ಅಮೆರಿಕದ ಟ್ರಂಪ್‌ ಸರ್ಕಾರ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಈ ಮೂಲಕ 60 ದಿನಗಳಿಗಿಂತ ಹೆಚ್ಚು ದಿನ ಯುದ್ಧ ಮುಂದುವರೆಸುವುದಿದ್ದರೆ ಅಮೆರಿಕ ಸಂಸತ್ತಿನ ಅನುಮತಿ ಪಡೆಯಬೇಕಾದ ಅನಿವಾರ್ಯತೆಯಿಂದ ತಪ್ಪಿಸಿಕೊಳ್ಳಲು ಹೊಸ ತಂತ್ರ ಹೂಡಿರುವಂತಿದೆ.

 ವಾಷಿಂಗ್ಟನ್‌: ಇರಾನ್‌ ಜತೆಗಿನ ಯುದ್ಧವು ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಣೆಯಾದ ದಿನದಿಂದಲೇ ಮುಕ್ತಾಯಗೊಂಡಿದೆ ಎಂದು ಅಮೆರಿಕದ ಟ್ರಂಪ್‌ ಸರ್ಕಾರ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಈ ಮೂಲಕ 60 ದಿನಗಳಿಗಿಂತ ಹೆಚ್ಚು ದಿನ ಯುದ್ಧ ಮುಂದುವರೆಸುವುದಿದ್ದರೆ ಅಮೆರಿಕ ಸಂಸತ್ತಿನ ಅನುಮತಿ ಪಡೆಯಬೇಕಾದ ಅನಿವಾರ್ಯತೆಯಿಂದ ತಪ್ಪಿಸಿಕೊಳ್ಳಲು ಹೊಸ ತಂತ್ರ ಹೂಡಿರುವಂತಿದೆ.

1973ರ ಕಾನೂನು ಪ್ರಕಾರ ಅಮೆರಿಕ ಅಧ್ಯಕ್ಷರು ಯಾವುದೇ ದೇಶದ ಮೇಲೆ 60 ದಿನಗಳಿಗಿಂತ ಹೆಚ್ಚಿನ ಅವಧಿಗೆ ಯುದ್ಧ ಮಾಡಬೇಕಿದ್ದರೆ ಸಂಸತ್ತಿನ ಅನುಮತಿ ಅಗತ್ಯ. ಫೆ.28ರಂದು ಆರಂಭವಾಗಿರುವ ಇರಾನ್‌ ಜತೆಗಿನ ಯುದ್ಧದ 60 ದಿನಗಳ ಅವಧಿ ಶುಕ್ರವಾರಕ್ಕೆ ಕೊನೆಗೊಂಡಿದೆ. ಹೀಗಾಗಿ ಈ ಯುದ್ಧ ಮುಂದುವರಿಸಬೇಕಿದ್ದರೆ ಸರ್ಕಾರಕ್ಕೆ ಸಂಸತ್ತಿನ ಅಂಗೀಕಾರ ಪಡೆಯುವುದು ಅನಿವಾರ್ಯ. ಇದರಿಂದ ಪಾರಾಗಲು ಟ್ರಂಪ್‌ ಆಡಳಿತವು ಯುದ್ಧ ಈಗಾಗಲೇ ಮುಕ್ತಾಯಗೊಂಡಿದೆ ಎಂದು ಹೇಳುತ್ತಿದೆ ಎನ್ನಲಾಗಿದೆ.

ರಕ್ಷಣಾ ಸಚಿವ ಪೀಟ್‌ ಹೆಗ್ಸೆತ್‌, ಗುರುವಾರ ಸೆನೆಟ್‌ಗೆ ನೀಡಿದ ಹೇಳಿಕೆಯಲ್ಲಿ ಕದನ ವಿರಾಮದೊಂದಿಗೆ ಯುದ್ಧಕ್ಕೆ ಅಂತ್ಯ ಬಿದ್ದಿದೆ ಎಂದು ಹೇಳಿದ್ದಾರೆ.

ಇರಾನ್‌ ಜತೆಗಿನ ಸಂಘರ್ಷವು ಫೆ.28ರಂದು ಆರಂಭ

ಇರಾನ್‌ ಜತೆಗಿನ ಸಂಘರ್ಷವು ಫೆ.28ರಂದು ಆರಂಭವಾಗಿದ್ದು, ಏ.8ರಂದು ಕದನ ವಿರಾಮ ಘೋಷಣೆಯಾಗಿತ್ತು. ಆ ಬಳಿಕ ಎರಡೂ ದೇಶಗಳ ನಡುವೆ ಈವರೆಗೆ ಯಾವುದೇ ಗುಂಡಿನ ಚಕಮಕಿ ನಡೆದಿಲ್ಲ.

ಆದರೆ, ಅಮೆರಿಕದ ಪ್ರತಿಪಕ್ಷ ಮಾತ್ರ ಟ್ರಂಪ್‌ ಸರ್ಕಾರದ ಈ ಹೇಳಿಕೆಯನ್ನು ಖಂಡಿಸಿದೆ. ಕಾನೂನಿನಲ್ಲಿ ಈ ರೀತಿಯ ತಂತ್ರಗಾರಿಕೆಗೆ ಯಾವುದೇ ಅವಕಾಶವೇ ಇಲ್ಲ. ಇರಾನ್‌ ಯುದ್ಧದ ವಿಚಾರದಲ್ಲಿ ಟ್ರಂಪ್‌ ಸರ್ಕಾರ ಸಂಸತ್ತಿನ ಅಂಗೀಕಾರ ಪಡೆಯುವುದು ಅನಿವಾರ್ಯ ಎಂದು ಹೇಳಿದೆ.

ಯಾಕೆ ಈ ರೀತಿ ಮಾಡಿರಬಹುದು?:

ಅಮೆರಿಕದ ಯುದ್ಧಾಧಿಕಾರದ ನಿಯಮದ ಪ್ರಕಾರ, ದೇಶದ ಅಧ್ಯಕ್ಷರು ಸಂಸತ್ತಿನ ಅನುಮತಿ ಇಲ್ಲದೆ ಕೇವಲ 60 ದಿನಗಳ ಕಾಲವಷ್ಟೇ ಯುದ್ಧ ನಡೆಸಬಹುದಾಗಿದೆ. ಆ ಬಳಿಕ ಅವರು ಯುದ್ಧ ನಿಲ್ಲಿಸಬೇಕು ಅಥವಾ ಸಂಸತ್ತಿನ ಅನುಮತಿ ಪಡೆಯಬೇಕು ಅಥವಾ 30 ದಿನಗಳ ಕಾಲ ಮತ್ತೆ ಯುದ್ಧ ಮುಂದುವರಿಸುವ ಅನುಮತಿ ಕೇಳಬೇಕಾಗುತ್ತದೆ. ಈ ಯುದ್ಧ ಆರಂಭವಾಗಿದ್ದು ಫೆ.28ರಂದು. ಇರಾನ್‌ ವಿಚಾರದಲ್ಲಿ 60 ದಿನಗಳ ಯುದ್ಧಾಧಿಕಾರ ಶುಕ್ರವಾರಕ್ಕೆ ಮುಕ್ತಾಯವಾಗಲಿದೆ. ಯುದ್ಧ ಮುಂದುವರಿಸಬೇಕಿದ್ದರೆ ಸಂಸತ್ತಿನ ಅನುಮತಿ ಕೇಳಬೇಕು. ಇಂಥ ಇಕ್ಕಟ್ಟಿನ ಸ್ಥಿತಿಯಿಂದ ಪಾರಾಗಲು ಟ್ರಂಪ್‌ ಆಡಳಿತ ಇಂಥ ಹೇಳಿಕೆ ನೀಡಿದೆ ಎನ್ನಲಾಗಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಇಸ್ರೇಲ್‌ಗೆ ಅಮೆರಿಕದಿಂದ 6500 ಟನ್‌ ಶಸ್ತ್ರ: ಮತ್ತೆ ಯುದ್ಧ ಆರಂಭ?
ಕಾಶ್ಮೀರದಲ್ಲಿ ಮತ್ತೊಂದು ದಾಳಿಗೆ ಪಾಕ್‌ ಸಂಚು!