ಇರಾನ್‌ ದಾಳಿ ಅಚ್ಚರಿ, ಆಘಾತ ತಂದಿದೆ : ಟ್ರಂಪ್‌

KannadaprabhaNewsNetwork |  
Published : Mar 18, 2026, 01:15 AM IST
Donald Trump

ಸಾರಾಂಶ

ಅಮೆರಿಕ-ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಯುದ್ಧ 3ನೇ ವಾರ ತಲುಪಿರುವ ನಡುವೆಯೇ, ‘ಕೊಲ್ಲಿ ಪ್ರದೇಶದಲ್ಲಿನ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಇರಾನ್‌ ದಾಳಿಯಿಂದ ಆಘಾತವಾಯಿತು. ಈ ದಾಳಿಯನ್ನು ನಾವ್ಯಾರೂ ಊಹಿಸಿರಲಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಹೇಳಿಕೆ ನೀಡಿದ್ದಾರೆ.

 ವಾಷಿಂಗ್ಟನ್‌: ಅಮೆರಿಕ-ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಯುದ್ಧ 3ನೇ ವಾರ ತಲುಪಿರುವ ನಡುವೆಯೇ, ‘ಕೊಲ್ಲಿ ಪ್ರದೇಶದಲ್ಲಿನ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಇರಾನ್‌ ದಾಳಿಯಿಂದ ಆಘಾತವಾಯಿತು.  

ದಾಳಿಯನ್ನು ನಾವ್ಯಾರೂ ಊಹಿಸಿರಲಿಲ್ಲ

ಈ ದಾಳಿಯನ್ನು ನಾವ್ಯಾರೂ ಊಹಿಸಿರಲಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಹೇಳಿಕೆ ನೀಡಿದ್ದಾರೆ.‘ಇರಾನ್‌ ಮಧ್ಯಪ್ರಾಚ್ಯದ ದೇಶಗಳ ಮೇಲೆ ದಾಳಿ ಮಾಡಬಾರದಿತ್ತು. ಯಾರೂ ಅದನ್ನು ನಿರೀಕ್ಷಿಸಿರಲಿಲ್ಲ. ನಮಗೆ ಆಘಾತವಾಯಿತು. ಯಾರೂ ಇಲ್ಲ, ಯಾರೂ ಇಲ್ಲ.. ತಜ್ಞರು ಸಹ ಅವರು ದಾಳಿ ಮಾಡುತ್ತಾರೆಂದು ಭಾವಿಸಿರಲಿಲ್ಲ’ ಎಂದು ಟ್ರಂಪ್‌ ಹೇಳಿದ್ದಾರೆ.

ಆದರೆ ಅಮೆರಿಕದ ಅಧಿಕಾರಿಗಳು ಮತ್ತು ಗುಪ್ತಚರ ಮೂಲಗಳು ಸಂಘರ್ಷ ಪ್ರಾರಂಭವಾಗುವ ಮೊದಲೇ ಅಂತಹ ಪ್ರತೀಕಾರವನ್ನು ನಿರೀಕ್ಷಿಸಿದ್ದರು ಎಂದು ರಾಯಿಟರ್ಸ್ ವರದಿ ಮಾಡಿದೆ.ಈ ನಡುವೆ ಹೋರ್ಮಜ್‌ ಜಲಸಂಧಿಯಲ್ಲಿ ವಾಣಿಜ್ಯ ನೌಕೆಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಯುದ್ಧನೌಕೆ ನಿಯೋಜನೆಗೆ ಮಿತ್ರ ದೇಶಗಳು ಕೈಕೊಟ್ಟ ಬೆನ್ನಲ್ಲೇ, ನಮಗೆ ಯಾರ ನೆರವೂ ಬೇಕಿಲ್ಲ, ನಾವು ಏಕಾಂಗಿಯಾಗಿ ಜಲಸಂಧಿ ಕಾಯುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗೊಣಗಿದ್ದಾರೆ. 

ನಮಗೆ ಯಾರ ನೆರವೂ ಬೇಕಿಲ್ಲ

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್‌, ‘ನಮಗೆ ಯಾರ ನೆರವೂ ಬೇಕಿಲ್ಲ. ನಾವು ಇಡೀ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ದೇಶ. ನಾವು ಇಡೀ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಮಿಲಿಟರಿ ಹೊಂದಿದ್ದೇವೆ’ ಎಂದಿದ್ದಾರೆ. 

ಹೋರ್ಮಜ್‌ ಜಲಸಂಧಿ 4-5 ದೇಶಗಳನ್ನು ಹೊರತುಪಡಿಸಿ ಉಳಿದ ದೇಶಗಳ ತೈಲ ಹಡಗು ಸಂಚಾರಕ್ಕೆ ಇರಾನ್‌ ತಡೆಯೊಡ್ಡಿದೆ. ಹೀಗಾಗಿ ಯುದ್ಧನೌಕೆ ನಿಯೋಜನೆ ಮೂಲಕ ತೈಲ ನೌಕೆ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ಚೀನಾ, ಜಪಾನ್‌, ದ.ಕೊರಿಯಾ ಸೇರಿದಂತೆ ವಿವಿಧ ದೇಶಗಳು ಮತ್ತು ನ್ಯಾಟೋ ಸೇನಾ ಕೂಟಕ್ಕೆ ಟ್ರಂಪ್ ಮನವಿ ಮಾಡಿದ್ದರು. ಆದರೆ ಕೆಲ ದೇಶಗಳು ನೆರವಾಗಿ ಈ ಪ್ರಸ್ತಾಪ ತಿರಸ್ಕರಿಸಿದ್ದರೆ, ಇನ್ನು ಕೆಲ ದೇಶಗಳು ಮೌನವಾಗಿಯೇ ಅಸಮ್ಮತಿ ವ್ಯಕ್ತಪಡಿಸಿದ್ದವು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

‘ಒನ್‌ ಬ್ಯಾಟಲ್‌ ಆಫ್ಟರ್‌ ಅನದರ್‌’ಗೆ ‘ಅತ್ಯುತ್ತಮ ಚಿತ್ರ’ ಆಸ್ಕರ್‌ ಗೌರವ
16ನೇ ದಿನವೂ ಕೊಲ್ಲಿ ಯುದ್ಧ ಬಿರುಸು - ಏರ್ಪೋರ್ಟ್‌, ತೈಲ ಕೇಂದ್ರ, ಸೇನಾ ನೆಲೆಗಳೇ ಟಾರ್ಗೆಟ್‌