ವಾಷಿಂಗ್ಟನ್: ಅರುಣಾಚಲ ಪ್ರದೇಶ ನಮಗೆ ಸೇರಿದ ಭಾಗ ಎಂದು ಇತ್ತೀಚೆಗೆ ಚೀನಾ ರಕ್ಷಣಾ ಇಲಾಖೆಯ ವಾದವನ್ನು ತಿರಸ್ಕರಿಸಿರುವ ಅಮೆರಿಕ, ಅರುಣಾಚಲ ಪ್ರದೇಶದ ಭಾರತದ ಅವಿಭಾಜ್ಯ ಅಂಗ.
ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಳಿದ ಯಾವುದೇ ಪ್ರದೇಶಗಳ ಮೇಲೆ ಹಕ್ಕು ಸಾಧಿಸುವ ಚೀನಾದ ಯತ್ನವನ್ನು ಪ್ರಬಲವಾಗಿ ವಿರೋಧಿಸುವುದಾಗಿ ಹೇಳಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಚೀನಾ, ‘ಟಿಬೆಟ್‌ನ ದಕ್ಷಿಣ ಭಾಗದಲ್ಲಿ ಬರುವ ಝಾಂಗ್‌ನಾನ್ (ಅರುಣಾಚಲಪ್ರದೇಶ) ಚೀನಾಕ್ಕೆ ಸೇರಿದ ಪ್ರದೇಶ.
ಅರುಣಾಚಲ ಎಂದು ಕರೆಯಲ್ಪಡುವ ಈ ಭಾಗವನ್ನು ಎಂದಿಗೂ ಭಾರತದ ಭಾಗವೆಂದು ಒಪ್ಪುವುದಿಲ್ಲ. ಇಂಥ ವಾದವನ್ನು ನಾವು ಪ್ರಬಲವಾಗಿ ವಿರೋಧಿಸುತ್ತೇವೆ ಎಂದಿತ್ತು.
ಈ ಹೇಳಿಕೆಯನ್ನು ಭಾರತ ಸರ್ಕಾರ ಕೂಡಾ ಹಾಸ್ಯಾಸ್ಪದ ಎಂದು ಟೀಕಿಸಿತ್ತು. ಅದರ ಬೆನ್ನಲ್ಲೇ ಇದೀಗ ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರ ವೇದಾಂತ್ ಪಟೇಲ್ ಕೂಡಾ ಚೀನಾ ವಾದವನ್ನು ತಿರಸ್ಕರಿಸಿದ್ದಾರೆ. ಅದರ ಬೆನ್ನಲ್ಲೇ ಅಮೆರಿಕದ ನಿಲುವನ್ನು ಪ್ರಬಲವಾಗಿ ವಿರೋಧಿಸುವುದಾಗಿ ಚೀನಾ ಹೇಳಿದೆ.